ಈ ಅರಮನೆಯಲ್ಲಿದ್ದ ರಾಣಿಯರಿಗೆಂದೇ ಕಾಯುತ್ತಿದ್ದರು ಬ್ರಿಟಿಷರು; ಇವರನ್ನು ಆ ರೀತಿ ತೃಪ್ತಿಪಡಿಸಲು 20 ನಿಮಿಷ ಬೇಕಿತ್ತಂತೆ…!

Mughal Haram:  ಜೂನ್ 23, 1757 ರಂದು ನಡೆದ ಪ್ಲಾಸಿ ಕದನವು ಎಲ್ಲವನ್ನೂ ಬದಲಾಯಿಸುವ ಹಂತದಲ್ಲಿತ್ತು. ಬಂಗಾಳದ ನವಾಬ ಮತ್ತು ಬ್ರಿಟಿಷರ ನಡುವಿನ ಈ ಯುದ್ಧದ ನಂತರ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರಾರಂಭಗೊಂಡು, ಮೊಘಲ್ ಆಳ್ವಿಕ್ ಅಂತ್ಯದ ಹಾದಿ ಹಿಡಿಯಿತು.

Written by - Bhavishya Shetty | Last Updated : Mar 27, 2023, 11:47 PM IST
    • ಜೂನ್ 23, 1757 ರಂದು ನಡೆದ ಪ್ಲಾಸಿ ಕದನವು ಎಲ್ಲವನ್ನೂ ಬದಲಾಯಿಸುವ ಹಂತದಲ್ಲಿತ್ತು.
    • ಈ ಯುದ್ಧದ ನಂತರ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರಾರಂಭಗೊಂಡು, ಮೊಘಲ್ ಆಳ್ವಿಕ್ ಅಂತ್ಯದ ಹಾದಿ ಹಿಡಿಯಿತು.
    • ಆದರೆ ಇಷ್ಟೆಲ್ಲಾ ನಡೆದರೂ ಸಹ ಮೊಗಲರ ದುಂದುವೆಚ್ಚ ಕಡಿಮೆ ಆಗಿರಲಿಲ್ಲ
ಈ ಅರಮನೆಯಲ್ಲಿದ್ದ ರಾಣಿಯರಿಗೆಂದೇ ಕಾಯುತ್ತಿದ್ದರು ಬ್ರಿಟಿಷರು; ಇವರನ್ನು ಆ ರೀತಿ ತೃಪ್ತಿಪಡಿಸಲು 20 ನಿಮಿಷ ಬೇಕಿತ್ತಂತೆ…!   title=
Mughal Haram

Mughal Haram:  ಮೊಘಲ್ ಹರಾಮ್ ಪರಿಕಲ್ಪನೆಯ ಪ್ರಾರಂಭದಿಂದ ಅದರ ವಿಸ್ತರಣೆಯವರೆಗೂ, ಇತಿಹಾಸಕಾರರು ಹರಮ್‌’ನಲ್ಲಿರುವ ಮಹಿಳೆಯರ ಸಂಖ್ಯೆಯ ಬಗ್ಗೆ ವಿಭಿನ್ನ ವಿಷಯಗಳನ್ನು ಹೇಳಿದ್ದಾರೆ. ಷಹಜಹಾನ್ ಮತ್ತು ಔರಂಗಜೇಬನ ಆಳ್ವಿಕೆಯ ಮನುಚಿ ಪ್ರಕಾರ, ಆ ಅವಧಿಯಲ್ಲಿ ಮೊಘಲ್ ಹರಾಮ್‌’ನಲ್ಲಿ ಸುಮಾರು 2000 ರಾಣಿಯರಿದ್ದರು. ಇದರಲ್ಲಿ ಮುಸ್ಲಿಮರು, ಹಿಂದೂ, ರಜಪೂತ ಮತ್ತು ಕ್ರೈಸ್ತ ಮಹಿಳೆಯರೂ ಸೇರಿದ್ದರಂತೆ. ಮತ್ತೊಂದೆಡೆ, ಅಬು ಫಜಲ್ ಅಕ್ಬರ್‌’ನ ಕಾಲದಲ್ಲಿ ಈ ಸಂಖ್ಯೆ ಸುಮಾರು 5 ಸಾವಿರ ಎಂದು 'ಅಕ್ಬರ್ನಾಮಾ'ದಲ್ಲಿ ಹೇಳಲಾಗಿದೆ.

