Nitin Gadkari : `ನನ್ನ ಕೆಲಸ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ರೆ ಹಾಕಬೇಡಿ, ನಾನು ಬೆಣ್ಣೆ ಹಚ್ಚುವುದಿಲ್ಲ`
`ದೇಶದಲ್ಲಿ ಜೈವಿಕ ಇಂಧನ, ಜಲಾನಯನ ಸಂರಕ್ಷಣೆ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಬಂಜರು ಭೂಮಿ, ಹವಾಮಾನ ಬದಲಾವಣೆ ಮತ್ತು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಹಲವು ಪ್ರಯೋಗಗಳ ಸಾಧ್ಯತೆಗಳಿವೆ.
Nitin Gadkari Speech : ಕೆಲಸ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 'ನನ್ನ ಕೆಲಸ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ರೆ ಹಾಕಬೇಡಿ, ನಾನು ಬೆಣ್ಣೆ ಹಚ್ಚುವುದಿಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಗಡ್ಕರಿ ಅವರು ತಮ್ಮ ಕೆಲಸದಿಂದ ಗೆಲುವಿನ ವಿಶ್ವಾಸ ಹೊಂದಿದ್ದಾರೆ ಎನ್ನುವುದು ಕಾಣುತ್ತದೆ.
ನಾಗ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ, 'ದೇಶದಲ್ಲಿ ಜೈವಿಕ ಇಂಧನ, ಜಲಾನಯನ ಸಂರಕ್ಷಣೆ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಬಂಜರು ಭೂಮಿ, ಹವಾಮಾನ ಬದಲಾವಣೆ ಮತ್ತು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಹಲವು ಪ್ರಯೋಗಗಳ ಸಾಧ್ಯತೆಗಳಿವೆ. ನಮ್ಮ ಕಡೆಯಿಂದಲೂ ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ನನಗೂ ಇಷ್ಟವಾಗಿದೆ. ಈ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯಕ್ಕಾಗಿ ನಾವು ಶ್ರಮಿಸಬೇಕು. ಇದು ಭಾರತದ ಆರ್ಥಿಕತೆಯನ್ನು ಮಾತ್ರವಲ್ಲದೆ ಗ್ರಾಮೀಣ ಭಾರತದ ಚಿತ್ರಣವನ್ನೂ ಬದಲಾಯಿಸಬಹುದು. ದೇಶಾದ್ಯಂತ ಕೆಲಸ ಆರಂಭಿಸಿದ್ದೇವೆ ಎಂದರು.
ಇದನ್ನೂ ಓದಿ : ಈ ಅರಮನೆಯಲ್ಲಿದ್ದ ರಾಣಿಯರಿಗೆಂದೇ ಕಾಯುತ್ತಿದ್ದರು ಬ್ರಿಟಿಷರು; ಇವರನ್ನು ಆ ರೀತಿ ತೃಪ್ತಿಪಡಿಸಲು 20 ನಿಮಿಷ ಬೇಕಿತ್ತಂತೆ…!
ಇನ್ನು ಮುಂದುವರೆದು ಮಾತನಾಡಿದ ಅವರು, ರಾಜಕೀಯವು ಹಣ ಗಳಿಸುವ ವ್ಯಾಪಾರವಲ್ಲ. ರಾಜಕೀಯ ಎಂದರೆ ಸಮಾಜಸೇವೆ. ಇದರೊಂದಿಗೆ ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಎಂದರ್ಥ. ಪರಿಸರ ನಿರ್ಲಕ್ಷಿಸಿ ಮಾಡಿದ ಅಭಿವೃದ್ಧಿ ಹೆಚ್ಚು ಕಾಲ ಉಳಿಯುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಪರಿಸರದಷ್ಟೇ ಅಭಿವೃದ್ಧಿಯೂ ಮುಖ್ಯ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಅವರು ಬಿದಿರಿನ ಬಳಕೆ ಮತ್ತು ಅದರ ವಿವಿಧ ಉಪಯೋಗಗಳ ಬಗ್ಗೆಯೂ ನೀಡಿ, ಬಿದಿರು ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಮಹಾರಾಷ್ಟ್ರದಲ್ಲಿ ಬಿದಿರು ಕೃಷಿಯಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇದು ಉತ್ತಮ ಆಯ್ಕೆಯಾಗಿರಬಹುದು. ಇದರಲ್ಲಿ ಹೂಡಿಕೆ ತುಂಬಾ ಕಡಿಮೆ ಮತ್ತು ಲಾಭ ಹೆಚ್ಚು ಎಂದು ಹೇಳಿದ್ದಾರೆ.
ಎಥೆನಾಲ್‌ನ ಮಹತ್ವದ ಕುರಿತು ಮಾತನಾಡಿದ ಸಚಿವ ಗಡ್ಕರಿ, ಇದು ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಗರಿಷ್ಠ ಬಳಕೆಯು ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : God Sent Us A Gift: ಹೆಣ್ಣು ಮಗುವಿಗೆ ತಂದೆಯಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.