ನವದೆಹಲಿ: National Hydrogen Mission - 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಲವು ಘೋಷಣೆಗಳನ್ನು ಮಾಡಿದ್ದಾರೆ. ಇದೆ ಸರಣಿಯಲ್ಲಿ ಅವರು ಕೆಂಪು ಕೋಟೆಯಿಂದ ರಾಷ್ಟ್ರೀಯ ಹೈಡ್ರೋಜನ್ ಯೋಜನೆಯನ್ನು (National Hyderogen Mission) ಘೋಷಣೆ ಮಾಡಿದ್ದಾರೆ. ಈ ಮಿಶನ್ ಅಡಿ ಭಾರತವನ್ನು ಗ್ರೀನ್ ಹೈಡ್ರೋಜನ್ (Green Hyderogen) ಕ್ಷೇತ್ರದಲ್ಲಿ ಗ್ಲೋಬಲ್ ಹಬ್ ವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಈ ಮೊದಲು ಕೂಡ ಹಸಿರು ಇಂಧನವನ್ನು (Green Energy) ಪ್ರಧಾನಿ ನರೇಂದ್ರ ಮೋದಿ ಅವರು ಭವಿಷ್ಯದ ಇಂಧನ ಎಂದು ಹೇಳಿರುವುದು ಇಲ್ಲಿ ಗಮನಾರ್ಹ. ಗ್ರೀನ್ ಎನರ್ಜಿಯನ್ನು ಉತ್ತೇಜಿಸುವುದರಿಂದ ಭಾರತವನ್ನು ಸ್ವಾವಲಂಭಿ ಮಾಡುವಲ್ಲಿ ದೊಡ್ಡ ನೆರವು ಸಿಗಲಿದೆ ಎಂದು ಅವರು ಹೇಳಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-PM Gatishakti Scheme: ಪ್ರಧಾನಿ ಗತಿಶಕ್ತಿ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?


ಕಚ್ಚಾ ತೈಲದ ಆಮದಿನ ಮೇಲಿಂದ ಅವಲಂಭನೆ ಕಡಿಮೆಯಾಗಲಿದೆ
ದೇಶ ಅಭಿವೃದ್ಧಿಯ ನಿಟ್ಟಿನಲ್ಲಿ ದೂರದ ಜಿಗಿತ ಸಾಧಿಸಲು ಗ್ರೀನ್  ಹೈಡ್ರೋಜನ್ ಕ್ಷೇತ್ರ ತುಂಬಾ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದರಿಂದ ಭಾರತದಲ್ಲಿನ ಪೆಟ್ರೋಲ್ ಮತ್ತು ಡಿಸೇಲ್ ಬೇಡಿಕೆ (Petrol-Diesel Demand)  ಕಡಿಮೆಯಾಗಿ, ಕಚ್ಚಾ ತೈಲದ (Crude Oil Import) ಆಮದಿನ ಮೇಲೆ ಭಾರತದ ಅವಲಂಬನೆ ಕಡಿಮೆಯಾಗಲಿದೆ. ಅಷ್ಟೇ ಅಲ್ಲ ಹಸಿರು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವುದರಿಂದ ಮಾಲಿನ್ಯ (Pollution)ಕೂಡ ಕಡಿಮೆಯಾಗಲಿದೆ. ಹೈಡ್ರೋಜನ್ ಇಂಧನವನ್ನು ಸಂಕುಚಿತ ನೈಸರ್ಗಿಕ ಅನಿಲದ (CNG) ಜೊತೆಗೂ ಕೂಡ ಬೆರೆಸಿ ಬಳಕೆ ಮಾಡಬಹುದು. ಈ ಕುರಿತು ತಮ್ಮ ಭಾಷಣದಲ್ಲಿ ಉಲ್ಲೇಖಿಸಿರುವ ಪ್ರಧಾನಿ ಮೋದಿ, ' ನಾನು ಇಂದು ತ್ರಿವರ್ಣ ಧ್ವಜವನ್ನು ಸಾಕ್ಷಿಯಾಗಿ ರಾಷ್ಟ್ರೀಯ ಹೈಡ್ರೋಜನ್ ಮಿಶನ್ ಅನ್ನು ಘೋಷಿಸುತ್ತಿದ್ದೇನೆ' ಎಂದಿದ್ದಾರೆ. 


