ನವದೆಹಲಿ : Auto Debit Fail from April 1 : ಮೊಬೈಲ್ ಬಿಲ್, ವಿದ್ಯುತ್ ಬಿಲ್ ಅಥವಾ ಇನ್ನಾವುದೇ ಯುಟಿಲಿಟಿ ಬಿಲ್ ಪಾವತಿಸಲು Auto Debit  ಸಿಸ್ಟಮ್ ಅನ್ನು ಇರಿಸಿಕೊಂದಿದ್ದರೆ, ಸಮಸ್ಯೆ ಎದುರಾಗಬಹುದು. ಏಕೆಂದರೆ ರಿಸರ್ವ್ ಬ್ಯಾಂಕ್ ನ Additional Factor Authentication (AFA) ಗಾಗಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಮಾರ್ಚ್ 31 ಕೊನೆಯ ದಿನವಾಗಿದೆ. ಏಪ್ರಿಲ್ ಒಂದರಿಂದ Auto Debitಗೆ ಸಂಬಂಧಪಟ್ಟಂತೆ ಹೊಸ ನಿಯಮಗಳು ಜಾರಿಗೆ ಬರಲಿವೆ.  


COMMERCIAL BREAK
SCROLL TO CONTINUE READING

ಏಪ್ರಿಲ್ 1 ರಿಂದ, ಬಿಲ್ ಪಾವತಿ, Auto Debitನಲ್ಲಿ ಸಮಸ್ಯೆ ಎದುರಾಗಲಿದೆ :  
ಈ ಮಾರ್ಗಸೂಚಿಗಳು ಡೆಬಿಟ್ (Debit card) ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರಿಕರಿಂಗ್ ಪೇಮೆಂಟ್ ಗೆ ಅನ್ವಯವಾಗುತ್ತದೆ. ಅಲ್ಲದೆ, OTT ಚಂದಾದಾರಿಕೆಗಳು ಮತ್ತು ಡಿಜಿಟಲ್ ಸುದ್ದಿ ಚಂದಾದಾರಿಕೆಗಳ ಆಟೋ ಡೆಬಿಟಲ್ ಗೂ ಅನ್ವಯವಾಗುತ್ತದೆ.  ಆರ್‌ಬಿಐನ ಈ ನಿರ್ಧಾರದ ಪರಿಣಾಮ ಲಕ್ಷಾಂತರ ಚಂದಾದಾರರ ಮೇಲೆ ಬೀಳಲಿದೆ. ಏಕೆಂದರೆ ಏಪ್ರಿಲ್ 1 ರಿಂದ ಬಿಲ್‌ಗಳು ಮತ್ತು ಸಬ್ಸ್ಕ್ರಿಪ್ಶನ್ ಆಟೋ ಡೆಬಿಟ್  ಆಗುವುದಿಲ್ಲ.


ಇದನ್ನೂ ಓದಿ : Petrol Price Today : ನಾಲ್ಕು ದಿನಗಳ ನಂತರ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ
 
ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸದ ಬ್ಯಾಂಕುಗಳು : 
 e-mandates ಗೆ ಒಪ್ಪಿಗೆ ಸೂಚಿಸಿರುವ ಗ್ರಾಹಕರ ಬಿಲ್ ಪಾವತಿ ಏಪ್ರಿಲ್ 1 ರ ನಂತರ ವಿಫಲವಾಗಬಹುದು ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಗ್ರಾಹಕರಿಗೆ ಎಚ್ಚರಿಸಿದೆ.  ಅನೇಕ ಬ್ಯಾಂಕುಗಳು ಇನ್ನು ಕೂಡಾ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ. ಆರ್‌ಬಿಐ  (RBI) ಮಾರ್ಗಸೂಚಿಗಳ ಪ್ರಕಾರ ನೋಂದಣಿ, ಟ್ರ್ಯಾಕಿಂಗ್, ಮೋಡಿಫಿಕಶನ್ ಮತ್ತು withdrawal ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. 


2000 ಕೋಟಿ ರೂಪಾಯಿಗಳ ಪಾವತಿಯ ಮೇಲೆ ಪರಿಣಾಮ ಬೀರಲಿದೆ : 
ಏಪ್ರಿಲ್‌ನಲ್ಲಿ 2000 ಕೋಟಿ ರೂ.ಗಳವರೆಗೆ ಪಾವತಿ ಮೇಲ ಇದು ಪರಿಣಾಮ ಬೀರಬಹುದು. ಇದು ಕಾರ್ಡ್‌ಗಳು, ಯುಟಿಲಿಟಿ ಬಿಲ್‌ಗಳು,(Utility bill) ಒಟಿಟಿ ಮತ್ತು ಮಾಧ್ಯಮ ಚಂದಾದಾರಿಕೆಗಳು ಮತ್ತು ಎಂಎಸ್‌ಎಂಇಗಳು, ಕಾರ್ಪೊರೇಟ್‌ಗಳಂತಹ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿದೆ. e-mandates  ಪ್ರಕ್ರಿಯೆ ಪೂರ್ಣಗೊಳಿಸಲು, ಬ್ಯಾಂಕುಗಳಿಗೆ (Bank) ಆರ್‌ಬಿಐ ಎರಡು ಸುತ್ತೋಲೆಗಳನ್ನು ನೀಡಿದೆ.   ಈ ಪ್ರಕ್ರಿಯೆ ಪೂರ್ಣಗೊಳಿಸಲು ಮಾರ್ಚ್ ೩೧ ಅಂದರೆ ನಾಳೆಯ ಗಡುವು ನೀಡಲಾಗಿದೆ. 


