ನವದೆಹಲಿ: ತಾಜ್ ಮಹಲ್ ಹತ್ತಿರದ ಭಾಗದಲ್ಲಿರುವ ವಾಯು ಮಾಲಿನ್ಯದಿಂದಾಗಿ ಈ ಐತಿಹಾಸಿಕ ಸ್ಮಾರಕದ ಮೇಲೆ ಪರಿಕೂಲವಾದ ಪರಿಣಾಮ ಬೀರುತ್ತದೆ ಎಂದು ಹಸಿರು ನ್ಯಾಯಾಧಿಕರಣ ಇಂದು ಪ್ರಾಚ್ಯ ಇಲಾಖೆಗೆ (ಎಎಸ್ಐ) ನೋಟಿಸ್  ನೀಡಿದೆ. 


COMMERCIAL BREAK
SCROLL TO CONTINUE READING

ನ್ಯಾಯಾಧೀಶ ಎಸ್.ಪಿ. ವಾಂಗ್ಡಿ ಮತ್ತು ಎಕ್ಸ್ಪರ್ಟ್ ಸದಸ್ಯ ಎಸ್.ಎಸ್.ಗಾರ್ಬಿಯಾಲ್ ಒಳಗೊಂಡ ಪೀಠವು  ಈ ಸ್ಮಾರಕಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ  ನೋಟಿಸ್ಗಳನ್ನು ನೀಡಿದೆ ಆದರೆ ಇದುವರೆಗೂ ಎಎಸ್ಐದಿಂದ ಯಾವುದೇ  ಪ್ರತಿಕ್ರಿಯೆ ಬಂದಿಲ್ಲ ಎಂದು ಅದು ತಿಳಿಸಿದೆ.


ಇಂದು ಎಲ್ಲ ಪಕ್ಷಗಳ ಸಲಹೆಯನ್ನು ಕೇಳಿದ ನಂತರ ಮತ್ತು ವಿವಿಧ ಮೇಲ್ಮನವಿಗಳನ್ನು ಪರಿಗಣಿಸಿ  ಸೂಕ್ತ ಕ್ರಮಗೊಳ್ಳಲು ಎಎಸ್ಐ ಉಪಸ್ಥಿತಿ ಅವಶ್ಯವೆಂದು ಅದು ಅಭಿಪ್ರಾಯಪಟ್ಟಿದೆ. ಈಗಾಗಲೇ ಈ ಕುರಿತಾಗಿ ಫೆಬ್ರವರಿ 13 ಕ್ಕೆ ಮುಂಚಿತವಾಗಿ ಸ್ಪಷ್ಟನೆ ಕೋರಿ ನೋಟಿಸ್ ನ್ನು ಎಎಸ್ಐಗೆ ರವಾನಿಸಲಾಗಿದೆ ಎಂದು ಹಸಿರು ಪೀಠ ತಿಳಿಸಿದೆ.


ಈ ಹಿಂದೆ ಉತ್ತರ ಪ್ರದೇಶ ಸರಕಾರ, ತಾಜ್ ಟ್ರೆಪೆಜಿಯಮ್ ವಲಯ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಾಧಿಕರಣವು ನೋಟಿಸ್ ನೀಡಿ ಅವರಿಂದ ಉತ್ತರವನ್ನು ಕೇಳಿತ್ತು.


ಆಗ್ರಾದ ನಿವಾಸಿ ರಾಮನ್ ಎನ್ನುವರು ಮಾಲಿನ್ಯದಿಂದಾಗಿ  ತಾಜ್ ಮಹಲ್ ನ ಸೌಂದರ್ಯ ನಶಿಸಿಹೊಗುತ್ತಿರುವುದಕ್ಕೆ  ನ್ಯಾಯಾಧಿಕರಣದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.