ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸೇರಲು ಜೆಡಿಯು ನಿರಾಕರಿಸಿದೆ ಎಂದು ತಿಳಿದುಬಂದಿದೆ.



COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ತಮ್ಮ ಪಕ್ಷದಿಂದ ಯಾವುದೇ ಸದಸ್ಯನು ಕೂಡ ಮೋದಿ ನೂತನ ಸಚಿವ ಸಂಪುಟದಲ್ಲಿ ಭಾಗವಹಿಸುವುದಿಲ್ಲ ಆದರೂ ಕೂಡ ಎನ್ಡಿಎ ಭಾಗವಾಗಿರುವುದಾಗಿ ಹೇಳಿದ್ದಾರೆ.ಪ್ರಧಾನಿ ಮೋದಿಯವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ ಸಂದರ್ಭದಲ್ಲಿ 
ಅವರು ಸ್ಪಷ್ಟಪಡಿಸಿದ್ದಾರೆ.   


ಈಗ ನಿತೀಶ್ ಕುಮಾರ್ ಅವರಿಗೆ ಹತ್ತಿರುವ ಇರುವ ಮೂಲಗಳು ಹೇಳುವಂತೆ ಜೆಡಿಯು ಪಕ್ಷಕ್ಕೆ ಒಂದೇ ಸ್ಥಾನವನ್ನು ನೀಡಲಾಗಿತ್ತು, ಈ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಸಂಪುಟದ ಭಾಗವಾಗಿರುವುದಿಲ್ಲವೆಂದು ತಿಳಿದುಬಂದಿದೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ  ಬಿಹಾರದ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದಿದೆ.