ನವದೆಹಲಿ: ಬಾಲಾಕೊಟ್ ನಲ್ಲಿರುವ ಜೈಶ್ ಇ ಮೊಹಮ್ಮದ್ ಉಗ್ರ ತಾಣಗಳ ಮೇಲೆ ದಾಳಿ ಮಾಡಿದ್ದ ಭಾರತದ ವಾಯುಸೇನೆ ಕಾರ್ಯದ ಹಿಂದೆ ನೇತ್ರ ಎನ್ನುವ ಯುದ್ದ ವಿಮಾನದ ಮಹತ್ವದ ಪಾತ್ರ ವಹಿಸಿದೆ.


COMMERCIAL BREAK
SCROLL TO CONTINUE READING

ಉಗ್ರರ ನೆಲೆಗಳ ಮೇಲೆ ಎಸೆಗಿದ ಕಾರ್ಯಾಚರಣೆ ಹಿಂದೆ ನೇತ್ರ ಯುದ್ದ ವಿಮಾನವು ರಾಡಾರ್ ರ ಗಳ ಮೇಲೆ ನಿಗಾವಹಿಸುವಲ್ಲಿ ಗಣನೀಯ ಪಾತ್ರವಹಿಸಿದೆ.ಡಿಆರ್ಡಿಓ ಅಭಿವೃದ್ದಿ ಪಡಿಸಿ ವಿನ್ಯಾಸಗೊಳಿಸಿರುವ ನೇತ್ರ ವಿಮಾನವು ಶತ್ರುಗಳ ವಿಮಾನಗಳ ಬಗ್ಗೆ ಮತ್ತು ಮಿಸೈಲ್ ಗಳ ಬಗ್ಗೆ ಮಾಹಿತಿಯನ್ನು ಪೈಲೆಟ್ ಗೆ ರವಾನಿಸುತ್ತದೆ.


ಡಿಆರ್ಡಿಓ ಮೂಲಗಳ ಪ್ರಕಾರ ನೇತ್ರ ಶತ್ರುಗಳ ಪ್ರದೇಶದ ಒಳಗೆ ಸುಮಾರು 450 ರಿಂದ 500 ಕಿಮಿ ದೂರದ ವರೆಗೆ ಗಡಿರೇಖೆಯನ್ನು ಉಲ್ಲಂಘಿಸದೆ ಗುರಿಯನ್ನು ಇಡಬಹುದು.ನೇತ್ರವು ದೆಹಲಿಯಲ್ಲಿರುವ ಕಾರ್ಯಾಚರಣೆ ನಿರ್ವಹಣಾ ಸ್ಥಳಕ್ಕೂ ಕೂಡ ಸಂಪರ್ಕಿಸುತ್ತದೆ. ಸುಮಾರು 5 ಗಂಟೆಗಳ ಕಾಲ ಹಾರಾಡುವ ಸಾಮರ್ಥ್ಯವನ್ನು ಹೊಂದಿರುವ ನೇತ್ರ, ಮರು ಇಂಧನ ತುಂಬಿದ ನಂತರ 9 ಗಂಟೆಗಳ ಕಾಲ ಹಾರಾಟ ನಡೆಸುತ್ತದೆ. ಇದು ಉಪಗ್ರಹಗಳ ಜೊತೆಗೂ ಕೂಡ ಸಂಪರ್ಕವನ್ನು ಹೊಂದಿದೆ. 


ನೇತ್ರ ಮೊದಲ ಬಾರಿಗೆ 2007 ರಲ್ಲಿ ಅಭಿವೃದ್ದಿಪಡಿಸುವ ಕಾರ್ಯವನ್ನು ಪ್ರಾರಂಭಿಸಲಾಯಿತು, ನಂತರ 2017 ರಲ್ಲಿ ಇದನ್ನು ಅಂತಿಮಗೊಳಿಸಲಾಯಿತು.