`ನಾನು ಮಾಡಿದ ಕೆಲಸಕ್ಕೆ ನನಗೆ ಪಶ್ಚಾತಾಪವಿದೆ`, ಅಟ್ಲಾಸ್ ಕಂಪನಿ ಮಾಲೀಕರ ಪತ್ನಿ ಹೀಗೆ ಹೇಳಿದ್ದೇಕೆ?
ಅಟ್ಲಾಸ್ ಸೈಕಲ್ ಕಂಪನಿ ಮಾಲೀಕ ಸಂಜಯ್ ಕಪೂರ್ ಪತ್ನಿ ನತಾಶಾ ಕಪೂರ್ ಆತ್ಮಹತ್ಯೆ ಪ್ರಕರಣದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ.
ನವದೆಹಲಿ:ಅಟ್ಲಾಸ್ ಸೈಕಲ್ ಕಂಪನಿ ಮಾಲೀಕ ಸಂಜಯ್ ಕಪೂರ್ ಪತ್ನಿ ನತಾಶಾ ಕಪೂರ್ ಆತ್ಮಹತ್ಯೆ ಪ್ರಕರಣದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ. ನತಾಶಾ ಕಪೂರ್ ಆತ್ಮಹತ್ಯೆಗೆ ಶರಣಾದ ಜಾಗದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಮ್ಮ ಪತಿ ಹಾಗೂ ಮಕ್ಕಳ ಹೆಸರಿನಲ್ಲಿ ಬರೆದ ಈ ಪತ್ರದಲ್ಲಿ ನತಾಶಾ ತಮ್ಮ ಸಾವಿನ ಬಳಿಕ ಇಲ್ಲರೂ ಕಾಳಜಿ ವಹಿಸಿ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಾವಿಗೆ ಯಾರೂ ಹೊಣೆಗಾರರಲ್ಲ ಎಂದೂ ಸಹ ಹೇಳಿದ್ದಾರೆ. ನಾನು ಮಾಡಿರುವ ಒಂದು ಕೆಲಸಕ್ಕೆ ನನಗೆ ಪಶ್ಚಾತಾಪವಿದ್ದು, ಅದನ್ನು ನೆನೆಸಿಕೊಂಡರೆ ನಾಚಿಕೆಯಾಗುತ್ತದೆ ಮತ್ತು ಆ ಕೆಲಸ ತಾವು ಮಾಡಬಾರದಿತ್ತು ಎಂದಿದ್ದಾರೆ. ಸದ್ಯ ಪೊಲೀಸರು ನತಾಶಾ ಯಾಕೆ ಈ ರೀತಿ ಪತ್ರ ಬರೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಹಂತದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು ನತಾಶಾ ಡಿಪ್ರೆಶನ್ ಅಥವಾ ಯಾವುದೇ ರೀತಿಯ ಮಾನಸಿಕ ಅಥವಾ ಶಾರೀರಿಕ ಕಾಯಿಲೆಯಿಂದ ಬಳಲುತ್ತಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಬುಧವಾರ RML ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಬಳಿಕ ನತಾಶಾ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಸದ್ಯ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಫೆಬ್ರವರಿ 21ರಂದು ದೆಹಲಿಯ ಔರಂಗಜೆಬ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅಟ್ಲಾಸ್ ಕಂಪನಿಯ ಮಾಲೀಕರಾಗಿರುವ ಸಂಜಯ್ ಕಪೂರ್ ತಮ್ಮ ಪತ್ನಿ ಮತ್ತು ಮೂವರು ಮಕ್ಕಳ ಜೊತೆ ಇದೆ ಮನೆಯಲ್ಲಿ ವಾಸವಾಗಿದ್ದರು ಎಂದಿದ್ದಾರೆ. ನತಾಶಾ ಆತ್ಮಹತ್ಯೆ ಮಾಡಿಕೊಂಡ ವೇಳೆ ಅವರ ಕೋಣೆಯ ಬಾಗಿಲು ತೆಗೆದುಕೊಂಡಿತ್ತು ಎಂದಿರುವ ಪೊಲೀಸರು, ತನಿಖೆಯಲ್ಲಿ ವಿವಿಧ ಕೋನಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನಾ ಸ್ಥಳದಿಂದ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಕೆಲ ಸ್ಯಾಂಪಲ್ ಗಳನ್ನೂ ಸಹ ಪಡೆದುಕೊಂಡಿದ್ದಾರೆ.