National Voters Day - 2021 - ನವದೆಹಲಿ: ತಮ್ಮ ಮನೆ-ಕುಟುಂಬದಿಂದ ದೂರ ಬೇರೆ ನಗರ ಅಥವಾ ಪಟ್ಟಣಗಳಲ್ಲಿ ವಾಸಿಸುವ ಜನರು ಚುನಾವಣೆಯಲ್ಲಿ ಮತ ಚಲಾಯಿಸಲು ಇನ್ಮುಂದೆ ತಮ್ಮ ಮನೆಗಳಿಗೆ ತೆರಳುವ ಅವಶ್ಯಕತೆ ಇಲ್ಲ. ಹೌದು, ಇಂತಹ ಒಂದು ಯೋಜನೆಯ ಮೇಲೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಇದು ಒಂದು ವೇಳೆ ಅನುಷ್ಠಾನಕ್ಕೆ ಬಂದರೆ ನೀವು ಯಾವುದೇ ಒಂದು ಮತಗಟ್ಟೆಗೆ ಭೇಟಿ ನೀಡಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು. ಈ ಕುರಿತು ಮಾತನಾಡಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋಡಾ, ಮತದಾರ ದೇಶದ ಯಾವುದೇ ಒಂದು ಮತಗಟ್ಟೆಗೆ ಭೇಟಿ ನೀಡಿ ತಮ್ಮ ಹಕ್ಕನ್ನು ಚಲಾಯಿಸುವ ಯೋಜನೆಯ ಮೇಲೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಮತ್ತು ಈ Remote Voting ಪ್ರಾಜೆಕ್ಟ್ ನ ಅಣುಕು ಕಾರ್ಯಾಚರಣೆ ಶೀಘ್ರವೇ ಆರಂಭವಾಗಲಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಅವರು, 'IIT ಮದ್ರಾಸ್ ಹಾಗೂ ಇತರೆ ಸಂಸ್ಥೆಗಳ ಜೊತೆ ಸೇರಿ ರಿಮೋಟ್ ವೋಟಿಂಗ್ ಯೋಜನೆಯ ಮೇಲೆ ಈಗಾಗಲೇ ಸಂಶೋಧನೆ ಆರಂಭಿಸಿದ್ದು, ಅದರಲ್ಲಿ ನಾವು ನಿರೀಕ್ಷಿತ ಪ್ರಗತಿಯನ್ನು ಕೂಡ ಸಾಧಿಸಿದ್ದೇವೆ" ಎಂದಿದ್ದಾರೆ.


ಪ್ರತಿ ಚುನಾವಣೆಯಲ್ಲಿ ಸಾವಿರಾರು ಮತದಾರರು ಭೌಗೋಲಿಕ ಅಡೆತಡೆಗಳ ಕಾರಣ ತಮ್ಮ ಮತದಾನದ ಹಕ್ಕು ಚಲಾಯಿಸಲು ವಿಫಲರಾಗುತ್ತಾರೆ. ನೌಕರಿ, ವಿದ್ಯಾಭ್ಯಾಸ, ಚಿಕಿತ್ಸೆ ಇತ್ಯಾದಿ ಕಾರಣಗಳಿಂದ ಅವರು ತಮ್ಮ ಮನೆಯಿಂದ ತಮ್ಮ ಮೂಲ ಮತಗಟ್ಟೆಗಳಿಂದ ದೂರವಿರುತ್ತಾರೆ.


ಇದನ್ನು ಓದಿ- National Voters Day 2021 - ಇನ್ಮುಂದೆ ನಿಮ್ಮ ಫೋನ್ ನಲ್ಲಿಯೇ ನೀವು ವೋಟರ್ ಡೌನ್ಲೋಡ್ ಮಾಡಬಹುದು


ರಿಮೋಟ್ ವೋಟಿಂಗ್ ಯೋಜನೆ ಯಾವುದೇ ಒಂದು ಅಡಚಣೆಯ ಕಾರಣ ತಮ್ಮ ಮೂಲ ಮತಗಟ್ಟೆಗಳಿಂದ ದೂರವಿರುವ ಇಂತಹ ಮತದಾರರಿಗೆ ತಮ್ಮ ಮತದಾನದ ಹಕ್ಕನ್ನು (Voting) ಚಲಾಯಿಸಲು ಅನುವು ಮಾಡಿಕೊಡಲಿದೆ.


ಇದನ್ನು ಓದಿ-Digital India: ವೋಟರ್ IDಗೆ ಸಂಬಂಧಿಸಿದ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ


ಇದಲ್ಲದೆ ಚುನಾವಣಾ ಆಯೋಗ ವಿದೇಶಗಳಲ್ಲಿರುವ ಭಾರತೀಯರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸುವ ಸೌಕರ್ಯ ಒದಗಿಸಲು ಕೂಡ ಯೋಜನೆ ರೂಪಿಸುತ್ತಿದೆ. ಪ್ರಸ್ತುತ ಅವರು ಮತ ಚಲಾಯಿಸಲು ತಮ್ಮ ಮತ ಕೇಂದ್ರಗಳಿಗೆ ಭೇಟಿ ನೀಡುವ ಅವಶ್ಯಕತೆ ಇದೆ.


ಇದನ್ನು ಓದಿ-ನಿಮ್ಮ Voter ID ಕಳೆದಿದೆಯೇ? ಈ 11 ದಾಖಲೆಗಳಿದ್ದರೂ ಮತ ಚಲಾಯಿಸಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.