ಲೋಕಸಭೆಗೆ ಮತಬೇಟೆ: ಇಂದಿನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲಿರುವ ರಾಹುಲ್ ಗಾಂಧಿ!

Bharat Jodo Nyay Yatra: ಬೆಳಗ್ಗೆ 11ಗಂಟೆಗೆ ಇಂಫಾಲ ವಿಮಾನ ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣಿಸಲಿರುವ ರಾಹುಲ್ ಗಾಂಧಿ ಅವರು ಮೊದಲು ಖೋಂಗ್‌ಜೋಮ್ ಯುದ್ಧ ಸ್ಮಾರಕಕ್ಕೆ ತೆರಳಿ ನಂತರ ಸಭೆಯ ಸ್ಥಳವನ್ನು ತಲುಪಲಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಮಣಿಪುರಕ್ಕೆ ಆಗಮಿಸಲಿದ್ದಾರೆ.

Written by - Puttaraj K Alur | Last Updated : Jan 14, 2024, 10:55 AM IST
  • ಕಾಂಗ್ರೆಸ್‍ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಇಂದು ಮಣಿಪುರದಿಂದ ಪ್ರಾರಂಭವಾಗಲಿದೆ
  • ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮೂಲಕ ರಾಹುಲ್ ಗಾಂಧಿ ಲೋಕಸಭೆಯ ಮತಬೇಟೆ
  • ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಇತ್ತೀಚಿನ ಅಪ್‍ಡೇಟ್‍ಗಳ ಸಂಪೂರ್ಣ ಮಾಹಿತಿ ತಿಳಿಯಿರಿ
ಲೋಕಸಭೆಗೆ ಮತಬೇಟೆ: ಇಂದಿನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲಿರುವ ರಾಹುಲ್ ಗಾಂಧಿ! title=
‘ಭಾರತ್ ಜೋಡೋ ನ್ಯಾಯ್ ಯಾತ್ರೆ’

ನವದೆಹಲಿ: ಕಾಂಗ್ರೆಸ್‍ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಇಂದು ಮಣಿಪುರದಿಂದ ಪ್ರಾರಂಭವಾಗಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ ಯಾತ್ರೆ’ಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 2ನೇ ಯಾತ್ರೆ ಇದಾಗಿದೆ. ಈ ಬಾರಿ ಅವರು ದೇಶದ ಪೂರ್ವ ಭಾಗದಿಂದ ಪಶ್ಚಿಮದ ಕಡೆಗೆ ಮೆರವಣಿಗೆ ನಡೆಸಲಿದ್ದಾರೆ. ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ತೌಬುಲ್ ಜಿಲ್ಲೆಯ ಖೋಂಗ್ಜಾಮ್ ಪ್ರದೇಶದಿಂದ ಪ್ರಾರಂಭವಾಗುತ್ತದೆ.

ಬೆಳಗ್ಗೆ 11ಗಂಟೆಗೆ ಇಂಫಾಲ ವಿಮಾನ ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣಿಸಲಿರುವ ರಾಹುಲ್ ಗಾಂಧಿ ಅವರು ಮೊದಲು ಖೋಂಗ್‌ಜೋಮ್ ಯುದ್ಧ ಸ್ಮಾರಕಕ್ಕೆ ತೆರಳಿ ನಂತರ ಸಭೆಯ ಸ್ಥಳವನ್ನು ತಲುಪಲಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಮಣಿಪುರಕ್ಕೆ ಆಗಮಿಸಲಿದ್ದಾರೆ. ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಮೂಲಕ ಕಾಂಗ್ರೆಸ್ ಈಶಾನ್ಯ ಮತ್ತು ಹಿಂದಿ ಹೃದಯ ಭಾಗದ ಮತದಾರರ ಮೇಲೆ ಕಣ್ಣಿಟ್ಟಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮತ್ತು ಎಸಿ-ಎಸ್‌ಟಿ ಬೆಲ್ಟ್ ವ್ಯಾಪ್ತಿಯ ಮತಬೇಟೆಗೆ ಮುಂದಾಗಿದೆ. ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಇತ್ತೀಚಿನ ಅಪ್‍ಡೇಟ್‍ಗಳು 

