ನವದೆಹಲಿ : 2022 ರ ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಮತ್ತು ಕೇರಳದ  ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. 
ಮೂರು ರಾಜ್ಯಗಳ 60 ಪ್ರದೇಶಗಳಲ್ಲಿ ದಾಳಿ ನಡೆಸಿರುವ ತಂಡ ಈ ಪ್ರದೇಶಗಳ ತೀವ್ರ ತಪಾಸಣೆ ನಡೆಸುತ್ತಿದೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷ ಅಕ್ಟೋಬರ್ 23 ರಂದು, ಕೋಮು ಸೂಕ್ಷ್ಮ ಉಕ್ಕಡಮ್ ಪ್ರದೇಶದ ಕೊಟ್ಟೈಮೇಡುವಿನ ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಶಂಕಿತ ಭಯೋತ್ಪಾದಕ ಜಮೇಶಾ ಮುಬೀನ್  ಹತನಾಗಿದ್ದ. 


ಇದನ್ನೂ ಓದಿ : ಪುಲ್ವಾಮಾ ದಾಳಿಗೆ ನಾಲ್ಕು ವರ್ಷಗಳು: ಆ ದುರ್ದಿನ ಏನು ನಡೆಯಿತು?


ದೀಪಾವಳಿ ಹಬ್ಬದ ಒಂದು ದಿನ ಮೊದಲು ಈ  ಸ್ಪೋಟ ನಡೆದಿತ್ತು. ನಗರ ಪೊಲೀಸರು ಈ ಹಿಂದೆ ಮುಬೀನ್‌ನಿಂದ 75 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಐಸಿಸ್‌ನ ಧ್ವಜವನ್ನು ಹೋಲುವ ಧ್ವಜದ ರೇಖಾಚಿತ್ರ ಸೇರಿದಂತೆ ದಾಖಲೆಗಳು ಮತ್ತು ಕೆಲವು ಬರವಣಿಗೆಗಳನ್ನು ವಶಪಡಿ ಸಲಾಗಿತ್ತು ಎನ್ನಲಾಗಿದೆ. 


ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಲು ಮತ್ತು  ಆತನ ಬಾಡಿಗೆ ಮನೆಯಿಂದ ಮತ್ತೊಂದು ಮನೆಗೆ  ಸ್ಫೋಟಕಗಳನ್ನು ಸಾಗಿಸಲು ಸಹಾಯ ಮಾಡಿದ ಆರೋಪದ ಮೇಲೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ :  Girl body found in fridge: ಪ್ರೀತಿಸುತ್ತಿದ್ದ ಯುವತಿಯನ್ನೇ ಕೊಲೆಗೈದು ಢಾಬಾದ ಫ್ರಿಡ್ಜ್ ನಲ್ಲಿಟ್ಟ ಪ್ರಿಯಕರ! ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.