ಗೂಳಿ ದಾಳಿಯಿಂದ ಸ್ವಲ್ಪದರಲ್ಲೇ `ಸಿಕ್ಸರ್ ಸಿದ್ದು` ಪಾರು
ಅಮೃತಸರ: ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಮಂತ್ರಿ ನವಜೋತ್ ಸಿಂಗ್ ಸಿದ್ದು ನಗರದ ದೇವಸ್ತಾನದ ಹತ್ತಿರ ಜನರ ಜೊತೆ ನಿಂತಿರುವಾಗ ಏಕಾಏಕಿ ಗೂಳಿಯೊಂದು ಅವರ ಮೇಲೆ ದಾಳಿ ಮಾಡಿದೆ. ಆದರೆ, ಕೂದಲಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯು ಇಲ್ಲಿನ ದುರ್ಗಿಯಾನಾ ದೇವಸ್ಥಾನದ ದುರಸ್ತಿ ಕಾರ್ಯವನ್ನು ವೀಕ್ಷಿಸಲು ಹೋದಾಗ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಗೂಳಿಯು ದಾಳಿ ಮಾಡಿದಾಗ ಸಚಿವ ಸಿದ್ದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಗೂಳಿ ದಾಳಿಯ ಸಂದರ್ಭದಲ್ಲಿ ಇಬ್ಬರು ಪತ್ರಕರ್ತರಿಗೆ ಗಾಯಗಳಾಗಿವೆ. ಆದರೆ, ಸಿದ್ದು ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಎನ್ನಲಾಗಿದೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.