ಜೂನ್ 23, 1757 ರಂದು ನಡೆದ ಪ್ಲಾಸಿ ಕದನವು ಎಲ್ಲವನ್ನೂ ಬದಲಾಯಿಸುವ ಹಂತದಲ್ಲಿತ್ತು. ಬಂಗಾಳದ ನವಾಬ ಮತ್ತು ಬ್ರಿಟಿಷರ ನಡುವಿನ ಈ ಯುದ್ಧದ ನಂತರ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರಾರಂಭಗೊಂಡು, ಮೊಘಲ್ ಆಳ್ವಿಕ್ ಅಂತ್ಯದ ಹಾದಿ ಹಿಡಿಯಿತು.

ಇದನ್ನೂ ಓದಿ: Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!

ಆದರೆ ಇಷ್ಟೆಲ್ಲಾ ನಡೆದರೂ ಸಹ ಮೊಗಲರ ದುಂದುವೆಚ್ಚ ಕಡಿಮೆ ಆಗಿರಲಿಲ್ಲ. ಜನಾನ(ಮಹಿಳೆಯರನ್ನು ಇರಿಸುವ ಸ್ಥಳ)ದಲ್ಲಿ ಎಲ್ಲವೂ ನಡೆಯುತ್ತಿತ್ತು. ಜನಾನದ ನಿರ್ವಹಣೆಗೆ ಲಕ್ಷಗಟ್ಟಲೆ ಖರ್ಚು ಮಾಡಲಾಗುತ್ತಿತ್ತು. ಈಗ ಬ್ರಿಟಿಷರು ಕೂಡ ಮೊಘಲರ ದುಂದುಗಾರಿಕೆಯನ್ನು ಅನುಭವಿಸಲು ಪ್ರಾರಂಭಿಸಿದರು. ಜೊತೆಗೆ ಕೆಲವು ಬ್ರಿಟಿಷರು ಸಹ ತಮ್ಮದೇ ಆದ ಜನಾನವನ್ನು ಮಾಡಿಕೊಂಡರು.

ಬ್ರಿಟಿಷ್ ಅಧಿಕಾರಿ ಸರ್ ಡೇವಿಡ್ ಒಕ್ಟರ್ಲೋನಿ ಎಂಬಾತನನ್ನು ವೈಟ್ ಮೊಘಲ್ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಆತ ಕೂಡ ಮೊಘಲರಂತೆ ಭೋಗಿಸಲು ಬಯಸುತ್ತಿದ್ದ. ಮೊಘಲರಂತೆ ಬಟ್ಟೆ ಮತ್ತು ತಲೆಯ ಮೇಲೆ ಪೇಟವನ್ನು ಧರಿಸುತ್ತಿದ್ದ. ಹುಕ್ಕಾ ಸೇದುವಾಗ ಮಹಿಳೆಯರ ಡ್ಯಾನ್ಸ್ ನೋಡುವುದು ಆತನಿಗೆ ಬಹಳ ಇಷ್ಟವಾಗಿತ್ತು. ಅಷ್ಟೇ ಅಲ್ಲ, ಈ ಬಿಳಿಯ ಮೊಘಲ್ 13 ಭಾರತೀಯ ಮಹಿಳೆಯರನ್ನು ಮದುವೆಯಾಗಿದ್ದ ಎಂದು ಹೇಳಲಾಗುತ್ತದೆ.

