ನವದೆಹಲಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಧು ವಿರುದ್ಧ ವಾಗ್ದಾಳಿ ನಡೆಸಿರುವ ಅಮರಿಂದರ್ ಸಿಂಗ್ ಅವರನ್ನು ದೇಶ ವಿರೋಧಿ, ಅಪಾಯಕಾರಿ, ಅಸ್ಥಿರ, ಅಸಮರ್ಥ ಮತ್ತು ರಾಜ್ಯ ಮತ್ತು ದೇಶಕ್ಕೆ ಭದ್ರತೆಗೆ ಮಾರಕ ಎಂದು ಕಿಡಿ ಕಾರಿದ್ದಾರೆ.ಅಷ್ಟೇ ಅಲ್ಲದೆ ಅವರನ್ನು ಮುಖ್ಯಮಂತ್ರಿ ಮಾಡುವ ಯಾವುದೇ ಕ್ರಮದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತನಗೆ ರಾಜಕೀಯವನ್ನು ತೊರೆಯುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಕ್ಯಾಪ್ಟನ್ ಅಮರೀಂದರ್ (Captain Amarinder Singh), ಪಾಕಿಸ್ತಾನ ಹಾಗೂ ಅಪಾಯದ ಜೊತೆ ಬೆರೆತಿರುವ ವ್ಯಕ್ತಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: Captain Amarinder Singh Resigns : ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ 


'ನಾವೆಲ್ಲರೂ ಸಿದ್ದು ಇಮ್ರಾನ್ ಖಾನ್ ಮತ್ತು ಜನರಲ್ ಬಾಜ್ವಾ ಅವರನ್ನು ಅಪ್ಪಿಕೊಳ್ಳುವುದನ್ನು ನೋಡಿದ್ದೇವೆ ಮತ್ತು ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆಯಲ್ಲಿ ಪಾಕಿಸ್ತಾನದ ಪ್ರಧಾನಿಯನ್ನು ಹಾಡಿ ಹೊಗಳಿರುವುದನ್ನು ನಾವು ನೋಡಿದ್ದೇವೆ, " ಎಂದು ಅವರು ಹೇಳಿದರು. ಕ್ರಿಕೆಟಿಗ ಇಮ್ರಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬೇಡ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ ಅವರು ಭಾಗವಹಿಸಿದ್ದರು ಎಂದು ಅಮರಿಂದರ್ ಹೇಳಿದರು.


ಇದನ್ನೂ ಓದಿ: ಅಮೇರಿಕಾವು ತಾಲಿಬಾನ್ ನ್ನು ಪರಿಗಣಿಸದಿದ್ದರೆ ಪರಿಸ್ಥಿತಿ ಹದಗೆಡುತ್ತದೆ-ಇಮ್ರಾನ್ ಖಾನ್


'ಪಂಜಾಬ್ ಸರ್ಕಾರ ಎಂದರೆ ಭಾರತದ ಭದ್ರತೆ, ಮತ್ತು ಸಿಧು ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಮುಖವನ್ನಾಗಿಸಿದರೆ, ನಾನು ಪ್ರತಿ ಹಂತದಲ್ಲೂ ಆತನ ವಿರುದ್ಧ ಹೋರಾಡುತ್ತೇನೆ"ಎಂದು ಅವರು ಹೇಳಿದರು.ಮಾಧ್ಯಮ ಸಂದರ್ಶನಗಳ ಸರಣಿಯಲ್ಲಿ, ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರಿಂದ ಕೇಳಲ್ಪಟ್ಟ ಕ್ಯಾಪ್ಟನ್ ಅಮರೀಂದರ್,ಪಂಜಾಬ್‌ಗೆ ಸಿದ್ದು ಎಂದಿಗೂ ಉತ್ತಮ ನಾಯಕನಾಗಲು ಸಾಧ್ಯವಿಲ್ಲ ಎಂದು ಹೇಳಿದರು.


'ಸಚಿವಾಲಯವನ್ನು ನಿರ್ವಹಿಸಲು ಸಾಧ್ಯವಾಗದ ವ್ಯಕ್ತಿಯು ರಾಜ್ಯವನ್ನು ಹೇಗೆ ನಿಭಾಯಿಸಬಹುದು?" ಅವರು ಕೇಳಿದರು, ಅವರು ತಮ್ಮ ಸಚಿವ ಸಂಪುಟದಿಂದ ತೆಗೆದುಹಾಕಿದ ಒಬ್ಬ ಅಸಮರ್ಥ ವ್ಯಕ್ತಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ರಾಜ್ಯದ ಕ್ಯಾಬಿನೆಟ್ ಮಂತ್ರಿಯಾಗಿ, ಸಿದ್ದು ಏಳು ತಿಂಗಳ ಕಾಲ ಕಡತಗಳನ್ನು ತೆರವುಗೊಳಿಸಲು ವಿಫಲರಾದರು ಎಂದು ಅವರು ಬಹಿರಂಗಪಡಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.