ನವದೆಹಲಿ: ಶೀಘ್ರದಲ್ಲಿಯೇ ದೇಶದ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು ದೇಶದಲ್ಲಿ ಬಹುತೇಕ ರಾಜ್ಯ ರಸ್ತೆ ಸಾರಿಗೆ ಯುನಿಟ್ ಗಳು(SRTU) ಸಾಂಪ್ರದಾಯಿಕ ಇಂಧನದ ಮೇಲೆ ಹೆಚ್ಚಿನ ಹಣ ವ್ಯಯಿಸುತ್ತಿವೆ. ಈ ಸಾಮಪ್ರದಾಯಿಕ ಇಂಧನಗಳು ದುಬಾರಿಯಾಗಿವೆ. ಹೀಗಾಗಿ ರಾಜ್ಯಗಳು ಜೈವಿಕ, CNG ಹಾಗೂ ಇಲೆಕ್ಟ್ರಿಕ್ ವಾಹನಗಳನ್ನು ಸಾರ್ವಜನಿಕ ಸಾರಿಗೆಗೆ ಬಳಸಬೇಕು ಎಂದು ಅವರು ಕೋರಿದ್ದಾರೆ.


COMMERCIAL BREAK
SCROLL TO CONTINUE READING

ನವೀಕರಿಸಬಹುದಾದ ಇಂಧನ ಅಥವಾ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಇಂಧನ ಬಿಲ್‌ ಉಳಿತಾಯದ ಜೊತೆಗೆ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಇದರಿಂದ ಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯು ಕಚ್ಚಾ ತೈಲ ಆಮದು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. 


ಈಗಾಗಲೇ ನಾಗ್ಪುರದಲ್ಲಿ 450 ಬಸ್ಸುಗಳನ್ನು ಜೈವಿಕ ಇಂಧನ ಬಸ್ ಗಳನ್ನಾಗಿ ಪರಿವರ್ತಿಸುವ ಕಾರ್ಯ ಮುಂದುವರೆದಿದ್ದು, ಇದುವರೆಗೆ 90 ಬಸ್‌ಗಳನ್ನು ಜೈವಿಕ ಇಂಧನಬಸ್ ಗಳಾಗಿ ಪರಿವರ್ತಿಸಲಾಗಿದೆ. ಬಸ್ ಸೇವೆಯಲ್ಲಿ ತೈಲ ಬಳಕೆಯಿಂದ ಪ್ರತಿವರ್ಷ 60 ಕೋಟಿ ರೂ.ಗಳ ನಷ್ಟವಾಗುತ್ತಿದೆ, ಬಸ್‌ಗಳನ್ನು ಸಿಎನ್‌ಜಿಯಾಗಿ ಪರಿವರ್ತಿಸುವ ಮೂಲಕ ಇದನ್ನು ಉಳಿಸಬಹುದು ಎಂದು ಹೇಳಿದ್ದಾರೆ. ಒಳಚರಂಡಿ ನೀರಿನಿಂದ ಸಿಎನ್‌ಜಿ ಉತ್ಪಾದಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. 


ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಾಗಿ ಖಾಸಗಿ ಬಂಡವಾಳವನ್ನು ಬಳಸಲು ಲಂಡನ್ ಬಸ್ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.  ಇದಲ್ಲದೆ  ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಬಸ್ ಬಂದರು ಯೋಜನೆಯನ್ನು ಕೂಡ ಅನುಷ್ಠಾನಕ್ಕೆ ತರಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. 


ಆಪರೇಟರ್‌ಗಳಿಗೆ ಡಬಲ್ ಡೆಕ್ಕರ್ ಬಸ್‌ಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಿದರೆ ಸಾರ್ವಜನಿಕ ಸಾರಿಗೆ ಮತ್ತಷ್ಟು ಸುಧಾರಣೆ ಆಗಲಿದೆ. ಜೊತೆಗೆ ಆಡಿಯೊ ಮ್ಯೂಸಿಕ್, ವಿಡಿಯೋ ಸಿನೆಮಾ ಮುಂತಾದ ಉತ್ತಮ ಮನರಂಜನಾ ಸಾಧನಗಳಂತಹ ಉತ್ತಮ ಸೇವೆಗಳನ್ನು ಒದಗಿಸಲು ಬಸ್ ನಿರ್ವಾಹಕರು ಪರಿಗಣಿಸಬಹುದು. ಇದು ಅವರಿಗೆ ಹೆಚ್ಚಿನ ಶುಲ್ಕವನ್ನು ಸಹ ನೀಡಲಿದೆ ಎಂದು ಗಡ್ಕರಿ ಸಲಹೆ ನೀಡಿದ್ದಾರೆ.