ಸಂಬಿತ್ ಪಾತ್ರಾರನ್ನು ಕಪ್ಪೆಗೆ ಹೋಲಿಸಿದ ನವಜೋತ್ ಸಿಂಗ್ ಸಿಧು
ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಈಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರನ್ನು ಕಪ್ಪೆಗೆ ಹೋಲಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಈಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರನ್ನು ಕಪ್ಪೆಗೆ ಹೋಲಿಸಿದ್ದಾರೆ.
ಬಿಜೆಪಿ ದೇಶದ ಮಹಿಳೆಯರ ಸಮಸ್ಯೆ ಬಗ್ಗೆ ಮೃದು ಧೋರಣೆ ಹೊಂದಿರುವ ಬಗ್ಗೆ ಕಿಡಿಕಾರಿದ ನವಜೋತ್ ಸಿಂಗ್ ಸಿಧು ಭಾಷಣದ ವೇಳೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರನ್ನು ತರಾಟೆಗೆ ತೆಗೆದುಕೊಂಡರು.
"ಅವರ ಹೆಸರೇನು? ಟಿಂಕು ತಾತ್ರಾ ಅಥವಾ ಪಾತ್ರಾ. ಕಪ್ಪೆ ಟ್ರ ಟ್ರ ಅಂತ ಶಬ್ದ ಮಾಡಿ ನಂತರ ಸುಮ್ಮನಾಗುತ್ತದೆ. ಅವರಿಗೇಕೆ ಮಹತ್ವ ನೀಡುವುದು ? ಮಹಿಳೆಯರ ಗೌರವದ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುತ್ತಾರೆ. ಉಜ್ಜ್ವಾಲಾ ಯೋಜನೆ ಮೇಲೆ ಫೋಟೋ ಹಾಕಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಮಹಿಳೆಗೆ ಎಲ್ಪಿಜಿ ಸಿಲಿಂಡರ್ ಖರೀದಿಸಲು ಸಾಧ್ಯವಿಲ್ಲದೆ ಕಟ್ಟಿಗೆಯನ್ನು ಸುಡಲು ಬಳಸುತ್ತಾಳೆ" ಎಂದು ತಮ್ಮದೇ ಹಾಸ್ಯ ಶೈಲಿಯಲ್ಲಿ ಅವರು ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮೊದಲು ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರುತ್ತಾ ಐದು ವರ್ಷಗಳ ಆಡಳಿತವನ್ನು ಅವರು ಬ್ರಿಟಿಶ್ ರ ಆಡಳಿತಕ್ಕೆ ಹೋಲಿಕೆ ಮಾಡಿದ್ದರು.