PM Modi Hunkar Rally Bomb Blast: ನಾಲ್ವರು ಉಗ್ರರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Gandhi Maidan Bomb Blast Case: ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಲ್ಲಾ 9 ಆರೋಪಿಗಳನ್ನು ಪಟ್ನಾದ ಬೇವೂರ್ ಜೈಲಿನಿಂದ NIA ಜೈಲಿಗೆ ಇಂದು ಬೆಳಗ್ಗೆ ಸಾಗಿಸಲಾಗಿತ್ತು. ಇದುವರೆಗೆ ನ್ಯಾಯಾಲಯದಲ್ಲಿ ಒಟ್ಟು 187 ಜನರ ವಿಚಾರಣೆ ನಡೆದಿದೆ.

Written by - Nitin Tabib | Last Updated : Nov 1, 2021, 06:09 PM IST
  • ಪಟ್ನಾದ ಗಾಂಧೀ ಮೈದಾನ ಬಾಂಬ್ ಬ್ಲಾಸ್ಟ್ ಪ್ರಕರಣ
  • ನಾಲ್ವರು ಆರೋಪಿಗಳಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ
  • ವಿಶೇಷ NIA ನ್ಯಾಯಾಲಯದಿಂದ ಇಂದು ತೀರ್ಪು ಪ್ರಕಟ
PM Modi Hunkar Rally Bomb Blast: ನಾಲ್ವರು ಉಗ್ರರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ  title=
PM Modi Hunkar Rally Bomb Blast

ಪಟ್ನಾ - Gandhi Maidan Bomb Blast Case - ಎಂಟು ವರ್ಷಗಳ ಹಿಂದೆ ಬಿಹಾರದ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನರೇಂದ್ರ ಮೋದಿಯವರ Hunkar Rallyಯಲ್ಲಿ ಸರಣಿ ಬಾಂಬ್ ಸ್ಫೋಟಗಳು (Humkar Rally Bomb Blast Case) ನಡೆದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ. ನ್ಯಾಯಾಲಯ ಈ ಪ್ರಕರಣದ  ನಾಲ್ವರು ಉಗ್ರರಿಗೆ ಮರಣದಂಡನೆ ವಿಧಿಸಿದ್ದು, ಇಬ್ಬರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ವೇಳೆ , ತನ್ನ ತೀರ್ಪು ನೀಡುವಾಗ, ಎನ್ಐಎ ವಿಶೇಷ ನ್ಯಾಯಾಲಯವು ಇತರ ಇಬ್ಬರು ಉಗ್ರರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಒಬ್ಬ ಭಯೋತ್ಪಾದಕನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಲ್ಲಾ 9 ಆರೋಪಿಗಳನ್ನು ಪಟ್ನಾದ ಬೇವೂರ್ ಜೈಲಿನಿಂದ NIA ಜೈಲಿಗೆ ಇಂದು ಬೆಳಗ್ಗೆ ಸಾಗಿಸಲಾಗಿತ್ತು. ಇದಕ್ಕೂ ಮೊದಲು ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಫಕ್ರುದ್ದೀನ್‌ನನ್ನು NIA ನ್ಯಾಯಾಲಯ  ಬಿಡುಗಡೆ ಮಾಡಿತ್ತು. ಇಂದು ಹೈದರ್ ಅಲಿ, ನುಮಾನ್ ಅನ್ಸಾರಿ, ಮಜಿಬುಲ್ಲಾ, ಉಮರ್ ಸಿದ್ದಿಕಿ, ಫಿರೋಜ್ ಅಸ್ಲಾಂ, ಇಮ್ತಿಯಾಜ್ ಆಲಂ ಸೇರಿದಂತೆ ಒಂಬತ್ತು ಮಂದಿಗೆ ಶಿಕ್ಷೆ ವಿಧಿಸಲು ದಿನಾಂಕ ನಿಗದಿಯಾಗಿತ್ತು. ಇದುವರೆಗೆ ನ್ಯಾಯಾಲಯ ಈ ಹಿಂದೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಫಕ್ರುದ್ದೀನ್‌ನನ್ನು ಎನ್‌ಐಎ ಕೋರ್ಟ್ ಬಿಡುಗಡೆ ಮಾಡಿತ್ತು. ಇಂದು ಹೈದರ್ ಅಲಿ, ನುಮಾನ್ ಅನ್ಸಾರಿ, ಮಜಿಬುಲ್ಲಾ, ಉಮರ್ ಸಿದ್ದಿಕಿ, ಫಿರೋಜ್ ಅಸ್ಲಾಂ, ಇಮ್ತಿಯಾಜ್ ಆಲಂ ಸೇರಿದಂತೆ ಒಂಬತ್ತು ಮಂದಿಗೆ ಶಿಕ್ಷೆ ವಿಧಿಸಲು ದಿನಾಂಕ ನಿಗದಿಯಾಗಿತ್ತು ಇದುವರೆಗೆ ಈ ಪ್ರಕರಣದಲ್ಲಿ (Humkar Rally Bomb Blast Verdict) ನ್ಯಾಯಾಲಯ ಒಟ್ಟು 187 ಜನರ ವಿಚಾರಣೆ ನಡೆಸಿದೆ. 

