NEET RESULT 2021 ಘೋಷಣೆ, ಮನೆಯಲ್ಲಿಯೇ ಕುಳಿತು ಇ-ಮೇಲ್ ಮುಖಾಂತರ ಪಡೆಯಿರಿ ರಿಪೋರ್ಟ್ ಕಾರ್ಡ್ ಹಾಗೂ Final Answer Key
NEET Result 2021 Update - ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಬಯಸುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. NTA ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET 2021) ಫಲಿತಾಂಶವನ್ನು ಬಿಡುಗಡೆ ಮಾಡಿದೆ. NTA, NEET 2021 ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಅವರ ಇಮೇಲ್‌ನಲ್ಲಿ ಕಳುಹಿಸಿದೆ.
NEET Result - ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಬಯಸುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. NTA ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET 2021) ಫಲಿತಾಂಶವನ್ನು ಬಿಡುಗಡೆ ಮಾಡಿದೆ. NTA, NEET 2021 ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಅವರ ಇಮೇಲ್‌ನಲ್ಲಿ ಕಳುಹಿಸಿದೆ. ಅಭ್ಯರ್ಥಿಗಳು NTA, NEET ನ ಅಧಿಕೃತ ಸೈಟ್‌ನಲ್ಲಿ neet.nta.nic.in (NTA Website) ನಲ್ಲಿ ಫಲಿತಾಂಶ ಮತ್ತು ಫೈನಲ್ ಅನ್ಸರ್ ಕೀ ಎರಡನ್ನೂ ಪರಿಶೀಲಿಸಬಹುದು.
16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು 12 ಸೆಪ್ಟೆಂಬರ್ 2021 ರವರೆಗೆ ನಡೆಸಲಾಗಿತ್ತು. ಈ ವರ್ಷ ಸುಮಾರು 16 ಲಕ್ಷ ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ಹಾಜರಾಗಿದ್ದರು. NTA 15 ಅಕ್ಟೋಬರ್ 2021 ರಂದು ತಾತ್ಕಾಲಿಕ ಉತ್ತರ ಕೀಯನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ-PM Modi Hunkar Rally Bomb Blast: ನಾಲ್ವರು ಉಗ್ರರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕೌನ್ಸಲಿಂಗ್ ನಲ್ಲಿ ಈ ಸಂಗತಿಗಳು ಅವಶ್ಯಕ
28 ಅಕ್ಟೋಬರ್ 2021 ರಂದು ಸುಪ್ರೀಂ ಕೋರ್ಟ್ NEET 2021 ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸಲು NTA ಗೆ ಅನುಮತಿ ನೀಡಿತ್ತು. ಇದಾದ ಬಳಿಕ, ಇಂದು NTA NEET ಫಲಿತಾಂಶದೊಂದಿಗೆ ಫೈನಲ್ ಅನ್ಸರ್ ಕೀ ಅನ್ನು ಸಹ ಬಿಡುಗಡೆ ಮಾಡಿದೆ. ಇದೀಗ NEET ಫಲಿತಾಂಶ ಬಿಡುಗಡೆಯಾದ ನಂತರ, ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಬೇಕಾಗಲಿದೆ. ಇದಕ್ಕಾಗಿ, ಅಭ್ಯರ್ಥಿಗಳಿಗೆ NEET 2021 ಪ್ರವೇಶ ಪತ್ರ, NEET ಫಲಿತಾಂಶ ಶ್ರೇಣಿಯ ಪತ್ರ ಅಥವಾ ಅಂಕಪಟ್ಟಿ, 10th-12th ಪ್ರಮಾಣಪತ್ರ, ಯಾವುದಾದರೂ ಒಂದು ID, ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿದೆ.
ಇದನ್ನೂ ಓದಿ-CoronaVirus: ಮನೆ ಬಾಗಿಲು ಬಡಿಯುತ್ತಿದೆ ಕೊರೊನಾ 3ನೇ ಅಲೆ!: ಇದು ಎಚ್ಚರಿಕೆಯ ಗಂಟೆಯೇ..?
ಎಷ್ಟು ವಿದ್ಯಾರ್ಥಿಗಳ ಅಡ್ಮಿಶನ್ ನಡೆಯಲಿದೆ?
ಸುಮಾರು 83,075 ಎಂಬಿಬಿಎಸ್, 26,949 ಬಿಡಿಎಸ್, 52,720 ಆಯುಷ್, 603 ಬಿವಿಎಸ್‌ಸಿ ಸೀಟುಗಳಿಗೆ ನೀಟ್ ಕೌನ್ಸೆಲಿಂಗ್ 2021 ಮೂಲಕ ಪ್ರವೇಶ ಪ್ರಕ್ತಿಯೇ ನಡೆಯಲಿದೆ. ಇದೇ ವೇಳೆ, ಈ ವರ್ಷ ಬಿಎಸ್ಸಿ ನರ್ಸಿಂಗ್‌ನಲ್ಲಿ ಪ್ರವೇಶವನ್ನು ಸಹ NEET ಅಂಕಗಳ ಮೂಲಕ ನಡೆಸಲಾಗುತ್ತಿದೆ.
ಇದನ್ನೂ ಓದಿ-ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸಿದ್ಧರಾಮಯ್ಯ ಆಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