ಹೊಸ ಸಂಸತ್ ಭವನದ ನಿರ್ಮಾಣದ ಕುರಿತು ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹೊಸ ಸಂಕೀರ್ಣವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕು ಎಂದು ಹೇಳಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಹೊಸ ಸಂಸತ್ ಭವನದ ಉದ್ಘಾಟನೆಯನ್ನು ನೋಡಿ ಸಂತೋಷಪಡಲಿಲ್ಲ ಎಂದು ಭಾನುವಾರ ಹೇಳಿದ್ದಾರೆ.ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬಳಿಕ ಶರದ್ ಪವಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳ ಕಲಾವೈಭವ, ವಸ್ತುಗಳು ಈ ನೂತನ ಸಂಸತ್ ಭವನದಲ್ಲಿವೆ. ಉತ್ತರ ಪ್ರದೇಶದ ಕಾರ್ಪೆಟ್ಗಳ, ಮಹಾರಾಷ್ಟ್ರ ತೇಗ, ರಾಜಸ್ಥಾನದ ಕೆಂಪು ಮತ್ತು ಬಿಳಿ ಕಲ್ಲು ಸೇರಿದಂತೆ ವಿವಿಧ ರಾಜ್ಯಗಳ ವಸ್ತುಗಳ ಸಂಸತ್ ಭವನದಲ್ಲಿ ಅಲಂಕರಿಸಿವೆ.
New Parliament Boycott: ಹೊಸ ಸಂಸತ್ ಭವನದ ಉದ್ಘಾಟನೆಯ ನಂತರವೂ ರಾಜಕೀಯ ಗದ್ದಲ ಮುಂದುವರೆದಿದೆ. ಈ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಆರ್ ಜೆಡಿ ಮಾಡಿದೆ. ಹೊಸ ಸಂಸತ್ ಭವನದ ಕುರಿತು ಆರ್ಜೆಡಿಯ ಟ್ವೀಟ್ ಸಮರ ಆರಂಭವಾಗಿದೆ.
ಮೇ 28 ರಂದು ಅಂದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ನೂತನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. 21 ವಿರೋಧ ಪಕ್ಷಗಳು ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿವೆ. ಮೇ 28 ರಂದು ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಗೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ.
Sengol History : ʼತಿರುವಾಡುತುರೈ ಅಧೀನಂʼ ಅವರ ಪರ ತಮಿಳುನಾಡಿನಲ್ಲಿ ರಾಜದಂಡವನ್ನು ತಯಾರಿಸಲಾಯಿತು. ಭಾರತದ ಸ್ವಾತಂತ್ರ್ಯದ ಸಾಕ್ಷಿಯಾಗಿ ಮಾಜಿ ಪ್ರಧಾನಿ ನೆಹರೂ ಅವರಿಗೆ ಈ ದಂಡವನ್ನು ನೀಡಲಾಯಿತು ಎಂದು ಹೇಳಲಾಗುತ್ತದೆ. 100 ಸಾವನ್ ಚಿನ್ನ ಮತ್ತು 5 ಅಡಿ ಉದ್ದದ ಈ ರಾಜದಂಡವನ್ನು 'ಚೋಳ ರಾಜದಂಡ' ಎಂದೂ ಸಹ ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.