ಗಾಂಧಿ ಮೈದಾನದ ಸರಣಿ ಸ್ಫೋಟ ಪ್ರಕರಣದಲ್ಲಿ, 27 ಅಕ್ಟೋಬರ್ 2013 ರಂದು ಪಾಟ್ನಾದ ಗಾಂಧಿ ಮೈದಾನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರ ನಂತರ, ಅಕ್ಟೋಬರ್ 31, 2013 ರಂದು, ಎನ್ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತು ಮತ್ತು ನವೆಂಬರ್ 1 ರಂದು ದೆಹಲಿ ಎನ್ಐಎ ಪೊಲೀಸ್ ಠಾಣೆಯಲ್ಲಿ ಮತ್ತೆ ಎಫ್ಐಆರ್ ದಾಖಲಾಗಿತ್ತು. ಇದರಲ್ಲಿ ಅಪ್ರಾಪ್ತ ವಯಸ್ಕ ಸೇರಿದಂತೆ 12 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅವರಲ್ಲಿ ಒಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ. ಇದೇ ವೇಳೆ, ಬಾಲಾಪರಾಧಿ ಆರೋಪಿಗೆ ಈಗಾಗಲೇ ಬಾಲಾಪರಾಧ ಮಂಡಳಿಯು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಇದನ್ನೂ ಓದಿ-7th Pay Commission-ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! VDA ಹೆಚ್ಚಳ, ವೇತನದಲ್ಲಿ ಎಷ್ಟು ಏರಿಕೆ?

ಈ ಪ್ರಕರಣದಲ್ಲಿ ಐವರಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ
ಇದೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಐವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವುಗಳಲ್ಲಿ ಇಮ್ತಿಯಾಜ್, ಉಮರ್, ಅಜರ್, ಮೊಜಿಬುಲ್ಲಾ ಮತ್ತು ಹೈದರ್ ಹೆಸರುಗಳು ಶಾಮೀಲಾಗಿವೆ. ಬೋಧಗಯಾ ಸರಣಿ ಬಾಂಬ್ ಸ್ಫೋಟದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ-ಮಹಿಳೆಯರಿಗಾಗಿ ಕಾಂಗ್ರೆಸ್‌ನ ಪ್ರತ್ಯೇಕ ಪ್ರಣಾಳಿಕೆ, ಉಚಿತ ಸಿಲಿಂಡರ್ ಸೇರಿದಂತೆ ಹಲವು ದೊಡ್ಡ ಘೋಷಣೆ

ಪಟ್ನಾ ಜಂಕ್ಷನ್ ನಲ್ಲಿಯೂ ಒಂದು ಬ್ಲಾಸ್ಟ್ ಸಂಭವಿಸಿತ್ತು
ನರೇಂದ್ರ ಮೋದಿ ಅವರು ಪಾಟ್ನಾದಲ್ಲಿ ಹುಂಕಾರ್  ರ‍್ಯಾಲಿ (PM Modi Humkar Rally) ನಡೆಸಿದ್ದರು. ಆ ಸಮಯದಲ್ಲಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದಿಂದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆ ರ‍್ಯಾಲಿಯ ಹೊರತಾಗಿ, ಪಾಟ್ನಾ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 10 ನಲ್ಲಿಯೂ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ-ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ, ಏಮ್ಸ್ ನಿಂದ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News