- ದೆಹಲಿಯಲ್ಲಿ ಮಂಜಿನಿಂದಾಗಿ ರಾಹುಲ್ ಗಾಂಧಿ ಅವರ ವಿಮಾನ ವಿಳಂಬವಾಗಿದೆ. ವಿಶೇಷ ಇಂಡಿಗೋ ವಿಮಾನದ ಮೂಲಕ ರಾಹುಲ್ ಗಾಂಧಿ ಇಂಫಾಲ್‍ಗೆ ತೆರಳಿ ಅಲ್ಲಿಂದ ರ್ಯಾಲಿ ಸ್ಥಳಕ್ಕೆ ತಲುಪಲಿದ್ದಾರೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನಾಯಕರೊಂದಿಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ್ದು, ವಿಮಾನ ಹತ್ತಲು ಮಂಜು ತೆರವುಗೊಳ್ಳಲು ಕಾಯುತ್ತಿದ್ದಾರೆ.

ಇಂದು ರಾಹುಲ್ ಗಾಂಧಿಯವರು ಮೊದಲು ಮಣಿಪುರದ ಖೋಂಗ್‌ಜೋಮ್‌ನಲ್ಲಿ ಸಭೆ ನಡೆಸಲಿದ್ದಾರೆ. ನಂತರ ಅವರು ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯನ್ನು ಪ್ರಾರಂಭಿಸುತ್ತಾರೆ. ನಾಳೆ ರಾತ್ರಿ ಇಂಫಾಲ್ ಪೂರ್ವದಲ್ಲಿ ರಾಹುಲ್ ಗಾಂಧಿಯವರ ಈ ಯಾತ್ರೆ ನಿಲ್ಲಲಿದೆ. 2ನೇ ದಿನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಸೇನಾಪತಿ ಕಡೆಗೆ ಸಾಗಲಿದೆ. ನಂತರ ಕಾಂಗ್‌ಪೋಕ್ಪಿ ಮೂಲಕ ನಾಗಾಲ್ಯಾಂಡ್‌ಗೆ ತೆರಳಲಿದೆ. ಈ ಪ್ರಯಾಣವು ಮಾರ್ಚ್ 20ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ: ದೆಹಲಿ ಪೊಲೀಸ್ ಅಪರಾಧ ವಿಭಾಗದ ಮೊದಲ ಮಹಿಳಾ ಮುಖ್ಯಸ್ಥೆ ಶಾಲಿನಿ ಸಿಂಗ್ ಯಾರು?

- ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮೂಲಕ ಬಿಜೆಪಿ ಪ್ರಬಲ ಹಿಡಿತ ಹೊಂದಿರುವ ಹಿಂದಿ ಬೆಲ್ಟ್‌ನ ಮತಗಳನ್ನು ಗೆಲ್ಲಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಹಿಂದಿ ಹೃದಯಭಾಗದ ಸುಮಾರು 100 ಸ್ಥಾನಗಳಿಂದ ಪ್ರಾರಂಭವಾಗುತ್ತದೆ. ಇದು ಯುಪಿ, ಎಂಪಿ, ಛತ್ತೀಸ್‌ಗಢ, ಜಾರ್ಖಂಡ್, ಬಿಹಾರ ಮತ್ತು ರಾಜಸ್ಥಾನದ ಸ್ಥಾನಗಳನ್ನು ಒಳಗೊಂಡಿದೆ.

- ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಗಮನವು SC-STಗಾಗಿ ಮೀಸಲಾದ ಸ್ಥಾನಗಳ ಮೇಲೆಯೂ ಇದೆ. ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಎಸ್‌ಸಿ-ಎಸ್‌ಟಿಗೆ ಮೀಸಲಾದ 30 ಲೋಕಸಭಾ ಸ್ಥಾನಗಳಿಂದ ಪ್ರಾರಂಭವಾಗಲಿದೆ. ಈ ಯಾತ್ರೆ ಪ್ರಾರಂಭವಾಗುವ ಸ್ಥಾನಗಳಲ್ಲಿ 13 ಸ್ಥಾನಗಳನ್ನು ಎಸ್‌ಸಿ ಮತ್ತು 17 ಸ್ಥಾನಗಳನ್ನು ಎಸ್‌ಟಿಗೆ ಮೀಸಲಿಡಲಾಗಿದೆ.

- ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಆಯೋಜಿಸುವ ಮೂಲಕ ಕಾಂಗ್ರೆಸ್ ಯುಪಿ, ಬಿಹಾರ ಮತ್ತು ಜಾರ್ಖಂಡ್‌ನ ಅಲ್ಪಸಂಖ್ಯಾತ ಮತದಾರರನ್ನು ತನ್ನ ತೆಕ್ಕೆಗೆ ಸೇರಿಸಲು ಬಯಸಿದೆ. ಇದುವರೆಗೂ ಪ್ರಾದೇಶಿಕ ಪಕ್ಷಗಳಿಗೆ ಯಾರು ಬೆಂಬಲ ನೀಡುತ್ತಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಂತೆ ಅಲ್ಪಸಂಖ್ಯಾತ ಮತದಾರರು ತಮ್ಮತ್ತ ವಾಲುತ್ತಾರೆ ಎಂಬುದು ಕಾಂಗ್ರೆಸ್ ಆಶಯವಾಗಿದೆ.

- ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮೂಲಕ ರಾಹುಲ್ ಗಾಂಧಿಯವರು ದೇಶದ ಜನರೊಂದಿಗೆ ಮಾತನಾಡುತ್ತಾರೆಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಇದು ರಾಜಕೀಯ ಪಕ್ಷದ ಸೈದ್ಧಾಂತಿಕ ಪಯಣ. ಇದು ಚುನಾವಣಾ ಯಾತ್ರೆಯಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿPhoto Gallery: ಪ್ರಧಾನಿ ಮೋದಿಯಿಂದ ದೇಶದ ಅತೀ ಉದ್ದದ ಅಟಲ್ ಸೇತುವೆ ಲೋಕಾರ್ಪಣೆ!

- ಕಾಂಗ್ರೆಸ್‍ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮೇಲೂ ಬಿಜೆಪಿಯ ದಾಳಿ ಆರಂಭವಾಗಿದೆ. ಈ ಸಂಪೂರ್ಣ ಯಾತ್ರೆಗೆ ಬಿಜೆಪಿ ನಾಯಕರು ಬೇರೆ ಬೇರೆ ಹೆಸರುಗಳನ್ನು ಇಡಲಾರಂಭಿಸಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈ ಯಾತ್ರೆಯ ಹೆಸರನ್ನು ಬದಲಾಯಿಸಿದ್ದಾರೆ. ಈ ಯಾತ್ರೆಯ ಹೆಸರು ‘ಬ್ರೇಕ್ ಇಂಡಿಯಾ ಅನ್ಯಾಯ ಯಾತ್ರೆ’ ಎಂದು ಅವರು ಟೀಕಿಸಿದ್ದಾರೆ. ಶ್ರೀರಾಮನನ್ನು ಗೌರವಿಸದ ವ್ಯಕ್ತಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಯಲ್ಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ಪ್ರಯಾಣದ ಹೆಸರು ಬ್ರೇಕ್ ಇಂಡಿಯಾ ಅನ್ಯಾಯ ಯಾತ್ರೆ’ ಎಂದು ಅವರು ಕುಟುಕಿದ್ದಾರೆ.

- ಕಾಂಗ್ರೆಸ್‍ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮೇಲೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಹ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ‘ಭಾರತ್ ಜೋಡೋ ಯಾತ್ರೆ’ಯ ಅಗತ್ಯವಿಲ್ಲ, ಆದರೆ ಜ್ಞಾನ ಯಾತ್ರೆ ಅಗತ್ಯವಿದೆ ಎಂದು ಟೀಕಸಿದ್ದಾರೆ. ಹಳ್ಳಿಯಲ್ಲಿರುವ ಯಾವುದೇ ಜ್ಞಾನವುಳ್ಳ ವ್ಯಕ್ತಿ ಅವರಿಗೆ ಜ್ಞಾನವನ್ನು ನೀಡುತ್ತಾನೆ ಅಂತಾ ಕುಟುಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News