Sputnik V ಲಸಿಕೆ ತಯಾರಿಸಲು ಪ್ರಾಥಮಿಕ ಅನುಮೋದನೆ ಪಡೆದ Serum Institute

ರಷ್ಯಾದ ಕೊರೊನಾ ಲಸಿಕೆಯಾದ ಸ್ಪುಟ್ನಿಕ್ ವಿ ತಯಾರಿಸಲು ಆದರ್ ಪೂನವಾಲ್ಲಾರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶದ ಔಷಧ ನಿಯಂತ್ರಕದಿಂದ ಅನುಮತಿ ಪಡೆದಿದೆ.

Last Updated : Jun 4, 2021, 10:25 PM IST
  • ರಷ್ಯಾದ ಕೊರೊನಾ ಲಸಿಕೆಯಾದ ಸ್ಪುಟ್ನಿಕ್ ವಿ ತಯಾರಿಸಲು ಆದರ್ ಪೂನವಾಲ್ಲಾರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶದ ಔಷಧ ನಿಯಂತ್ರಕದಿಂದ ಅನುಮತಿ ಪಡೆದಿದೆ.
Sputnik V ಲಸಿಕೆ ತಯಾರಿಸಲು ಪ್ರಾಥಮಿಕ ಅನುಮೋದನೆ ಪಡೆದ Serum Institute title=
ಸಾಂದರ್ಭಿಕ ಚಿತ್ರ

ನವದೆಹಲಿ: ರಷ್ಯಾದ ಕೊರೊನಾ ಲಸಿಕೆಯಾದ ಸ್ಪುಟ್ನಿಕ್ ವಿ ತಯಾರಿಸಲು ಆದರ್ ಪೂನವಾಲ್ಲಾರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶದ ಔಷಧ ನಿಯಂತ್ರಕದಿಂದ ಅನುಮತಿ ಪಡೆದಿದೆ.

ಪೂನವಾಲ್ಲಾ ಕಂಪನಿಯು ತನ್ನ ಪುಣೆ ಸ್ಥಾವರದಲ್ಲಿ ಲಸಿಕೆಯನ್ನುತಯಾರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಸೀರಮ್ ಸಂಸ್ಥೆಗೆ ನೀಡಲಾದ ಪರೀಕ್ಷಾ ಪರವಾನಗಿ ಎಂದರೆ ಅದು ಪರೀಕ್ಷೆಗೆ ಉತ್ಪನ್ನವನ್ನು ಅಭಿವೃದ್ಧಿಪಡಿಸಬಹುದು ಮತ್ತು ತಯಾರಿಸಬಹುದು, ಆದರೆ ಅದನ್ನು ಮಾರಾಟ ಮಾಡುವಂತಿಲ್ಲ ಎನ್ನಲಾಗಿದೆ.

'ನಾವು ಸ್ಪುಟ್ನಿಕ್ ವಿ (Sputnik V) ಗೆ ಪ್ರಾಥಮಿಕ ಅನುಮೋದನೆ ಪಡೆದಿದ್ದೇವೆ. ಆದರೆ ನಿಜವಾದ ಉತ್ಪಾದನೆಗೆ ಹಲವು ತಿಂಗಳುಗಳು ಬೇಕಾಗುತ್ತವೆ. ಈ ಮಧ್ಯೆ, ನಮ್ಮ ಗಮನವು ಕೋವಿಶೀಲ್ಡ್ ಮತ್ತು ಕೊವೊವಾಕ್ಸ್ ಆಗಿ ಉಳಿದಿದೆ" ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ- Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO

ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ನಿಂದ ಸ್ಪುಟ್ನಿಕ್ ವಿ ಯ ಮೊದಲ ಡೋಸ್ ನ್ನು ಮೇ 14 ರಂದು ಹೈದರಾಬಾದ್‌ನಲ್ಲಿ ನೀಡಲಾಯಿತು.ರಷ್ಯಾದ ಲಸಿಕೆಯನ್ನು ಈಗಾಗಲೇ 65 ದೇಶಗಳಲ್ಲಿ ನೊಂದಾಯಿಸಲಾಗಿದೆ. ಆದರೆ ಇನ್ನೂ ಯುರೋಪ್ ಮತ್ತು ಅಮೆರಿಕಾದ ಅಧಿಕಾರಿಗಳು ಅನುಮೋದನೆಯನ್ನು ಪಡೆದಿಲ್ಲ ಎನ್ನಲಾಗಿದೆ.ಭಾರತದಲ್ಲಿ ಪ್ರಸ್ತುತ ನೀಡುತ್ತಿರುವ ಎರಡು ಲಸಿಕೆಗಳಿಗೆ ಹೋಲಿಸಿದರೆ ಸ್ಪುಟ್ನಿಕ್ ವಿ ಶೇಕಡಾ 91.6 ರಷ್ಟು, ಹೆಚ್ಚಿನ ಪರಿಣಾಮಕಾರಿತ್ವವನ್ನು ಹೊಂದಿದೆ.

ರಷ್ಯಾ ತನ್ನ ಔಷಧಿಗಳ ನಿಯಂತ್ರಕ ಸ್ಪುಟ್ನಿಕ್ - ಸೋವಿಯತ್ ಯುಗದ ಉಪಗ್ರಹದ ಹೆಸರಿನೊಂದಿಗೆ ನೋಂದಾಯಿಸಿದೆ.ಕಳೆದ ವರ್ಷ ಆಗಸ್ಟ್ನಲ್ಲಿ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಪ್ರಯೋಗ ಫಲಿತಾಂಶಗಳು ಶೇಕಡಾ 90 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Whatsapp Fake Message: ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಲಿಂಕ್ ಅನ್ನು ಮರೆತೂ ಕೂಡ ಕ್ಲಿಕ್ ಮಾಡಬೇಡಿ

ರಷ್ಯಾದ ಮತ್ತೊಂದು ಲಸಿಕೆ, ಸ್ಪುಟ್ನಿಕ್ ಲೈಟ್, ಭಾರತದಲ್ಲಿ ಬಳಸಲಾಗುವ ಮೊದಲ ಏಕ-ಡೋಸ್ ಲಸಿಕೆ ಆಗಿರಬಹುದು ಮತ್ತು ಡಾ. ರೆಡ್ಡಿ ಈ ತಿಂಗಳು ಸರ್ಕಾರ ಮತ್ತು ನಿಯಂತ್ರಕರೊಂದಿಗೆ ತಕ್ಷಣದ ಉಡಾವಣೆಗೆ ಚರ್ಚಿಸಲಿದ್ದಾರೆ ಎಂದು ಕಂಪನಿಯು ಮೇ 14 ರಂದು ತಿಳಿಸಿದೆ.ರಷ್ಯಾದಲ್ಲಿ ಸ್ಪುಟ್ನಿಕ್ ಲೈಟ್ ಅನ್ನು ಈಗಾಗಲೇ ಅನುಮೋದಿಸಲಾಗಿದೆ. ಇದು ಶೇಕಡಾ 79.4 ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ. ಇದು ಏಕ-ಶಾಟ್ ಲಸಿಕೆ, ಎರಡನೇ ಡೋಸ್ ಪರಿಣಾಮಕಾರಿತ್ವ ಶೇಕಡಾ 91.6 ರವರೆಗೆ ಇರಲಿದೆ." ಎಂದು ಡಾ.ರೆಡ್ಡೀಸ್ ಸಿಇಒ ದೀಪಕ್ ಸಪ್ರಾ ಸಂದರ್ಶನವೊಂದರಲ್ಲಿ ಹೇಳಿದರು.

ಭಾರತದ ಮೊದಲ ಏಕ-ಡೋಸ್ ಲಸಿಕೆಯಾಗಿ ಸ್ಪುಟ್ನಿಕ್ ಲೈಟ್‌ನ ಸಾಧ್ಯತೆಯು "ನಿಯಂತ್ರಕರಿಂದ ಅನುಮೋದನೆ ಮತ್ತು ಅವರೊಂದಿಗಿನ ಮಾತುಕತೆ ಮತ್ತು ನಿಯಂತ್ರಕದಿಂದ ನಾವು ಪಡೆಯುವ ಮಾರ್ಗದರ್ಶನದ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

  

 

Trending News