ಇದನ್ನೂ ಓದಿ-Internet ಹಾಗೂ Technology ಕುರಿತು ಉಲ್ಲೇಖಿಸಿ, ಚೀನಾ ಬಗ್ಗೆ ಮೋಹನ್ ಭಾಗವತ್ ಹೇಳಿದ್ದೇನು?


ರೈಲು ಹಾಗೂ ಕಾರುಗಳು ನೀರಿನ ಸಹಾಯದಿಂದ ಹೇಗೆ ಚಲಿಸಲಿವೆ?
ಪ್ರಸ್ತುತ ಭಾರತದಲ್ಲಿ ಹೈಡ್ರೋಜನ್ ಅನಿಲವನ್ನು ಎರಡು ತಂತ್ರಜ್ಞಾನಗಳ ಸಹಾಯದಿಂದ ಉತ್ಪಾದಿಸಲಾಗುತ್ತದೆ. ಮೊದಲು ನೀರನ್ನು ವಿದ್ಯುದ್ವಿಭಜನೆಗೊಳಿಸಲಾಗುತ್ತದೆ ಮತ್ತು ಹೈಡ್ರೋಜನ್ ಅನ್ನು ತೆಗೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಹೈಡ್ರೋಜನ್ ಅನ್ನು ನೀರಿನ ಸಹಾಯದಿಂದ ತಯಾರಿಸಲಾಗುತ್ತದೆ ಮತ್ತು ಕಾರು ಅದರಿಂದ ಓಡಲು ಸಾಧ್ಯವಾಗುತ್ತದೆ. ಆದರೆ, ಕೇವಲ  ಹೈಡ್ರೋಜನ್ ಚಾಲಿತ ಕಾರುಗಳಲ್ಲಿ ಮಾತ್ರ ಈ ಇಂಧನವನ್ನು ಬಳಸಬಹುದು. ಎರಡನೆಯ ತಂತ್ರಜ್ಞಾನದ ಅಡಿಯಲ್ಲಿ, ನೈಸರ್ಗಿಕ ಅನಿಲವನ್ನು ಹೈಡ್ರೋಜನ್ ಮತ್ತು ಕಾರ್ಬನ್ ಆಗಿ ವಿಭಜಿಸಲಾಗುತ್ತದೆ. ಬಳಿಕ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಬಹುದು. ಬಳಿಕ ಬೇರ್ಪಡಿಸಲಾದ ಕಾರ್ಬನ್ ನಿಂದ ಸ್ಪೇಸ್, ​​ಏರೋಸ್ಪೇಸ್, ​​ಆಟೋ, ಹಡಗು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು  ತಯಾರಿಸಬಹುದು. ಭಾರತೀಯ ರೈಲ್ವೆ ರಾಷ್ಟ್ರೀಯ ಜಲಜನಕ ಶಕ್ತಿ ಮಿಷನ್ ಅಡಿಯಲ್ಲಿ ಹೈಡ್ರೋಜನ್ ಇಂಧನ ಕೋಶಗಳನ್ನು ಬಳಸಲು ಆರಂಭಿಸಿದೆ. ಹೈಡ್ರೋಜನ್ ಇಂಧನ ಕೋಶ ಆಧಾರಿತ ತಂತ್ರಜ್ಞಾನಕ್ಕಾಗಿ ಬಿಡ್‌ಗಳನ್ನು ಸಹ ಆಹ್ವಾನಿಸಲಾಗಿದೆ. ಈ ತಂತ್ರಜ್ಞಾನವನ್ನು ಉತ್ತರ ರೈಲ್ವೆಯ ಸೋನಿಪತ್-ಜಿಂದ್ ವಿಭಾಗದಲ್ಲಿ ಡೆಮು ರೈಲಿನಲ್ಲಿ ಅಳವಡಿಸಲಾಗುತ್ತಿದೆ.


ಇದನ್ನೂ ಓದಿ-ಚರ್ಚೆಯೇ ಇಲ್ಲದೆ ಸಂಸತ್ತಿನಲ್ಲಿ ಕಾನೂನಿನ ಅಂಗೀಕಾರ, ಕಾನೂನುಗಳಲ್ಲಿನ ಸ್ಪಷ್ಟತೆಯ ಕೊರತೆಗೆ ಕಾರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