1804 ರಲ್ಲಿ ಮೊಘಲ್ ಚಕ್ರವರ್ತಿ ಶಾ ಆಲಂ ದೆಹಲಿಯಲ್ಲಿದ್ದಾಗ, ಆಗಿನ ಮರಾಠಾ ಮುಖ್ಯಸ್ಥ ಜಸ್ವಂತ್ ರಾವ್ ಹೋಳ್ಕರ್ ದೆಹಲಿಯ ಮೇಲೆ ದಾಳಿ ಮಾಡಿದ. ಆ ಸಂದರ್ಭದಲ್ಲಿ ಇಂಗ್ಲಿಷ್ ಅಧಿಕಾರಿ ಸರ್ ಡೇವಿಡ್ ಒಕ್ಟರ್ಲೋನಿ ದೆಹಲಿಯ ಭದ್ರತೆಯನ್ನು ನೋಡಿಕೊಂಡ. ಇದರಿಂದ ಸಂತಸಗೊಂಡ ಚಕ್ರವರ್ತಿ ಶಾ, ಈ ಇಂಗ್ಲಿಷ್ ಅಧಿಕಾರಿಗೆ ನಾಸಿರ್-ಉದ್-ದೌಲಾ ಎಂಬ ಬಿರುದನ್ನು ನೀಡಿದ. ನಂತರ ಬ್ರಿಟಿಷ್ ರೆಸಿಡೆಂಟ್ ಆಗಿ ನೇಮಕಗೊಳಿಸಿದ. ಅದೇ ಸಂದರ್ಭದಲ್ಲಿ ಆತನಿಗೆ ವೈಟ್ ಮೊಘಲ್ ಎಂದು ಕರೆಯಲಾಯಿತು. ಈ ವೇಳೆಯಿಂದ ಕೆಂಪು ಕೋಟೆಯಲ್ಲಿ ವಾಸಿಸಲು ಪ್ರಾರಂಭಿಸಿದ.

ಇನ್ನು ವೈಟ್ ಮೊಘಲ್ ಅಕಾ ಡೇವಿಡ್ ಒಕ್ಟರ್ಲೋನಿ ಮಾತ್ರ ಮೊಘಲರಂತೆ ದುರಾಚಾರ ಮಾಡುತ್ತಿದ್ದವನಲ್ಲ. ಹೈದರಾಬಾದ್‌’ನಲ್ಲಿಯೂ ಬ್ರಿಟಿಷ್ ಅಧಿಕಾರಿ ಜೇಮ್ಸ್ ಅಕಿಲ್ಸ್ ಕಿರ್ಕ್‌’ಪ್ಯಾಟ್ರಿಕ್ ಅವರ ಮನೆಯಲ್ಲಿ ಮೊಘಲರಂತೆ ವಾಸಿಸುತ್ತಿದ್ದರು. ಮನೆಯಲ್ಲಿ ಸಣ್ಣ ಜನಾನವನ್ನು ಹೊಂದಿದ್ದರು.

ಇನ್ನು ಭಾರತೀಯ ಮಹಿಳೆಯರ ಆಕರ್ಷಣೆಯನ್ನು ತಪ್ಪಿಸಲು ಈಸ್ಟ್ ಇಂಡಿಯಾ ಕಂಪನಿಯಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ಆಗಾಗ್ಗೆ ಬ್ರಿಟಿಷ್ ಅಧಿಕಾರಿಗಳು ನಿರಂಕುಶವಾಗಿ ವರ್ತಿಸುತ್ತಿದ್ದರು.

ನವಭಾರತ್ ಗೋಲ್ಡ್‌’ನಲ್ಲಿನ ಲೇಖನವೊಂದರ ಪ್ರಕಾರ, ಕಾಮಸೂತ್ರದ ಅನುವಾದಕ ಮತ್ತು ಬ್ರಿಟಿಷ್ ಬರಹಗಾರ ಸರ್ ರಿಚರ್ಡ್ ಬರ್ಟನ್, ಬ್ರಿಟಿಷರು ಭಾರತದಲ್ಲಿ ಜನಾನಗಳನ್ನು ರಚಿಸಿದರು. ಏಕೆಂದರೆ ಭಾರತೀಯ ಮಹಿಳೆಯರು ಪ್ರೀತಿ ಮತ್ತು ದೈಹಿಕ ಸಂಬಂಧಗಳ ವಿಷಯದಲ್ಲಿ ಉತ್ತಮರು ಎಂದು ಹೇಳಿದ್ದಾನೆ.

ಕಾಮಸೂತ್ರದ ಅನುವಾದಕ ಬರ್ಟನ್ ಕೂಡ, “ಭಾರತೀಯ ಮಹಿಳೆಯರು ಎಷ್ಟು ಅತ್ಯಾಧುನಿಕರಾಗಿದ್ದರು ಎಂದರೆ ಬ್ರಿಟಿಷ್ ಪುರುಷರು ಅವರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಅವರನ್ನು ಮೆಚ್ಚಿಸಲು ಅಥವಾ ತೃಪ್ತಿಪಡಿಸಬೇಕು ಎಂದರೆ ಅವರಿಗೆ 20 ನಿಮಿಷಗಳನ್ನು ನೀಡಬೇಕಾಗಿತ್ತು. ಆದರೆ ಇಂಗ್ಲಿಷ್ ಪುರುಷರಿಂದ ಅದು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾನೆ.

ಕಾಮಸೂತ್ರದ ಅನುವಾದಕ ಸರ್ ರಿಚರ್ಡ್ ಬರ್ಟನ್, ತಮ್ಮ ದೇಶವಾಸಿಗಳಿಗೆ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಲಹೆ ನೀಡಿದ್ದನು. ಯುರೋಪಿಯನ್ ಪುರುಷರು ಶರಬತ್ತು ಮತ್ತು ಸಿಗಾರ್ ಕುಡಿಯುತ್ತಾರೆ. ತಮ್ಮ ಶಕ್ತಿಯನ್ನು ಹೆಚ್ಚಿಸಲು ವೀಳ್ಯದೆಲೆ ಅಗಿಯುತ್ತಾರೆ ಎಂದು ಆತ ಹೇಳಿದ್ದನಂತೆ.

ಮೊಘಲರು ದುರ್ಬಲರಾಗುತ್ತಿದ್ದರು ಮತ್ತು ಬ್ರಿಟಿಷರು ಪ್ರಬಲರಾಗಿದ್ದರು. ಆದರೆ ಜನಾನದ ಸ್ಥಿತಿ ಅದೇ ಆಗಿತ್ತು. ಎಲ್ಲ ಸೌಲಭ್ಯಗಳಿದ್ದರೂ ಜೀತದಾಳುಗಳಂತೆ ಬದುಕುತ್ತಿರುವ ಮಹಿಳೆಯರಿಗೆ ಹೊರಜಗತ್ತೇ ಇರಲಿಲ್ಲ. ಒಂದು ವೇಳೆ ಅವಿಧೇಯತೆ ತೋರಿದರೆ ಮರಣದಂಡನೆ ವಿಧಿಸಲಾಗುತ್ತಿತ್ತು.

ಇದನ್ನೂ ಓದಿ: Hopshoots: ಕೆಜಿಗೆ 1 ಲಕ್ಷ ರೂ… ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ: ಬರೋಬ್ಬರಿ 20 ವರ್ಷ ಬದುಕುತ್ತೆ ಈ ವೆಜಿಟೇಬಲ್!!

ಜನಾನದಲ್ಲಿ, ಒಬ್ಬ ಮಹಿಳೆ ನಿಯಮ ಪಾಲಿಸದಿದ್ದರೆ, ಆಕೆಗೆ ಮರಣದಂಡನೆ ವಿಧಿಸಲಾಗುತ್ತಿತು. ಇದಕ್ಕಾಗಿ ಜನಾನದ ಒಳಗೆ ರಹಸ್ಯ ಮಾರ್ಗಗಳು, ಮೆಟ್ಟಿಲುಗಳು ಮತ್ತು ಕೊಠಡಿಗಳು ಸಹ ಇದ್ದವು. ಮರಣದಂಡನೆ ವಿಧಿಸಿದ ಬಳಿಕ ಅವರ ಮೃತದೇಹವನ್ನು ಅಲ್ಲಿ ನಿರ್ಮಿಸಲಾಗಿದ್ದ ಆಳವಾದ ಬಾವಿಗೆ ಎಸೆಯಲಾಗುತ್ತಿತು ಎಂದು ಹೇಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News