NEET (UG) 2021: ಈ ವರ್ಷ ಒಂದು ಸಲ ಮಾತ್ರ `NEET ಪರೀಕ್ಷೆ`: ಸಚಿವ ರಮೇಶ್ ಪೋಖ್ರಿಯಾಲ್
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಪೋಖ್ರಿಯಾಲ್, `2021ರಲ್ಲಿ ನೀಟ್ (ಯುಜಿ) ಅನ್ನು ಎನ್ ಟಿಎ ಯಿಂದ ಒಂದು ಬಾರಿ ಮಾತ್ರ ನಡೆಸಲಾಗುತ್ತದೆ
ನವದೆಹಲಿ: ನೀಟ್ (ಯುಜಿ) 2021ರ ಪರೀಕ್ಷೆಯನ್ನ ನಡೆಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ದಿನಾಂಕವನ್ನ ಪ್ರಕಟಿಸಿದ ಕೆಲವೇ ದಿನಗಳಲ್ಲಿ, ಈ ವರ್ಷ ಕೇವಲ ಒಂದು ಬಾರಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಸೋಮವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಪೋಖ್ರಿಯಾಲ್, '2021ರಲ್ಲಿ ನೀಟ್ (UG) ಅನ್ನು ಎನ್ ಟಿಎ ಯಿಂದ ಒಂದು ಬಾರಿ ಮಾತ್ರ ನಡೆಸಲಾಗುತ್ತದೆ. ಈ ಸಂಬಂಧ ಯಾವುದೇ ಮನವಿ ಪತ್ರ ಬಂದಿಲ್ಲ ಎಂದು ಎನ್ ಟಿಎ ಮಾಹಿತಿ ನೀಡಿದೆ' ಎಂದು ಹೇಳಿದರು.
Tamil nadu Election 2021: 'ನಾಮಪತ್ರ' ಸಲ್ಲಿಸಿದ ಹಿರಿಯ ತಮಿಳು ನಟ ಕಮಲ್ ಹಾಸನ್!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ, ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತಕ ಕಾರ್ಯಕ್ರಮದ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಅನ್ನು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಎನ್ ಟಿಎ ನಡೆಸುತ್ತದೆ ಎಂದು ಸಚಿವರು ಪುನರುಚ್ಚರಿಸಿದರು.
ಜೆಎನ್‌ಯು ದೇಶದ್ರೋಹ ಪ್ರಕರಣ: 7 ಆರೋಪಿಗಳಿಗೆ ಜಾಮೀನು
ಕಳೆದ ವಾರ ಎನ್ ಟಿಎ ಪದವಿ ಪೂರ್ವ ವೈದ್ಯಕೀಯ ಕೋರ್ಸ್ʼಗಳ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ(NEET Exam)ಯನ್ನ ಆಗಸ್ಟ್ 1ರಂದು ನಡೆಸುವುದಾಗಿ ಪ್ರಕಟಿಸಿತ್ತು.
‘ನೀಟ್ (UG) - 2021 ರ ಪರೀಕ್ಷೆಯನ್ನ ಆಗಸ್ಟ್ 01 (ಭಾನುವಾರ) ಪೆನ್ ಮತ್ತು ಪೇಪರ್ ಮೋಡ್ ಮೂಲಕ ಹಿಂದಿ ಮತ್ತು ಇಂಗ್ಲಿಷ್(English) ಸೇರಿದಂತೆ 11 ಭಾಷೆಗಳಲ್ಲಿ ನಡೆಸಲಾಗುವುದು’ ಎಂದು ಎನ್ ಟಿಎ ಪ್ರಕಟಣೆ ತಿಳಿಸಿದೆ.
New Driving Licence: 'ಹೊಸ ಡ್ರೈವಿಂಗ್ ಲೈಸೆನ್ಸ್' ಗಾಗಿ ಅರ್ಜಿ ಸಲ್ಲಿಸುವವರೇ ದಯವಿಟ್ಟು ಗಮನಿಸಿ!
ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಂಎಸ್, ಬಿಎಚ್ ಎಂಎಸ್ ಕೋರ್ಸ್ʼಗಳ ಪ್ರವೇಶಕ್ಕೆ ಎನ್ ಟಿಎ(NTA) ಯಿಂದ ನೀಟ್ ಪರೀಕ್ಷೆ ನಡೆಸಲಾಗುತ್ತದೆ.
ಇತ್ತೀಚಿಗೆ TMC ಸೇರ್ಪಡೆಗೊಂಡ Yashwant Sinhaಗೆ ಮಹತ್ವದ ಜವಾಬ್ದಾರಿ ವಹಿಸಿದ ದೀದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.