Maharashtra Home Minister: ತಿಂಗಳಿಗೆ ‘₹ 100 ಕೋಟಿ ಹಫ್ತಾ’ ಕೇಳಿದ ಗೃಹಸಚಿವ..!

ಪರಮ್ ಬಿರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿರುವ ಪತ್ರವೊಂದು ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

Last Updated : Mar 20, 2021, 08:07 PM IST
  • ಪರಮ್ ಬಿರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿರುವ ಪತ್ರವೊಂದು ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
  • ಗೃಹಸಚಿವ ಅನಿಲ್ ದೇಶಮುಖ್ ಸಚಿನ್ ವಾಜೆಗೆ ತಿಂಗಳಿಗೆ 100 ರೂಪಾಯಿ ಸಂಗ್ರಹಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದರು.
  • ಮುಂಬೈ ಪೋಲಿಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ
Maharashtra Home Minister: ತಿಂಗಳಿಗೆ ‘₹ 100 ಕೋಟಿ ಹಫ್ತಾ’ ಕೇಳಿದ ಗೃಹಸಚಿವ..! title=

ಮುಂಬೈ: ಇತ್ತೀಚೆಗೆ ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಆಗಿರುವ ಪರಮ್ ಬಿರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರವೊಂದು ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಗೃಹಸಚಿವ ಅನಿಲ್ ದೇಶಮುಖ್(Anil Deshmukh) ಅವರು ಇತ್ತೀಚೆಗೆ ಎನ್‌ಐಎಯಿಂದ ಬಂಧಿತರಾಗಿರುವ ಸೂಪರ್ ಕಾಪ್ ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ರೂಪಾಯಿ ಸಂಗ್ರಹಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಿಜೆಐ ಎಸ್ ಎ ಬೋಬ್ದೆ ಉತ್ತರಾಧಿಕಾರಿಯನ್ನು ಶಿಫಾರಸ್ಸು ಮಾಡಲು ಕೇಳಿದ ಸರ್ಕಾರ

ಗೃಹಸಚಿವ ಅನಿಲ್ ದೇಶಮುಖ್ ಕೆಲವು ತಿಂಗಳುಗಳಲ್ಲಿ ತಮ್ಮ ಅಧಿಕೃತ ನಿವಾಸಕ್ಕೆ ಅನೇಕ ಬಾರಿ ಸಚಿನ್ ವಾಜೆ(Sachin Waze) ಅವರನ್ನು ಕರೆಸಿಕೊಂಡು ಹಣ ಸಂಗ್ರಹಿಸಿ ಕೊಡುವಂತೆ ಪದೇಪದೇ ಸೂಚನೆ ನೀಡಿರುವುದಾಗಿ ಪರಮ್ ಬಿರ್ ಸಿಂಗ್ ಪತ್ರದಲ್ಲಿ ಆರೋಪ ಮಾಡಿದ್ದಾರೆ.

American Dream & Promise Act: ಐದು ಲಕ್ಷಕ್ಕೂ ಹೆಚ್ಚು ಭಾರತೀಯರ ಕನಸು ಈಡೇರಿಸುವ ಮಸೂದೆಗೆ ಅಮೇರಿಕಾದ ಸಂಸತ್ತಿನ ಅಂಗೀಕಾರ

ಮುಂಬೈ ಪೋಲಿಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಗೃಹ ಸಚಿವರು ಅನೇಕ ಸಲ ಮನೆಗೆ ಕರೆಸಿಕೊಂಡಿದ್ದರು. ಮುಂಬೈ(Mumbai)ನಲ್ಲಿ ಸುಮಾರು 1750 ಬಾರ್ ಅಂಡ್ ರೆಸ್ಟೋರೆಂಟ್ ಗಳಿವೆ. ಪ್ರತಿಯೊಂದರಿಂದ ತಲಾ ಎರಡರಿಂದ ಮೂರು ಲಕ್ಷ ರೂಪಾಯಿ ಸಂಗ್ರಹಿಸಿದಲ್ಲಿ ಮಾಸಿಕ 40 ರಿಂದ 50 ಕೋಟಿ ರೂಪಾಯಿ ಸಂಗ್ರಹಿಸಬಹುದು. ಹೀಗೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ತಿಂಗಳಿಗೆ 100 ಕೋಟಿ ರೂಪಾಯಿ ಕೊಡುವಂತೆ ಗೃಹ ಸಚಿವರು ಬೇಡಿಕೆ ಇಟ್ಟಿದ್ದರು ಎಂದು ಪತ್ರ ಬರೆಯಲಾಗಿದೆ.

Kisan Samman Nidhi: ರೈತರಿಗೆ ಸಿಹಿ ಸುದ್ದಿ; ಕಿಸಾನ್ ಸಮ್ಮಾನ್ ನಿಧಿಯ 8ನೇ ಕಂತಿನ ಹಣ ಖಾತೆಗೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News