ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ಸಂಸತ್ ಭವನದ ಭೂಮಿ ಪೂಜೆ ನೆರವೆರಿಸಲಿದ್ದಾರೆ. ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಹೊಸ ಸಂಸತ್‌ ಕಟ್ಟಡದಲ್ಲಿ ಆಚರಿಸಬೇಕೆಂದು ನಿರ್ಧರಿಸಿರುವ ಕೇಂದ್ರ ಸರ್ಕಾರ 2022ರ ಅಕ್ಟೋಬರ್ ವೇಳೆಗೆ ಹೊಸ ಕಟ್ಟಡದ ನಿರ್ಮಾಣವನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿರುವ ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಗಾತ್ರವು ಈಗಿರುವ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ರಾಜ್ಯಸಭೆಯ ಗಾತ್ರವೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಇಂದು ನಡೆಯಲಿರುವ ಹೊಸ ಸಂಸತ್ ಭವನದ ಭೂಮಿ ಪೂಜೆಗೆ 200 ಜನರನ್ನು ಆಹ್ವಾನಿಸಲಾಗಿದೆ. ಕೇಂದ್ರ ಕ್ಯಾಬಿನೆಟ್ ಸಚಿವರು, ರಾಜ್ಯ ಸಚಿವರು, ಸಂಸದರು ಸೇರಿದಂತೆ ಎಲ್ಲರೂ ಭೂಮಿ ಪೂಜಾನ್ ಸಮಾರಂಭದಲ್ಲಿ ನೇರ ವೆಬ್‌ಕಾಸ್ಟ್‌ಗಳ ಮೂಲಕ ಹಾಜರಾಗಲಿದ್ದಾರೆ.  


ಒಟ್ಟು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಸಂಸತ್ ಕಟ್ಟಡವನ್ನು (New Parliament Building) ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸಲಿದೆ. ಹೊಸ ಸಂಸತ್ ಭವನದ ವಿನ್ಯಾಸವನ್ನು ಎಚ್‌ಸಿಪಿ ವಿನ್ಯಾಸ ಯೋಜನೆ ಮತ್ತು ನಿರ್ವಹಣಾ ಖಾಸಗಿ ಲಿಮಿಟೆಡ್ ಸಿದ್ಧಪಡಿಸಿದೆ. ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಪ್ರಕಾರ ಹೊಸ ಸಂಸತ್ತಿನ ಕಟ್ಟಡವು ಹೊಸ ಭಾರತದ ಅಗತ್ಯತೆಗಳಿಗೆ ಅನುಗುಣವಾಗಿರುತ್ತದೆ. ಮುಂದಿನ 100 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ  ಸಮಸ್ಯೆಯಾಗುವುದಿಲ್ಲ.


ಸಿದ್ಧವಾಗಲಿದೆ ನೂತನ ಸಂಸತ್ ಭವನ, ಸಂಸದರಿಗೆ ಸಿಗಲಿವೆ ಆಧುನಿಕ ಸೌಲಭ್ಯಗಳು


Lok Sabha) ನಿರ್ಮಾಣಲಿದ್ದು, 1,145 ಚ.ಮೀಟರ್ ವಿಸ್ತೀರ್ಣದಲ್ಲಿ 543 ಆಸನಗಳ ಬದಲಿಗೆ 888 ಆಸನಗಳ ವ್ಯವಸ್ಥೆ ಮಾಡಲಾಗುವುದು.
* 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆ (Rajya Sabha) ನಿರ್ಮಾಣವಾಗಲಿದ್ದು, 1,232 ಚ.ಮೀಟರ್ ವಿಸ್ತೀರ್ಣದಲ್ಲಿ 245 ಸ್ಥಾನಗಳ ಬದಲಾಗಿ 384 ಆಸನಗಳು ಇರಲಿವೆ ಎಂದು ತಿಳಿದುಬಂದಿದೆ.
* ಪ್ರತಿ ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿದ್ದು ಜಂಟಿ ಅಧಿವೇಶನ ನಡೆಯುವ ಸಮಯದಲ್ಲಿ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕೂರಲು ಅವಕಾಶ ಕಲ್ಪಿಸಬಹುದಾಗಿದೆ.


ನೂತನ ಸಂಸತ್ ಭವನಕ್ಕೆ ಆರು ಪ್ರವೇಶದ್ವಾರಗಳು:
ಹೊಸ ಸಂಸತ್ ಸಂಕೀರ್ಣ ನಾಲ್ಕು ಮಹಡಿಗಳನ್ನು ಹೊಂದಿರಲಿದ್ದು ಒಟ್ಟು ಆರು ಪ್ರವೇಶದ್ವಾರಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭಾಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಂಸದರಿಗಾಗಿ ಮತ್ತೊಂದು ದ್ವಾರ, ಸಾಮಾನ್ಯ ದ್ವಾರ ಮತ್ತು ಸಾರ್ವಜನಿಕರಿಗಾಗಿ ಎರಡು ಪ್ರವೇಶ ದ್ವಾರಗಳು ಇರಲಿವೆ ಎಂದು ತಿಳಿದುಬಂದಿದೆ.


ನೂತನ ಸಂಸತ್ ಕಟ್ಟಡ ನಿರ್ಮಾಣದ ಬಿಡ್ ಗೆದ್ದ ಟಾಟಾ ಪ್ರೊಜೆಕ್ಟ್


ಹೊಸ ಕಟ್ಟಡದ ಅಲಂಕಾರವು ಭಾರತೀಯ ಸಂಸ್ಕೃತಿ, ಪ್ರಾದೇಶಿಕ ಕಲೆಗಳು, ಕರಕುಶಲ ವಸ್ತುಗಳು ಮತ್ತು ವಾಸ್ತುಶಿಲ್ಪದ ವೈವಿಧ್ಯತೆಯ ಸಮೃದ್ಧ ಮಿಶ್ರಣವನ್ನು ಹೊಂದಿರುತ್ತದೆ. ವಿನ್ಯಾಸ ಯೋಜನೆಯಲ್ಲಿ ಕೇಂದ್ರ ಸಾಂವಿಧಾನಿಕ ಗ್ಯಾಲರಿಗೆ ಸ್ಥಾನ ನೀಡಲಾಗಿದೆ. ಸಾಮಾನ್ಯ ಜನರು ಅದನ್ನು ನೋಡಲು ಸಾಧ್ಯವಾಗುತ್ತದೆ. ಇದಲ್ಲದೆ ಪರಿಸರ ಸ್ನೇಹಿ ಕೆಲಸದ ಶೈಲಿಯನ್ನು ಸಹ ಬಳಸಲಾಗುತ್ತದೆ. ಹೊಸ ಕಟ್ಟಡವು ಉತ್ತಮ ಗುಣಮಟ್ಟದ ಧ್ವನಿ ಮತ್ತು ಆಡಿಯೊ-ದೃಶ್ಯ ಸೌಲಭ್ಯಗಳು, ಆರಾಮದಾಯಕ ಆಸನ, ತುರ್ತು ಸ್ಥಳಾಂತರಿಸುವಿಕೆ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.