ನವದೆಹಲಿ:  License Mandatory For Celling Tobacco Products - ತಂಬಾಕಿನಿಂದ ಹೆಚ್ಚಾಗುತ್ತಿರುವ  ಸಮಸ್ಯೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅದರಿಂದಾಗಬಹುದಾದ  ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶದ ಸರ್ಕಾರ (UP Government), ಕೇವಲ ಪುರಸಭೆಯಿಂದ  ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ತಂಬಾಕು, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮಾಡಬಹುದು ಎಂದು ಹೇಳಿದೆ.  ವಾಲಂಟರಿ ಹೆಲ್ತ್ ಅಸೋಸಿಯೇಶನ್ ಆಫ್ ಇಂಡಿಯಾ (Voluntary Health Association Of India) ಉತ್ತರ ಪ್ರದೇಶ ಸರ್ಕಾರದ ಈ ಹೆಜ್ಜೆಯನ್ನು ಸ್ವಾಗತಿಸಿದೆ. ತಂಬಾಕು ಮಾರಾಟಗಾರರಿಗೆ ರಾಜ್ಯದಲ್ಲಿ ತಂಬಾಕು ಮಾರಾಟವನ್ನು ನಿಯಂತ್ರಿಸಲು ಪರವಾನಗಿ ಅಗತ್ಯವಾಗಿದೆ. ತಂಬಾಕು ಮಾರಾಟಗಾರರಿಗೆ ತಂಬಾಕು ಉತ್ಪನ್ನಗಳ ಪ್ರವೇಶವನ್ನು ನಿಯಂತ್ರಿಸಲು ಪರವಾನಗಿ ಅನಿವಾರ್ಯವಾಗಿದೆ.


COMMERCIAL BREAK
SCROLL TO CONTINUE READING

ತಂಬಾಕಿನಂತಹ ಅಪಾಯಕಾರಿ ಉತ್ಪನ್ನಗಳಿಂದ ಉಂಟಾಗುತ್ತಿರುವ ಜೀವನವಿಡಿ  ನೋವಿನಿಂದ ದೇಶದ ನಾಗರಿಕರನ್ನು ಉಳಿಸಲು, ಅವರ ತಂಬಾಕಿನ ಪ್ರವೇಶವನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ ಮತ್ತು ಮಾರಾಟಗಾರರಿಗೆ ಪರವಾನಿಗೆ ಕಡ್ಡಾಯಗೊಳಿಸದೆ ಇದು ಸಾಧ್ಯವಿಲ್ಲ. ಸಿಗರೇಟ್, ಬೀಡಿ, ಖೈನಿ ಇತ್ಯಾದಿಗಳ ಮಾರಾಟ ಮಾಡುವವರಿಗೆ ಪರವಾನಿಗೆ ಕಡ್ಡಾಯಗೊಳಿಸುವ ಮೂಲಕ, ತಂಬಾಕು ನಿಯಂತ್ರಣಕ್ಕೆ ಅನ್ವಯವಾಗುವ ನೀತಿ-ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಲಾಗುವುದು.


ಇದನ್ನೂ ಓದಿ-E-Vehicles: ದ್ವಿಚಕ್ರ ವಾಹನ ಖರೀದಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ Modi Government


