ಬೆಂಗಳೂರು: ಹಿಂದೆಮುಂದೆ ಕಿತ್ತುತಿನ್ನುವ ಬಂಧು ಬಳಗದ ಬಂಧನವಿಲ್ಲದೆ!ಭಾರತವೆ ನನ್ನ ಮನೆ ಭಾರತವಾಸಿಗಳೆ ನನ್ನಬಂಧುಗಳು ಎಂದು ಪ್ರಾಮಾಣಿಕವಾಗಿ ಭಾರತದ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ಮಹನೀಯನನ್ನು ರಾಜಕೀಯ ಚದುರಂಗದ ಕುತಂತ್ರಕ್ಕೆ ಬಲಿಕೊಟ್ಟರೆ ನಮ್ಮರಾಷ್ಟ್ರ ಮತ್ತೆ ಹಿಂದುಳಿಯುತ್ತದೆ!


COMMERCIAL BREAK
SCROLL TO CONTINUE READING

ಅಂಗೈಯಲ್ಲೆ ಚಿನ್ನವಿದೆ!ಕನ್ನಡಿಯಲ್ಲಿ ನಿಕ್ಷೇಪ ತೋರುವರ ನಂಬದಿರಿ.! ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಜನತೆಗೆ ಕರೆ ನೀಡಿದ್ದಾರೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗೆಗೆ ಈ ರೀತಿ ಟ್ವೀಟ್ ಮಾಡಿರುವ ಜಗ್ಗೇಶ್, ಎರಡು ಜೊತೆ ಬಟ್ಟೆಯೊಂದಿಗೆ ಬಂದ ಆತ, ಹೋಗುವಾಗಲೂ ಅಷ್ಟನ್ನೇ ಕೊಂಡೊಯ್ಯುತ್ತಾನೆ. ಅವನನ್ನು ಕಳೆದುಕೊಂಡರೆ ನಷ್ಟವಾಗುವುದು ನಮಗೆ ಮಾತ್ರ ಆತನಿಗಲ್ಲ ಎಂದು ಮೋದಿ ಅವರ ಸರಳತೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.