ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ತಾಲಿಬಾನ್ ಜೊತೆ ಮಾತುಕತೆ ನಡೆಸದಿದ್ದರೆ ಮತ್ತು ಅದರ ಮಾನ್ಯತೆಯ ಬಗ್ಗೆ ಸಕಾರಾತ್ಮಕ ನಿಲುವು ತೆಗೆದುಕೊಳ್ಳದಿದ್ದರೆ ಅದು ಈ ಪ್ರದೇಶದಲ್ಲಿ ತೊಂದರೆಗಳನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ
ಇಮ್ರಾನ್ ಖಾನ್ (Imran Khan) ಶುಕ್ರವಾರದಂದು ರಶಿಯಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಫ್ಘಾನಿಸ್ತಾನವು ಪ್ರಸ್ತುತ ಇಡೀ ಪ್ರದೇಶಕ್ಕೆ ಅತ್ಯಂತ ಮುಖ್ಯವಾದ ಸಮಸ್ಯೆಯಾಗಿದ್ದು, ದೇಶವು ಐತಿಹಾಸಿಕ ಅಡ್ಡಹಾದಿಯಲ್ಲಿದೆ ಎಂದು ಹೇಳಿದ್ದಾರೆ.
ಅಮೆರಿಕದ ವಿರುದ್ಧ ತಾಲಿಬಾನ್ ಗೆ ಪಾಕಿಸ್ತಾನದ ಸಹಾಯದ ಬಗ್ಗೆ ಕೇಳಿದಾಗ "ಪಾಕಿಸ್ತಾನವು ಅಮೆರಿಕದ ವಿರುದ್ಧ ತಾಲಿಬಾನ್ ಗೆಲುವಿಗೆ ಸಹಾಯ ಮಾಡಿದರೆ, ಪಾಕಿಸ್ತಾನವು ಯುಎಸ್ ಮತ್ತು ಇಡೀ ಯುರೋಪಿಯನ್ನರಿಗಿಂತ ಬಲಿಷ್ಠವಾಗಿದೆ ಹಾಗಾದರೆ ಸುಮಾರು 60,000 ಹೋರಾಟಗಾರರ ಲಘು ಸಶಸ್ತ್ರ ಸೇನೆಯನ್ನು ತಯಾರಿಸಿ, 3,00,000 ಸುಸಜ್ಜಿತ ಶಸ್ತ್ರಾಸ್ತ್ರಗಳನ್ನು ಸೋಲಿಸಿದೆ ಎಂದು ಅರ್ಥವಾಗುತ್ತದೆ' ಎಂದು ಹೇಳಿದರು.
ಇದನ್ನೂ ಓದಿ: Pakistan PM : RSS ಸಿದ್ದಾಂತದ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಗ್ದಾಳಿ!
'ಅಫಘಾನ್ ಜನರು ಬಾಹ್ಯ ಶಕ್ತಿಗಳ ವಿರುದ್ಧದ ಯುದ್ಧವನ್ನು ಜಿಹಾದ್ ಎಂದು ಪರಿಗಣಿಸುತ್ತಾರೆ ಮತ್ತು ತಾಲಿಬಾನಿಗಳು 20 ವರ್ಷಗಳಲ್ಲಿ ಬಹಳಷ್ಟು ಕಲಿತಿದ್ದಾರೆ ಎಂದು ಹೇಳಿದರು.
ಅಷ್ಟೇ ಅಲ್ಲದೆ ಅವರು ಭಯೋತ್ಪಾದನೆ ವಿರುದ್ಧದ ಯುಎಸ್ ಯುದ್ಧವು ಪಾಕಿಸ್ತಾನಕ್ಕೆ ಹಾನಿಕಾರಕ ಎಂದು ಹೇಳಿದ್ದರು, ಏಕೆಂದರೆ ವಾಷಿಂಗ್ಟನ್ ಅಫ್ಘಾನಿಸ್ತಾನದಲ್ಲಿ ತಮ್ಮ 20 ವರ್ಷಗಳ ಉಪಸ್ಥಿತಿಯಲ್ಲಿ ಇಸ್ಲಾಮಾಬಾದ್ ಅನ್ನು "ಬಾಡಿಗೆ ಗನ್" ನಂತೆ ಬಳಸಿತು.'ನಾವು (ಪಾಕಿಸ್ತಾನ) ಬಾಡಿಗೆ ಗನ್ ಇದ್ದಂತೆ." ಎಂದು ಹೇಳಿದರು.ನಾವು ಅವರನ್ನು (ಯುಎಸ್) ಆಫ್ಘಾನಿಸ್ತಾನದಲ್ಲಿ ಯುದ್ಧವನ್ನು ಗೆಲ್ಲುವಂತೆ ಮಾಡಬೇಕಿತ್ತು, ಅದು ನಮಗೆ ಎಂದಿಗೂ ಸಾಧ್ಯವಾಗಲಿಲ್ಲ' ಎಂದು ಖಾನ್ ಸಿಎನ್ ಎನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ: Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'
ಇದಲ್ಲದೆ, ಭಯೋತ್ಪಾದನೆಯ ವಿರುದ್ಧ ಯುಎಸ್ ಯುದ್ಧದ ಸಮಯದಲ್ಲಿ ದೇಶವು ಗುಂಪನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ. ಇನ್ನೊಂದೆಡೆಗೆ ಅಂತಾರಾಷ್ಟ್ರೀಯ ಸಮುದಾಯವು ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಿದ್ದರೂ, ಸಿಎನ್‌ಎನ್ ಸಂದರ್ಶನದಲ್ಲಿ ಇಮ್ರಾನ್ ಖಾನ್, ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡಿದೆ ಎಂಬ ಆರೋಪವನ್ನು ನಿರಾಕರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