ನವದೆಹಲಿ: ಸಣ್ಣ ಉದ್ದಿಮೆಗಳು ಭಾರತದ ಆರ್ಥಿಕ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.ಈಗ ಅವುಗಳ ಉತ್ತೇಜನಕ್ಕಾಗಿ ನೀತಿ ಆಯೋಗ ಹಾಗೂ ಎಬಿಬಿ ಕೈಜೋಡಿಸಿವೆ.


COMMERCIAL BREAK
SCROLL TO CONTINUE READING

ಕೆಲಸದ ಸ್ಥಳಗಳಲ್ಲಿ ಕೃತಕ ಬುದ್ದಿಮತ್ತೆಯ ಮೂಲಕ ಸಣ್ಣ ಉದ್ದಿಮೆದಾರರನ್ನು ತರಬೇತಿ ಹಾಗೂ ಶಿಕ್ಷಣ ಕೌಶಲವನ್ನು ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ನೀತಿ ಆಯೋಗ ಮತ್ತು ಎಬಿಬಿ ಮುಂದಾಗಿದೆ.ಇದಕ್ಕಾಗಿ ಅದು ಸಣ್ಣ ಉದ್ದಿಮೆಗಳಲ್ಲಿ ಕಾರ್ಯಗಾರವನ್ನು ಏರ್ಪಡಿಸಲು ಮುಂದಾಗಿದೆ. 


ಬೆಂಗಳೂರಿನ ಎಬಿಬಿ ಎಬಿಲಿಟಿ ಇನೋವೇಶನ್ ಸೆಂಟರ್ (ಎಐಸಿ) ನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಔಷಧೀ, ಜವಳಿ, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ ಸೇರಿದಂತೆ ಆಯ್ದ ಕ್ಷೇತ್ರಗಳಲ್ಲಿ ಉದ್ಯಮಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಸಣ್ಣ ಉದ್ದಿಮೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ನಿಟ್ಟಿನಲ್ಲಿ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ವಿಚಾರವಾಗಿ ಚರ್ಚಿಸಲಾಯಿತು.


ನೀತಿ ಆಯೋಗ ಹಾಗೂ ಎಬಿಬಿ ಮೂಲಕ  ಆಯೋಜಿಸಲಾಗಿದ್ದ ಈ ಕಾರ್ಯಾಗಾರದಲ್ಲಿ ಸಣ್ಣ ಉದ್ದಿಮೆದಾರರು ತಮ್ಮ ಉದ್ಯಮಗಳ ಅಭಿವೃದ್ದಿಗಾಗಿ ಅಳವಡಿಸಿಕೊಳ್ಳಬೇಕಾದ ನೂತನ ಬುಸಿನೆಸ್ ಹಾಗೂ ಆರ್ಥಿಕ ಮಾದರಿಗಳ ಬಗ್ಗೆ ಚರ್ಚಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ ಆಯೋಗದ ಸಲಹೆಗಾರ ಅಣ್ಣಾ ರಾಯ್ "ನೀತಿ ಆಯೋಗ ಈಗ ಕೇವಲ ಒಂದೇ ಮಾದರಿಯ ಯೋಜನೆಯ ಮೇಲೆ ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಉಳಿದಿಲ್ಲ.ಈಗ ನಾವು ಎಬಿಬಿ ಇನೋವೇಟಿವ್ ಸೆಂಟರ್ ನಲ್ಲಿ ಸಣ್ಣ ಉದ್ದಿಮೆಗಳ ಬೆಳವಣಿಗೆಗೆ ಅಡ್ಡಿಯಾಗಿರುವ ವಿಚಾರಗಳ ಬಗ್ಗೆ ಚರ್ಚಿಸಲು ಎಲ್ಲ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ.ಇದರಲ್ಲಿ ಅವರಿಗೆ ಅಡ್ಡಿಯಾಗಿರುವ ಬಿಸಿನೆಸ್ ಮಾದರಿಯಾಗಿರಲಿ ಅಥವಾ ಸಣ್ಣ ಕಾರ್ಮಿಕರ ಕೌಶಲಕ್ಕೆ ಹಣ ಹೂಡುವ ವಿಚಾರವಾಗಿರಲಿ ಹೀಗೆ ಸಣ್ಣ ಉದ್ದಿಮೆಗಳ ಬಗ್ಗೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ಈ ವೇದಿಕೆಯಲ್ಲಿ ಚರ್ಚಿಸಲಿದ್ದೇವೆ" ಎಂದರು.


ಎಬಿಬಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸಂಜೀವ್ ಶರ್ಮಾ ಮಾತನಾಡಿ " ಕೃತಕ ಬುದ್ದಿಮತ್ತೆಯ ಇನೋವೇಟಿವ್ ಅಪ್ಲಿಕೇಶನ್ ನಲ್ಲಿ ಭಾರತ ಎಲ್ಲ ರೀತಿಯಿಂದಲೂ ಮುಂದೆ ಇದೇ ಎನ್ನುವ ಮಾರ್ಗವನ್ನು ತೋರಿಸಿದೆ ಎಂದರು. ಸಣ್ಣ ಉದ್ದಿಮೆಗಳಲ್ಲಿ ಕೃತಕ ಬುದ್ದಿಮತ್ತೆಯನ್ನು ಅಳವಡಿಸುವ ಮೂಲಕ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದರು.