ಉತ್ತರಪ್ರದೇಶ: ಉತ್ತರಪ್ರದೇಶದಲ್ಲಿ ಸಿನಿಮಾವನ್ನೂ ಮೀರಿಸುವಂತಹ ಮತ್ತೊಂದು ಘಟನೆ ನಡೆದಿದೆ. ಯುಪಿಯ ಮೈನ್ಪುರಿ(Mainpuri)ಯಲ್ಲಿ ಆಗತಾನೇ ಮದುವೆಯಾದ ವಧು ಅಪಾರ ಚಿನ್ನಾಭರಣ, ನಗದು ಹಣದೊಂದಿಗೆ ಎಸ್ಕೇಪ್ ಆಗಿದ್ದಾಳೆ. ಈ ಘಟನೆಯು 2015ರಲ್ಲಿ ತೆರೆಕಂಡ ಸೋನಮ್ ಕಪೂರ್ ನಟನೆಯ ‘ಡಾಲಿ ಕಿ ಡೋಲಿ’ ಬಾಲಿವುಡ್ ಸಿನಿಮಾದ ಕಥಾವಸ್ತುವನ್ನೇ ಹೋಲುತ್ತದೆ.  


COMMERCIAL BREAK
SCROLL TO CONTINUE READING

ಹೊಸದಾಗಿ ಮದುವೆಯಾದ ವಧು(Bride) ತನ್ನ ಪತಿಯೊಂದಿಗೆ ಅತ್ತೆ ಮನೆಗೆ ಹೋಗಿದ್ದಾಳೆ. ಹಾಗೆ ಹೋದವಳು ಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದರಿಂದ ಹೊಸದಾಗಿ ಮದುವೆಯಾದ ವರ ಪೆಚ್ಚಾಗಿದ್ದು, ಆತನ ಕುಟುಂಬಸ್ಥರು ಒಡವೆ ಮತ್ತು ಹಣ ಕಳೆದುಕೊಂಡು ರೋಧಿಸುವಂತಾಗಿದೆ.


ಇದನ್ನೂ ಓದಿ: PM Awas Yojana ಯ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಡಿಟೈಲ್ಸ್ 


ಮಾಧ್ಯಮಗಳ ವರದಿಯ ಪ್ರಕಾರ, ಮೈನ್ಪುರಿಯ ಬೇವಾರ್ ಪೊಲೀಸ್ ಠಾಣಾ(Bewar police station) ಪ್ರದೇಶದ ಪರೌಂಖಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜು ಎಂಬ ಯುವಕನ ಮದುವೆಯನ್ನು ಮಧ್ಯವರ್ತಿಯ ಮೂಲಕ ನಿಶ್ಚಿಯಿಸಲಾಗಿತ್ತು. ಮದುವೆಗೂ ಮುನ್ನ ರಾಜುವಿನ ತಂದೆಗೆ ಮಧ್ಯವರ್ತಿಯು ಒಂದು ಷರತ್ತು ವಿಧಿಸಿದ್ದ. ನಿಮ್ಮ ಮಗನ ಮದುವೆಯಾಗಬೇಕೆಂದರೆ ಹುಡುಗಿಗೆ 80 ಸಾವಿರ ರೂ. ನೀಡಬೇಕು ಎಂದು ಹೇಳಿದ್ದ. ವಯಸ್ಸಾದರೂ ತನ್ನ ಮಗ ರಾಜುವಿಗೆ ಹೆಣ್ಣು ಸಿಗದ ಕಾರಣ ಮಧ್ಯವರ್ತಿಯ ಷರತ್ತಿಗೆ ಆತನ ತಂದೆ ಒಪ್ಪಿಕೊಂಡಿದ್ದರು.


ಒಪ್ಪಂದದ ಪ್ರಕಾರ, ಹುಡುಗಿಯೊಬ್ಬಳು 80 ಸಾವಿರ ರೂ. ಹಣ(Cash) ತೆಗೆದುಕೊಂಡು ಆಗಸ್ಟ್ 17 ರಂದು ಶೀಟ್ಲಾ ಧಾಮ ದೇವಸ್ಥಾನದಲ್ಲಿ ರಾಜುವನ್ನು ಮದುವೆಯಾಗಿದ್ದಳು. ಇದರ ಜೊತೆಗೆ ರಾಜು ಅವರ ತಂದೆ ರಾಜೇಂದ್ರ ತನ್ನ ಸೊಸೆಗೆ ಬಟ್ಟೆ, ಆಭರಣಗಳು ಮತ್ತು ಅನೇಕ ಉಡುಗೊರೆಗಳನ್ನೂ ನೀಡಿದ್ದರು. ಮದುವೆ ಮುಗಿದ ಬಳಿಕ ರಾಜು ವಧುವಿನೊಂದಿಗೆ ತನ್ನ ಮನೆಗೆ ಹೊರಟಿದ್ದನು. ನೂತನ ದಂಪತಿ ತಮ್ಮೂರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ವಧು ತನಗೆ ಬಾಯಾರಿಕೆಯಾಗಿದೆ ಎಂದು ರಾಜುಗೆ ನೀರಿನ ಬಾಟಲಿ ತರುವಂತೆ ಹೇಳಿದ್ದಾಳೆ.  ಇಲ್ಲಿಯೇ ಇರು ನೀರು ತರುತ್ತೇನೆಂದು ರಾಜು ಅಂಗಡಿಗೆ ತೆರಳಿದ್ದಾನೆ.


ಇದನ್ನೂ ಓದಿ: ನೀವೂ ಕೆಲಸ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ನಿರುದ್ಯೋಗ ಭತ್ಯೆಗಾಗಿ ಇಲ್ಲಿ ನೋಂದಾಯಿಸಿಕೊಳ್ಳಿ


ರಾಜು ನೀರಿನ ಬಾಟಲಿಯೊಂದಿಗೆ ಹಿಂತಿರುಗಿದಾಗ ವಧು ಸ್ಥಳದಿಂದ ಕಣ್ಮರೆಯಾಗಿದ್ದಳು. ಆತ ಎಷ್ಟು ಹುಡುಕಿದರೂ ಆಕೆ ಆತನಿಗೆ ಸಿಕ್ಕಿಲ್ಲ. ರಾಜುವನ್ನು ಮದುವೆಯಾಗಿದ್ದ ಯುವತಿ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಮತ್ತು ನಗದಿನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಇದರಿಂದ ಹೊಸದಾಗಿ ಮದುವೆಯಾದ ರಾಜುಗೆ ಆಘಾತವಾಗಿದೆ. ಯುವತಿಯಿಂದ ಮೋಸ ಮತ್ತು ವಂಚನೆಗೊಳಗಾದ ಆತ ಆಕೆಯ ವಿರುದ್ಧ ಪೊಲೀಸ(UP Police)ರಿಗೆ ದೂರು ನೀಡಿದ್ದಾನೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.