ಸಿಎಂ ಅಮರಿಂದರ್ ಜೊತೆಗಿನ ಸಂಘರ್ಷದ ನಡುವೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಸಿಧು ನೇಮಕ
ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗಿನ ಘರ್ಷಣೆಯ ನಂತರ ಅಂತಿಮವಾಗಿ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರನ್ನು ಭಾನುವಾರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ನವದೆಹಲಿ: ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗಿನ ಘರ್ಷಣೆಯ ನಂತರ ಅಂತಿಮವಾಗಿ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರನ್ನು ಭಾನುವಾರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ನವಜೋತ್ ಸಿಧು (Navjot Singh Sidhu) ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸರಣಿ ಸಭೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: Punjab Congress Crisis: ರಾಹುಲ್ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು
ಸಿಧು ಅವರೊಂದಿಗೆ ನಾಲ್ಕು ಕಾರ್ಯಕಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ,ಅವರಲ್ಲಿ ಸಂಗತ್ ಸಿಂಗ್ ಗಿಲ್ಜಿಯಾನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್, ಮತ್ತು ಕುಜಿತ್ ಸಿಂಗ್ ನಾಗ್ರಾ. ಡ್ಯಾನಿ, ದಲಿತ ಸಿಖ್ ರಾಹುಲ್ ಗಾಂಧಿಯವರ ಆಯ್ಕೆಯಾಗಿದೆ. ಸಂಗತ್ ಸಿಂಗ್ ಒಬಿಸಿ ಆಗಿದ್ದರೆ, ಗೋಯೆಲ್ ಹಿಂದೂ ಮತ್ತು ನಾಗ್ರಾ ಜಾಟ್ ಸಿಖ್ ಆಗಿದ್ದಾರೆ.
Navjot Singh Sidhu : ಕಾಂಗ್ರೆಸ್ ಗೆದ್ದರೆ ಸಿಧು ಮುಂದಿನ ಪಂಜಾಬ್ ಸಿಎಂ!
ಸಿಧು ಪಂಜಾಬ್‌ನಲ್ಲಿ ಕ್ಯಾಪ್ಟನ್‌ನ ಉತ್ತರಾಧಿಕಾರಿಯಾಗುವ ಗುರಿಯನ್ನು ಹೊಂದಿದ್ದರೆ, ಕ್ರಿಕೆಟಿಗನ ಸಾಧ್ಯತೆಯ ಬಗ್ಗೆ ಸಿಎಂ ತಮ್ಮ ಅಸಮಾಧಾನವನ್ನು ಪುನರುಚ್ಚರಿಸಿದ್ದಾರೆ. ಸಿಧು ಅವರಿಗೆ ಅಪೇಕ್ಷಿತ ಹುದ್ದೆ ನೀಡಿದರೆ ಪಕ್ಷವು ರಾಜ್ಯದಲ್ಲಿ ವಿಭಜನೆಯಾಗುತ್ತದೆ’ ಎಂದು ಅವರು ಈ ಹಿಂದೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಗೆ ಔತಣಕೂಟಕ್ಕೆ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ ಸಿಎಂ ಅಮರಿಂದರ್ ಸಿಂಗ್ ...!
ಮುಂದಿನ ವರ್ಷ ಚುನಾವಣೆ ಇರುವುದರಿಂದ ಹೋಗಲಿರುವುದರಿಂದ ಕಾಂಗ್ರೆಸ್ ಈ ಆಂತರಿಕ ಜಗಳವನ್ನು ಕೊನೆಗೊಳಿಸಲು ಬಹಳದಿನಗಳಿಂದ ಪ್ರಯತ್ನಿಸುತ್ತಿದೆ. ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರು ಸಿಧು ಮತ್ತು ಸಿಂಗ್ ಅವರೊಂದಿಗೆ ಇತರ ರಾಜ್ಯ ಪಕ್ಷದ ಮುಖಂಡರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ಈ ಹಿಂದೆ ನಡೆಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.