Chief Justice Of India: ಚರ್ಚೆಯೇ ಇಲ್ಲದೆ ಸಂಸತ್ತಿನಲ್ಲಿ ಕಾನೂನಿನ ಅಂಗೀಕಾರ, ಇಂತಹ ಕಾನೂನುಗಳಲ್ಲಿ ಸ್ಪಷ್ಟತೆಯ ಕೊರತೆ ಎಂದ CJI

Chief Justice Of India: ಸಂಸತ್ತಿನಲ್ಲಿ ಕಾನೂನಿನ ಅಂಗೀಕಾರದ ಸಮಯದಲ್ಲಿ ಚರ್ಚೆ ನಡೆಯದಿದ್ದರೆ, ನ್ಯಾಯಾಧೀಶರು ಕೂಡ ಕಾನೂನು ಮಾಡುವಾಗ ಸಂಸತ್ತಿನ ಮನೋಭಾವ ಏನೆಂದು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ರಮಣ ಹೇಳಿದರು.

Written by - Nitin Tabib | Last Updated : Aug 15, 2021, 04:49 PM IST
  • ಸಂಸತ್ತಿನಲ್ಲಿ ಕಾನೂನು ಅನುಮೋದನೆಯ ವೇಳೆ ಕಡಿಮೆ ಚರ್ಚೆ.
  • ತೀವ್ರ ಕಳವಳ ಹೊರಹಾಕಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ.
  • ಇದರಿಂದ ಸದನದ ಅಭಿಪ್ರಾಯ ತಿಳಿದುಕೊಳ್ಳಲು ಅಡಚಣೆ ಎದುರಾಗುತ್ತದೆ ಎಂದ CJI
Chief Justice Of India: ಚರ್ಚೆಯೇ ಇಲ್ಲದೆ ಸಂಸತ್ತಿನಲ್ಲಿ ಕಾನೂನಿನ ಅಂಗೀಕಾರ, ಇಂತಹ ಕಾನೂನುಗಳಲ್ಲಿ ಸ್ಪಷ್ಟತೆಯ ಕೊರತೆ ಎಂದ CJI title=
Chief Justice Of India (File Photo)

ನವದೆಹಲಿ - ಮುಖ್ಯ ನ್ಯಾಯಮೂರ್ತಿ (Chief Justice Of India) ಎನ್.ವಿ.ರಮಣ (NV Ramana) ಅವರು ಕಾನೂನನ್ನು ಅಂಗೀಕರಿಸುವ ಮೊದಲು ಸಂಸತ್ತಿನಲ್ಲಿ (Parliament) ನಡೆಯುತ್ತಿರುವ ಕಡಿಮೆ ಚರ್ಚೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ (Supreme Corut) ಧ್ವಜಾರೋಹಣ ನೆರವೇರಿಸಿ ಮಾತನಾಡಿರುವ ಮುಖ್ಯ ನ್ಯಾಯಮೂರ್ತಿಗಳು, ಸದನದಲ್ಲಿ ಚರ್ಚೆಯ ಗುಣಮಟ್ಟದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಸರಿಯಾದ ಚರ್ಚೆಯಿಲ್ಲದೆ ಅಂಗೀಕರಿಸಿದ ಕಾನೂನಿನಲ್ಲಿ ಸ್ಪಷ್ಟತೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇವುಗಳ ಕುರಿತು ಪ್ರಕರಣಗಳು ದಾಖಲಾಗುತ್ತಲೇ ಇರಲಿವೆ.

ಇದನ್ನೂ ಓದಿ-PM Gatishakti Scheme: ಪ್ರಧಾನಿ ಗತಿಶಕ್ತಿ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?

ಕಾನೂನು ರಚನೆಯ ಸಂದರ್ಭದಲ್ಲಿ ಸಂಸತ್ತಿನ ಭಾವನೆ ಏನಾಗಿತ್ತು ಎಂಬುದು ನ್ಯಾಯಾಧೀಶರಿಗೂ ಅರ್ಥವಾಗುವುದಿಲ್ಲ
ಕಾನೂನಿಗೆ ಅನುಮೋದನೆ ನೀಡುವಾಗ ಚರ್ಚೆಯ ಕೊರತೆಯ ಕಾರಣ, ಕಾನೂನು ರಚನೆಯ ಸಂದರ್ಭದಲ್ಲಿ ಸಂಸತ್ತಿನ ಅಭಿಪ್ರಾಯ ಏನಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ನ್ಯಾಯಾಧೀಶರು ಕೂಡ ವಿಫಲರಾಗುತ್ತಾರೆ. ಆದರೆ, ಈ ಮೊದಲು ಹಾಗೆ ಇರಲಿಲ್ಲ. ಯಾವುದೇ ಕಾನೂನಿನ ಕುರಿತಾದ ವಿವಾದದ ಮೇಲೆ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಂಸತ್ತಿನ ಆಭಿಪ್ರಾಯ ನ್ಯಾಯಾಧೀಶರ ಪಾಲಿಗೆ ಮಹತ್ವದ್ದಾಗಿತ್ತು. ಒಂದು ವೇಳೆ ಸಂಸತ್ತಿನ ಅಭಿಪ್ರಾಯ ಸರಿಯಾಗಿ ತಿಳಿಯದೆ ಇದ್ದ ಸಂದರ್ಭದಲ್ಲಿ ನ್ಯಾಯಾಧೀಶರಿಗೂ ಕೂಡ  ಕಠಿಣತೆ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Independence Day 2021: ‘ಅಮೃತ’ ಹೊಸ ಯೋಜನೆಗಳನ್ನು ಘೋಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಕಾನೂನಿನ ತಜ್ಞರ ಉಪಸ್ಥಿತಿಯಲ್ಲಿ ಚರ್ಚೆ ಮತಷ್ಟು ಉತ್ತಮಗೊಳ್ಳಲಿದೆ
ಈ ಸಂದರ್ಭದಲ್ಲಿ ಅವರು ವಕೀಲರ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತ, ನ್ಯಾಯವಾದಿಗಳು ಕೂಡ ತಮ್ಮನ್ನು ತಾವು ಕೇವಲ ವಕಾಲತ್ತಿಗೆ ಮಾತ್ರ ಸೀಮಿತಗೊಳಿಸಬಾರದು. ರಾಜಕೀಯ ರೂಪದಲ್ಲಿ ಸಕ್ರೀಯವಾಗಿ ಸಂಸತ್ತಿನವರೆಗೆ ತಲುಪಲು ಪ್ರಯತ್ನಿಸಬೇಕು ಎಂದು ಅವರು ಆಹ್ವಾನಿಸಿದ್ದಾರೆ. ಏಕೆಂದರೆ, ಕಾನೂನಿನ ತಜ್ಞರ ಉಪಸ್ಥಿತಿಯಲ್ಲಿ ಉತ್ತಮ ಚರ್ಚೆ ನಡೆಯುವ ಸಾಧ್ಯತೆ ಇರುತ್ತದೆ ಮತ್ತು ಜನರಿಗಾಗಿ ಸ್ಪಷ್ಟ ಕಾನೂನುಗಳು ಅನುಮೋದನೆಗೊಳ್ಳಲಿವೆ ಎಂದು ಸಿಜೆಐ ಹೇಳಿದ್ದಾರೆ.

ಇದನ್ನೂ ಓದಿ-ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮ : ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News