ಬಿಹಾರ : ಬಿಹಾರದ ಹಲವು ಜಿಲ್ಲೆಗಳಲ್ಲಿ ಎನ್‌ಐಎ ತಂಡ ದಾಳಿ ನಡೆಸುತ್ತಿದೆ. ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಯುತ್ತಿವೆ. ಮಧುಬನಿ, ಚಾಪ್ರಾ, ಅರಾರಿಯಾ ಸೇರಿದಂತೆ ಇನ್ನೂ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ  ನಡೆಯುತ್ತಿವೆ. ಫುಲ್ವಾರಿ ಪ್ರಕರಣದ ಆರೋಪಿ ಪರ್ವೇಜ್ ಮನೆ ಮೇಲೂ ಎನ್‌ಐಎ ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

ಪಿಎಫ್‌ಐ ಮುಖಂಡನ ಮನೆ ಮೇಲೆ ದಾಳಿ :
ಮಾಹಿತಿಯ ಪ್ರಕಾರ, ಅರಾರಿಯಾದ ಜೋಕಿಹತ್‌ನಲ್ಲಿಯೂ ಎನ್‌ಐಎ ದಾಳಿ ನಡೆಸಲಾಗಿದೆ. ಅರಾರಿಯಾದಲ್ಲಿರುವ ಎಹ್ಸಾನ್ ಪರ್ವೇಜ್ ಮನೆಯ ಮೇಲೆ ದಾಳಿ ನಡೆದಿದೆ. ಫುಲ್ವಾರಿ ಷರೀಫ್ ಪ್ರಕರಣದಲ್ಲಿ ಎಹ್ಸಾನ್ ಹೆಸರು ಕೇಳಿಬಂದಿತ್ತು. ಎಹ್ಸಾನ್ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ. ಪರ್ವೇಜ್ ಮನೆಯನ್ನು ಶೋಧಿಸಿ ಪರ್ವೇಜ್ ನನ್ನು ವಶಕ್ಕೆ  ಪಡೆಯಲಾಗಿದೆ. ಫುಲ್ವಾರಿ ಷರೀಫ್ ಪ್ರಕರಣದಲ್ಲಿ, NIA ಕೂಡ ಫುಲ್ವಾರಿ ಷರೀಫ್‌ ಗೆ ಸಂಬಂಧಪಟ್ಟ ಎರಡು ಸ್ಥಳಗಳಲ್ಲಿ ದಾಳಿ ಮಾಡಿದೆ. 


ಇದನ್ನೂ ಓದಿ : ಯುಪಿಯಲ್ಲಿ 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶ: ಇದು ಏಕೆ ದುಬಾರಿ ಗೊತ್ತಾ?


ಮಧುಬನಿಯಲ್ಲಿಯೂ ನಡೆಯುತ್ತಿದೆ ದಾಳಿ : 
ಇದಲ್ಲದೇ ಎನ್‌ಐಎ ತಂಡ ಮಧುಬನಿ ತಲುಪಿದೆ. ನಿಷೇಧಿತ ಇಸ್ಲಾಮಿಕ್ ಸಂಘಟನೆಯ ಪಿಎಫ್‌ಐ ಸದಸ್ಯ ಅನ್ಸರುಲ್ಲಾ ಅಲಿಯಾಸ್ ಅನ್ಸಾರ್ ಮಧುಬನಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ಹಲವು ವಾಹನಗಳಲ್ಲಿ ಆಗಮಿಸಿರುವ ಎನ್ ಐಎ ತಂಡ ಪೊಲೀಸರ ನೆರವಿನಿಂದ ಮನೆಯ ಸುತ್ತ ಮುತ್ತಲಿನ ರಸ್ತೆಗಳನ್ನು ಬ್ಲಾಕ್ ಮಾಡಿದೆ. 


ದೇಶ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ : 
ಚಾಪ್ರಾದಲ್ಲಿಯೂ ಪಿಎಫ್‌ಐ ಸದಸ್ಯ ಪರ್ವೇಜ್ ಆಲಂ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ. ಸಿಂಘವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಪುರ ಗ್ರಾಮದ ಮೊಹಮ್ಮದ್ ಮುಸ್ತಾಕಿಂ ಅವರ ಮನೆ ಮೇಲೆ ಕೂಡಾ ದಾಳಿ ನಡೆಯುತ್ತಿದೆ. ಮುಸ್ತಾಕಿಮ್ ಕೂಡಾ PFI ಜೊತೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿತುವ ಆರೋಪದ ಹಿನ್ನೆಲೆಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳು ಸಹ ಇದೇ ಗ್ರಾಮದ ಮೊ ಸನಾವುಲ್ಲಾ ಎಂಬುವವರ ಮನೆ ಮೇಲೆ ಎನ್‌ಐಎ ತಂಡ ದಾಳಿ ನಡೆಸಿತ್ತು.


ಇದನ್ನೂ ಓದಿ : NEET Result 2022: ರಾಜಸ್ಥಾನದ ತನಿಷ್ಕಾಗೆ ಪ್ರಥಮ, ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.