ನವದೆಹಲಿ: ನೇಪಾಳ ಸರ್ಕಾರ ಭಾರತದಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ. ನೇಪಾಳದ ಹೊಸ ವ್ಯವಸ್ಥೆಯಲ್ಲಿ, ಕಠ್ಮಂಡುವಿನಲ್ಲಿ ಲ್ಯಾಬ್ ಪರೀಕ್ಷೆಯ ನಂತರವೇ ಭಾರತೀಯ ಹಣ್ಣುಗಳು ಮತ್ತು ತರಕಾರಿಗಳಿಗೆ ಎನ್‌ಒಸಿ ಸಿಗಲಿದೆ. 


COMMERCIAL BREAK
SCROLL TO CONTINUE READING

ಎನ್‌ಒಸಿ ಪಡೆದ ನಂತರವಷ್ಟೇ ಭಾರತದ ಹಣ್ಣು-ತರಕಾರಿಗಳನ್ನು ನೇಪಾಳದಲ್ಲಿ ಮಾರಾಟ ಮಾಡಬಹುದಾಗಿದ್ದು, ತರಕಾರಿಗಳು ಲ್ಯಾಬ್ ಪರೀಕ್ಷೆಗೆ ಒಳಗಾಗದ ಹಿನ್ನೆಲೆಯಲ್ಲಿ ನೇಪಾಳದ ಕಸ್ಟಮ್ಸ್ ಇಲಾಖೆ ಹಣ್ಣು-ತರಕಾರಿ ತುಂಬಿದ್ದ ನೂರಾರು ಭಾರತೀಯ ಟ್ರಕ್‌ಗಳನ್ನು ಹಿಂದಿರುಗಿಸಿದೆ.


ಪರಿಣಾಮವಾಗಿ, ಇಂಡೋ-ನೇಪಾಳ ಗಡಿಯಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ತುಂಬಿದ ನೂರಾರು ಟ್ರಕ್‌ಗಳು ನಿಂತಿವೆ. ಕೆಲವು ಟ್ರಕ್ ಡ್ರೈವರ್‌ಗಳು ಸಿಕ್ಕಷ್ಟು ಬೆಲೆಗೆ ಹಣ್ಣು ಮತ್ತು ತರಕಾರಿಗಳನ್ನು ಹರಾಜು ಮಾಡಿ ಹಿಂದಿರುಗಿದ್ದಾರೆ. ಮಹಾರಾಜಗಂಜ್ ಜಿಲ್ಲಾಧಿಕಾರಿ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.