ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನೀಟ್‌ ಯುಜಿ 2022ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ನೀಟ್‌ ಯುಜಿ ಪರೀಕ್ಷೆಯು ಜುಲೈ 17ರಂದು ಮಧ್ಯಾಹ್ನ 2 ರಿಂದ 5:20 ರವರೆಗೆ ನಡೆಯಲಿದೆ. ಪರೀಕ್ಷಾ ಶುಲ್ಕವನ್ನು ಯಶಸ್ವಿಯಾಗಿ ಪಾವತಿಸಿದ ಎಲ್ಲಾ ಅಭ್ಯರ್ಥಿಗಳು ನೀಟ್‌ ಯುಜಿ ಹಾಲ್ ಟಿಕೆಟ್‌ನ್ನು ಅಧಿಕೃತ ವೆಬ್‌ಸೈಟ್  neet.nta.nic.in ನಿಂದ ಡೌನ್‌ಲೋಡ್ ಮಾಡಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Unique Photos Of Animals: ವಾವ್‌.. ಎಂತಹ ಕ್ಲಿಕ್‌! ಇಲ್ಲಿವೆ ಬಲು ಅಪರೂಪದ ಫೋಟೋಗಳು


ಮತ್ತೊಂದೆಡೆ, ನೀಟ್‌ 2022 ರ ಅನೇಕ ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇಲಾಖೆಯು ಪರೀಕ್ಷೆಯನ್ನು ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು ಮತ್ತು ಮುಂದೂಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು, ಅದಕ್ಕೆ ಪೂರಕವಾಗಿ ಎಂಟ್ರಿ ಕಾರ್ಡ್‌ನನ್ನು ಬಿಡುಗಡೆ ಮಾಡಿದೆ. ನೀಟ್‌ ಅಥವಾ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯು ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳು, ನರ್ಸಿಂಗ್, ಪಶುವೈದ್ಯಕೀಯ ಮತ್ತು ಇತರ ಸಂಬಂಧಿತ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.


ನೀಟ್‌ ಯುಜಿ 2022 ಪ್ರವೇಶ ಕಾರ್ಡ್‌ ಹೀಗೆ ಡೌನ್‌ಲೋಡ್ ಮಾಡಿ: 


1. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು, ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಿ.


2. ವೆಬ್‌ಸೈಟ್‌ನ ಮುಖಪುಟದಲ್ಲಿ ನೀಟ್‌ ಪ್ರವೇಶ ಕಾರ್ಡ್ (NEET Entry Card) ಡೌನ್‌ಲೋಡ್ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.


3. ಈಗ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್‌ನಂತಹ ವಿನಂತಿಸಿದ ವಿವರಗಳನ್ನು ನಮೂದಿಸುವ ಮೂಲಕ ಇಲ್ಲಿ ಲಾಗಿನ್ ಮಾಡಿ.


4. ಈಗ ಪ್ರವೇಶ ಪತ್ರವು ಪರದೆಯ ಮೇಲೆ ಕಾಣುತ್ತದೆ. ನೀವು ಅದನ್ನು ಡೌನ್‌ಲೋಡ್ ಮಾಡಬಹುದು.


ಇದನ್ನೂ ಓದಿ: ರೇಶನ್ ಕಾರ್ಡ್ ಇದ್ದರೆ ಸರ್ಕಾರದ ವತಿಯಿಂದ ಸಿಗಲಿದೆ ಈ ಲಾಭ .!


14 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳು
ಈ ವರ್ಷ ಒಟ್ಟು 18,72,341 ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. NEET ಯುಜಿ ಪರೀಕ್ಷೆಯನ್ನು ಭಾರತದ 14 ನಗರಗಳು ಸೇರಿದಂತೆ ದೇಶಾದ್ಯಂತ 497 ನಗರಗಳಲ್ಲಿ ನಡೆಸಲಾಗುವುದು. ನೀಟ್‌ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದ ನಂತರ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೆಸರು, ಪರೀಕ್ಷೆಯ ದಿನದ ಮಾರ್ಗಸೂಚಿಗಳು, ಡ್ರೆಸ್ ಕೋಡ್ ಮತ್ತು ಸ್ವಯಂ-ಘೋಷಣೆ ನಮೂನೆಯಂತಹ ವಿವರಗಳನ್ನು ತಿಳಿದುಕೊಳ್ಳಬೇಕು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