ಮುಂಬೈ: New Letter Bomb - ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ (Parambir Singh) ಅವರು ಮತ್ತೊಂದು ಲೆಟರ್ ಬಾಂಬ್ ಸಿಡಿಸಿದ್ದಾರೆ. ಈ ಬಾರಿ ಅವರು ಮಹಾರಾಷ್ಟ್ರದ ಹಾಲಿ DGP ಸಂಜಯ್ ಪಾಂಡೆ (DGP Sanjay Pandey) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ವಿರುದ್ಧದ ಆರೋಪಗಳನ್ನು ಹಿಂತೆಗೆದುಕೊಳ್ಳುವಂತೆ ಮಹಾರಾಷ್ಟ್ರದ ಡಿಜಿಪಿ ಸಂಜಯ್ ಪಾಂಡೆ ಕೇಳಿಕೊಂಡಿದ್ದಾರೆ ಎಂದು ಕೇಂದ್ರ ತನಿಖಾ ದಳಕ್ಕೆ (CBI) ಬರೆದ ಪತ್ರದಲ್ಲಿ ಪರಂಬೀರ್ ಸಿಂಗ್ (Parambir Singh) ಹೇಳಿದ್ದಾರೆ. ಪರಂಬೀರ್ ಪ್ರಕಾರ,  ಹೀಗೆ ಮಾಡುವುದರಿಂದ ಅವರ ವಿರುದ್ಧದ ತನಿಖೆ ನಿಲ್ಲಲಿದೆ ಎಂದು ಎಂದು ಸಂಜಯ್ ಪಾಂಡೆ ತಿಳಿಸಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Hafta Vasooli Case: ಹಫ್ತಾ ವಸೂಲಿ ಪ್ರಕರಣ - ಅನೀಲ್ ದೇಶ್ಮುಖ್ ಗೆ ಭಾರಿ ಹಿನ್ನಡೆ, CBI ತನಿಖೆಗೆ HC ಆದೇಶ


ಮಹಾರಾಷ್ಟ್ರದಲ್ಲಿ ಅನಿಲ್ ದೇಶ್ಮುಖ್ ವಿರುದ್ಧ ನಡೆಸಲಾಗುತ್ತಿರುವ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಲಾಗುತ್ತಿದೆ ಎಂದೂ ಪರಮಬೀರ್ ಅವರು ಆರೋಪಿಸಿದ್ದಾರೆ.  ಸುಮಾರು ಒಂದೂವರೆ ತಿಂಗಳ ಹಿಂದೆ ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (CM Uddhav Thackeray) ಅವರಿಗೆ ಬರೆದ ಪತ್ರದಲ್ಲಿ ಪರಂಬೀರ್ ಸಿಂಗ್,  ಅನಿಲ್ ದೇಶ್ಮುಖ್ ಅವರು ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಝೆ (Sachin Vaze) ಅವರಿಗೆ   ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ವಸೂಲಿ ಮಾಡುವ ಗುರಿಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು.


ಇದನ್ನೂ ಓದಿ-Param Bir Sing Letter Controversy- ರಾಜೀನಾಮೆ ನೀಡುತ್ತಾರೆಯೇ ಅನಿಲ್ ದೇಶ್ಮುಖ್? ಶರದ್ ಪವಾರ್ ಹೇಳಿದ್ದೇನು?


ಈ ಆರೋಪಗಳನ್ನು ಮುಂಬೈ ಮಾಜಿ ಉಪಮುಖ್ಯಮಂತ್ರಿ ಅನಿಲ್ ದೇಶ್ಮುಖ್ ತಳ್ಳಿಹಾಕಿದ್ದರು. ಆದರೆ, ಈ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಪ್ರಕರಣದ ಸಿಬಿಐ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನಿಲ್ ದೇಶ್ಮುಖ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಇದನ್ನೂ ಓದಿ- Maharashtra Home Minister: ತಿಂಗಳಿಗೆ ‘₹ 100 ಕೋಟಿ ಹಫ್ತಾ’ ಕೇಳಿದ ಗೃಹಸಚಿವ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.