ಇದನ್ನೂ ಓದಿ : PAN-Aadhaar Link: ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ?


ಏನು ಹೇಳುತ್ತೆ ಆರ್‌ಬಿಐನ ಹೊಸ ಮಾರ್ಗಸೂಚಿಗಳು : 
ಹೊಸ ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕುಗಳು ಪಾವತಿ ದಿನಾಂಕಕ್ಕೆ 5 ದಿನಗಳ ಮೊದಲು ನೋಟಿಫಿಕೇಶನ್ (Notification) ಕಳುಹಿಸಬೇಕಾಗುತ್ತದೆ.  ಗ್ರಾಹಕರು ಅದನ್ನು ಅನುಮೋದಿಸಿದಾಗ ಮಾತ್ರ ಪಾವತಿಯನ್ನು ಸ್ವೀಕರಿಸಲಾಗುತ್ತದೆ.  ಒಂದು ವೇಳೆ  ಪಾವತಿ 5000 ರೂ.ಗಿಂತ ಹೆಚ್ಚಿದ್ದರೆ, ಬ್ಯಾಂಕುಗಳು ಗ್ರಾಹಕರಿಗೆ ಒಟಿಪಿ (OTP) ಕಳುಹಿಸಬೇಕಾಗುತ್ತದೆ. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.


ಪಾವತಿಯ ಇತರ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ :
ಬ್ಯಾಂಕುಗಳು ಮತ್ತು ವ್ಯಾಪಾರಿಗಳು ಪರ್ಯಾಯವನ್ನು ಕಂಡುಕೊಳ್ಳುವವರೆಗೆ,  ಗ್ರಾಹಕರು  ವ್ಯಾಪಾರಿಗಳ ಪೇಮೆಂಟ್ ಪೇಜ್ ಗೆ ಹೋಗಿ ಪಾವತಿ ಮಾಡಬೇಕಾಗುತ್ತದೆ. ಇನ್ನೊಂದುವಿಚಾರ ಎಂದರೆ, UPI’s AutoPay ಮೂಲಕ ಪಾವತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ (SBI) ಇಂಡಿಯಾದಂತಹ ಪ್ರಮುಖ ಬ್ಯಾಂಕುಗಳು ತಮ್ಮ ನೆಟ್‌ವರ್ಕ್ ಪಾಲುದಾರರಿಗೆ ರೆಕರಿಂಗ್ ಪೇಮೆಂಟ್  ಪ್ರಕ್ರಿಯೆಯ ಸೂಚನೆಗಳನ್ನು ಅನುಸರಿಸುವಂತೆ ಸೂಚಿಸಿವೆ. 


ಇದನ್ನೂ ಓದಿ : TRAI ನಿಂದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿ ಬಿಡುಗಡೆ


ಈ ಹಿಂದೆ, ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳು, ಪೇಮೆಂಟ್  ಗೇಟ್‌ವೇಗಳು ಮತ್ತು ಇತರ ಸೇವಾ ಪೂರೈಕೆದಾರರಿಗೆ ತಮ್ಮ ಕಾರ್ಡ್ ವಿವರಗಳನ್ನು ಶಾಶ್ವತವಾಗಿ ಸ್ಟೋರ್ ಮಾಡದಂತೆ ಸೂಚಿಸಿತ್ತು.  ಇದರಿಂದ ರೆಕರಿಂಗ್ ಪೇಮೆಂಟ್ ಇನ್ನಷ್ಟು ಕಷ್ಟವಾಗಲಿದೆ.  Juspay  ಮತ್ತು ನಿಯೋ ಬ್ಯಾಂಕಿಂಗ್ ಸ್ಟಾರ್ಟ್ಅಪ್ Chqbook  ಅಲ್ಲಿ  ಡೇಟಾ ಸೋರಿಕೆಯ ಘಟನೆಗಳು ಸಂಭವಿಸಿದ ನಂತರ ಆರ್ ಬಿಐ ಈ ಕ್ರಮಗಳನ್ನು ಕೈಗೊಂಡಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.