ನವದೆಹಲಿ: ಭಾರತವು ಕೊರೊನಾವೈರಸ್‌ನ ಎರಡನೇ ತರಂಗ (Coronavirus Second Wave) ಅನ್ನು ಚೆನ್ನಾಗಿ ಎದುರಿಸಿದೆ. ಆದ್ದರಿಂದ, ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಇದೀಗ ಕರೋನಾ ಮೂರನೆಯ ತರಂಗವನ್ನು  (Corona Third Wave) ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ನೀತಿ ಆಯೋಗ್  (Niti Ayog) ಸದಸ್ಯ ವಿ.ಕೆ ಸಾರಸ್ವತ್  (V. K. Saraswat)  ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಮೂರನೇ ತರಂಗ ಈ ತಿಂಗಳಿನಿಂದ ಪ್ರಾರಂಭವಾಗಲಿದೆ!
ಕೋವಿಡ್ -19 ರ ಮೂರನೇ ತರಂಗ (Covid-19 Third Wave) ಅನಿವಾರ್ಯವಾಗಿದೆ ಎಂದು ಭಾರತದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ ಮತ್ತು ಇದು ಸೆಪ್ಟೆಂಬರ್-ಅಕ್ಟೋಬರ್‌ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಚಿಕ್ಕ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ದೇಶವು ಹೆಚ್ಚು ಹೆಚ್ಚು ಜನರಿಗೆ ಲಸಿಕೆ ನೀಡಬೇಕು  ಎಂದು ವಿ.ಕೆ. ಸಾರಸ್ವತ್ ಹೇಳಿದ್ದಾರೆ. 


'ನಾವು ಸಾಕಷ್ಟು ಮಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಕೋವಿಡ್ -19 ರ ಎರಡನೇ ತರಂಗವನ್ನು (Covid 19 Second Wave) ನಾವು ಚೆನ್ನಾಗಿ ನಿಭಾಯಿಸಿದ್ದೇವೆ ಮತ್ತು ಇದರ ಪರಿಣಾಮವಾಗಿ ಹೊಸ ಸೋಂಕಿನ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗುತ್ತಿವೆ. ಆದರೆ ಕರೋನಾ ಮೊದಲ ತರಂಗ ಕಡಿಮೆಯಾದಾಗ ನಾವು ಮಾಡಿದ ತಪ್ಪುಗಳನ್ನು ಮತ್ತೆ ಮರುಕಳಿಸದೇ ಇರುವುದು ಬಹಳ ಮುಖ್ಯ ಎಂದವರು ಎಚ್ಚರಿಸಿದ್ದಾರೆ.


ಇದನ್ನೂ ಓದಿ- ಏನಿದು New Covid-19? ವಿಯೆಟ್ನಾಂನಲ್ಲಿ ಪತ್ತೆಯಾಗಿರುವ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?


ಕರೋನಾದ ದೈನಂದಿನ ಪ್ರಕರಣಗಳು 4 ಲಕ್ಷದಿಂದ 1.3 ಕ್ಕೆ ಇಳಿದಿದೆ:
'ನಮ್ಮ ವೈಜ್ಞಾನಿಕ ಮತ್ತು ತಾಂತ್ರಿಕ ಚಟುವಟಿಕೆಗಳ ಸಹಾಯದಿಂದ, ಆಮ್ಲಜನಕ ಬ್ಯಾಂಕುಗಳನ್ನು ರಚಿಸುವುದು, ಹೆಚ್ಚಿನ ಸಂಖ್ಯೆಯಲ್ಲಿ ಆಮ್ಲಜನಕವನ್ನು ಪೂರೈಸಲು ಕೈಗಾರಿಕೆಗಳನ್ನು ಸ್ಥಾಪಿಸುವುದು, ನಾವು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಮರ್ಥರಾಗಿದ್ದೇವೆ. ದ್ರವ ಆಮ್ಲಜನಕವನ್ನು ಸಾಗಿಸಲು ರೈಲ್ವೆ, ವಿಮಾನಗಳು, ಮಿಲಿಟರಿ ಪಡೆಗಳನ್ನು ಬಳಸಲಾಗುತ್ತಿದೆ. ಈ ಹಿಂದೆ ದೇಶದಲ್ಲಿ ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು, ಆದರೆ ಕಳೆದ ಕೆಲವು ದಿನಗಳಲ್ಲಿ, ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಸುಮಾರು 1.3 ಲಕ್ಷಕ್ಕೆ ಇಳಿದಿದೆ ಎಂದವರು ಹೇಳಿದರು.


ಇದನ್ನೂ ಓದಿ- Sputnik V ಲಸಿಕೆ ತಯಾರಿಸಲು ಪ್ರಾಥಮಿಕ ಅನುಮೋದನೆ ಪಡೆದ Serum Institute


ಕರೋನಾ ಸೋಂಕಿನ ಚೇತರಿಕೆಯ ದರ 93 ದಾಟಿದೆ:
ಕೋವಿಡ್ -19 (Covid 19) ಜಾಗತಿಕ ಸಾಂಕ್ರಾಮಿಕ ರೋಗದ ಮೊದಲ ತರಂಗವನ್ನೂ ಭಾರತ ಉತ್ತಮವಾಗಿ ನಿರ್ವಹಿಸಿದೆ. ಅದು ಜಾಗತಿಕ ಸಾಂಕ್ರಾಮಿಕ ರೋಗದ ಎರಡನೇ ತರಂಗವನ್ನು ನಿಯಂತ್ರಿಸುವ ವಿಶ್ವಾಸವನ್ನೂ ದೇಶಕ್ಕೆ ನೀಡಿತ್ತು. COVID-19 ನ ಎರಡನೇ ತರಂಗವನ್ನು ಕೂಡ ನಾವು ಅತ್ಯುತ್ತಮವಾಗಿ ನಿರ್ವಹಿಸಿದ್ದೇವೆ, ಇದನ್ನು ನಾವು ತುರ್ತುಸ್ಥಿತಿ ನಿರ್ವಹಣೆ ಎಂದು ಕರೆಯುತ್ತೇವೆ. ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಂದು ದಿನದಲ್ಲಿ 1,32,364 ಹೊಸ ಕರೋನಾವೈರಸ್ ಪ್ರಕರಣಗಳು ವರದಿಯಾದ ನಂತರ, ದೇಶದಲ್ಲಿ ಸೋಂಕಿತರ ಸಂಖ್ಯೆ 2,85,74,350 ಕ್ಕೆ ಏರಿಕೆಯಾಗಿದೆ. ರೋಗಿಗಳ ಸಂಖ್ಯೆ ಸೋಂಕು ಮುಕ್ತ ದರವು ಶೇಕಡಾ 93 ದಾಟಿದೆ ಎಂದವರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.