ಪ್ರಧಾನಿ ಮೋದಿ ಜನಪ್ರಿಯತೆ ಕುಸಿತ! ಈಗಲೇ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಅಧಿಕಾರ ಗೊತ್ತಾ?
India Today Mood of the Nation: ಮತ ಹಂಚಿಕೆಗೆ ಸಂಬಂಧಿಸಿದಂತೆ ಈಗಲೇ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ ಶೇ.43ರಷ್ಟು ಮತಗಳನ್ನು ಗಳಿಸಿದರೆ, ಆದರೆ ‘I.N.D.I.A’ ಮೈತ್ರಿಕೂಟವು ಶೇ.41ರಷ್ಟು ಮತಗಳನ್ನು ಗಳಿಸುತ್ತದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ತಿಳಿಸಿದೆ.
ಬೆಂಗಳೂರು: ಈಗಲೇ ಲೋಕಸಭಾ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) 306 ಸ್ಥಾನಗಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ.
ಹೌದು, ಹಣದುಬ್ಬರ, ನಿರುದ್ಯೋಗ ಹೆಚ್ಚಳ, ಬೆಲೆ ಏರಿಕೆ ಸೇರಿದಂತೆ ಅನೇಕ ವಿಚಾರವಾಗಿ ಪ್ರಧಾನಿ ಮೋದಿಯವರ ಜನಪ್ರಿಯತೆ ತುಸು ಕುಸಿತ ಕಂಡಿದೆ. ದೇಶದ ಜನರು ಮೋದಿ ಬಗ್ಗೆ ಅಸಂತೋಷಗೊಂಡಿದ್ದಾರೆ. ಆದರೂ ಸಹ 2024ರ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ಭವಿಷ್ಯ ನುಡಿದಿದೆ.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚಳವಾಗಿದೆ. ಲೋಕಸಭಾ ಚುನಾವಣೆಯಲ್ಲಿ ‘I.N.D.I.A’ ಮೈತ್ರಿಕೂಟವು ಉತ್ತಮ ಸಾಧನೆ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ. ಮುಂದಿನ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಶೇ.52ರಷ್ಟು ಮಂದಿ ಮೋದಿ ಎಂದು ಹೇಳಿದ್ದರೆ, ಶೇ.16 ಮಂದಿ ರಾಹುಲ್ ಗಾಂಧಿ ಪರ ಒಲವು ತೋರಿದ್ದಾರೆ.
ಇದನ್ನೂ ಓದಿ: Madurai: ಲಕ್ನೋ-ರಾಮೇಶ್ವರಂ ಟೂರಿಸ್ಟ್ ರೈಲಿನಲ್ಲಿ ಬೆಂಕಿ ಅವಘಡ; 9 ಮಂದಿ ಸಾವು!
ಈಗಲೇ ಚುನಾವಣೆ ನಡೆದರೆ 542 ಸ್ಥಾನಗಳ ಪೈಕಿ ಒಂದು ರಾಜಕೀಯ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ 272ನ್ನು NDA ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 306 ಸ್ಥಾನಗಳನ್ನು ಗೆಲ್ಲುತ್ತದೆ, ಆದರೆ ‘I.N.D.I.A’ ಮೈತ್ರಿಕೂಟ 193 ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದ್ದು, ಇತರ ರಾಜಕೀಯ ಪಕ್ಷಗಳು 44 ಸ್ಥಾನಗಳನ್ನು ಗಳಿಸಲಿವೆ ಎಂದು ತಿಳಿದುಬಂದಿದೆ.
NDAಗಾಗಿ 2023ರ ಜನವರಿಯಲ್ಲಿ ಹಿಂದಿನ MOTN ಸಮೀಕ್ಷೆಗಿಂತ 8 ಸ್ಥಾನಗಳ ಸುಧಾರಣೆಯಾಗಿದೆ, ಆದರೂ ಇದು 2019ರ ಸಾರ್ವತ್ರಿಕ ಚುನಾವಣೆಯಲ್ಲಿ NDA ಗೆದ್ದ 357 ಸ್ಥಾನಗಳಿಗಿಂತ ಕಡಿಮೆಯಾಗಿದೆ. ಏತನ್ಮಧ್ಯೆ ಹೊಸದಾಗಿ ರೂಪುಗೊಂಡಿರುವ ‘I.N.D.I.A’ ಮೈತ್ರಿಕೂಟದ ಯೋಜಿತ ಸ್ಥಾನ ಹಂಚಿಕೆಯು ಭಾರಿ ಜಿಗಿತವನ್ನು ತೋರಿಸಿದೆ. ಜನವರಿಯ ಸಮೀಕ್ಷೆಯು ಮೈತ್ರಿಕೂಟ 153 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿತ್ತು. ಆದರೆ ಈಗ ಸುಮಾರು 193 ಸ್ಥಾನಗಳನ್ನು ಗೆಲ್ಲಿದೆ ಎಂದು ಅಂದಾಜಿಸಲಾಗಿದೆ.
ಮತ ಹಂಚಿಕೆಗೆ ಸಂಬಂಧಿಸಿದಂತೆ ಈಗಲೇ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ ಶೇ.43ರಷ್ಟು ಮತಗಳನ್ನು ಗಳಿಸಿದರೆ, ಆದರೆ ‘I.N.D.I.A’ ಮೈತ್ರಿಕೂಟವು ಶೇ.41ರಷ್ಟು ಮತಗಳನ್ನು ಗಳಿಸುತ್ತದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ತಿಳಿಸಿದೆ.
ಇದನ್ನೂ ಓದಿ: Photo Gallery: ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಭೇಟಿ ಹೇಗಿತ್ತು..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.