ಸರ್ಕಾರದ ಮಹತ್ವದ ನಿರ್ಣಯ
ಸರ್ಕಾರದ ಈ ಆದೇಶದ ಬಳಿಕ ರಾಜ್ಯದ ಜನರು ತಂಬಾಕಿನಿಂದ ಆಗುವ ಹಾನಿಗಳಿಂದ ಪಾರಾಗುವ ಅವಕಾಶ ಸಿಗಲಿದೆ ಹಾಗೂ ಇನ್ನೊಂದೆಡೆ ಈ ಉತ್ಪನ್ನಗಳನ್ನು ನೋಡುವ ಹಾಗೂ ಖರೀದಿಸುವ ಅವಕಾಶ ಮಕ್ಕಳಲ್ಲಿ ತಪ್ಪಲಿದೆ. ಈ  ಕುರಿತು ಹೇಳಿಕೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Aadityanath), ಇತರ ರಾಜ್ಯಗಳೂ ಕೂಡ ಉತ್ತರ ಪ್ರದೇಶ ಸರ್ಕಾರದ ಈ ಆದೇಶವನ್ನು ಮಾದರಿಯಾಗಿ ಸ್ವೀಕರಿಸಿ ತಮ್ಮ ರಾಜ್ಯದಲ್ಲಿಯೂ ಕೂಡ ತಂಬಾಕು ಮಾರಾಟವನ್ನು ನಿಯಂತ್ರಿಸಿ ಅದರಲ್ಲೂ ವಿಶೇಷವಾಗಿ ತಂಬಾಕಿನಿಂದ ಮಕ್ಕಳನ್ನು ರಕ್ಷಿಸಲಿವೆ ಎಂದಿದ್ದಾರೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (Ministry Of Health And Family Welfare) ಸಚಿವಾಲಯ ಕೂಡ ಎಲ್ಲಾ ರಾಜ್ಯಗಳಿಗೆ ಸಲಹೆ  ಸೂಚನೆ ಜಾರಿಗೊಳಿಸಿ ತಂಬಾಕು ಮಾರಾಟಗಾರರಿಗೆ ಪುರಸಭೆಯ ಲೈಸನ್ಸ್ (Corporation License) ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿದೆ.


ಇದನ್ನೂ ಓದಿ- Big Shock! ಕೋಟ್ಯಾಂತರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಲಿದೆಯೇ ಕೇಂದ್ರ ಸರ್ಕಾರ!


ತಂಬಾಕು ಉತ್ಪನ್ನಗಳನ್ನು (Tobacco Products) ಮಾರಾಟ ಮಾಡುವ ಅಂಗಡಿಗಳಿಗೆ ಕ್ಯಾಂಡಿ, ಚಿಪ್ಸ್, ಬಿಸ್ಕತ್ತು, ತಂಪು ಪಾನೀಯಗಳಂತಹ ತಂಬಾಕು ರಹಿತ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಷರತ್ತು / ನಿಬಂಧನೆಯನ್ನು ಪರವಾನಗಿಯಲ್ಲಿ ಸೇರಿಸುವುದು ಸೂಕ್ತ ಎಂದು ಅದು ಹೇಳಿದೆ. ತಂಬಾಕು ಬಳಸುವವರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ಇಲ್ಲದಂತಹ ವಿಷಯಗಳು ವಿಶೇಷವಾಗಿ ಇವೆ. ಭವಿಷ್ಯದ ಪೀಳಿಗೆಯನ್ನು ರಕ್ಷಿಸಲು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಹೆಚ್ಚಿನ ಅಂಗಡಿಗಳನ್ನು ತೆರೆಯುವುದನ್ನು ನಿರುತ್ಸಾಹಗೊಳಿಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ (Union Ministry Of Housing And Urban Affairs) ಸಚಿವಾಲಯವು ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಇದೇ ರೀತಿಯ ಸಲಹೆಯನ್ನು ಕಳುಹಿಸಿದೆ. 


ಇದನ್ನೂ ಓದಿ-ಕಪ್ಪು ಶೀಲಿಂದ್ರ ಔಷಧಿ ಮೇಲೆ ಯಾವುದೇ ತೆರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ


ಭಾರತ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆಯ ಪ್ರಕಾರ, ಉತ್ತರಪ್ರದೇಶದಲ್ಲಿ 35.5% ವಯಸ್ಕರು (15 ವರ್ಷ ಮತ್ತು ಮೇಲ್ಪಟ್ಟವರು) ಕೆಲವು ರೀತಿಯ ತಂಬಾಕನ್ನು ಬಳಸುತ್ತಾರೆ. ತಂಬಾಕು ಬಳಕೆಯಿಂದ ಉಂಟಾಗುವ ರೋಗದ ಒಟ್ಟು ನೇರ ಮತ್ತು ಪರೋಕ್ಷ ವೆಚ್ಚ 182,000 ಕೋಟಿ ರೂ. ಇದು ದೇಶದ ಜಿಡಿಪಿಯ ಸುಮಾರು 1.8% ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.