ನವದೆಹಲಿ: ಬಿಜೆಪಿ ನಾಯಕ ಗೋಪಾಲ್ ನಾರಾಯಣ್ ಸಿಂಗ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಸ್ವಾರ್ಥಿ ಎಂದು ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಕೊನೆಯ ಕ್ಷಣದಲ್ಲಿ ಮೋದಿ ನೂತನ ಸಚಿವ ಸಂಪುಟದಿಂದ ಜೆಡಿಯು ಹೊರಗುಳಿದಿರುವ ಬಗ್ಗೆ ಟೀಕಾ ಪ್ರಹಾರ ನಡೆಸಿದ ಅವರು "ನಿತೀಶ್ ಕುಮಾರ್ ಅವರು  ಕೇವಲ ತಮ್ಮ ಲಾಭಕ್ಕಾಗಿ ಮಾತ್ರ ಯೋಚಿಸುತ್ತಾರೆ, ಅವರು ಬಹಳ ಸ್ವಾರ್ಥಿ ಮತ್ತು ತಮ್ಮ ಲಾಭಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅವರು ಬಹಳ ಸ್ವಾರ್ಥಿಯಾಗಿದ್ದಾರೆ" ಎಂದು ಬಿಜೆಪಿ  ರಾಜ್ಯಸಭೆ ಸಂಸದ ಹೇಳಿದ್ದಾರೆ.


"ಬಿಜೆಪಿಯ ಸಹಾಯದಿಂದ ಅವರು ಏಳು ವರ್ಷಗಳ ಕಾಲ ಬಿಹಾರದಲ್ಲಿ ಸರಕಾರವನ್ನು ನಡೆಸಿದ್ದಾರೆ. ಆದರೆ ಅವರು ಸರ್ಕಾರವನ್ನು ಸ್ವತಂತ್ರವಾಗಿ ಚಲಾಯಿಸಬಹುದು ಎಂದು ಅರಿತುಕೊಂಡ ಕ್ಷಣ ಅವರು ನಮ್ಮ ಪಕ್ಷವನ್ನು ಹೊರದೂಡಿದರು. ಸಚಿವ ಸಂಪುಟಕ್ಕಾಗಿ  ಮೈತ್ರಿಕೂಟದ  ಯಾವುದೇ ಪಾಲುದಾರರು ಪ್ರತಿಭಟನೆ ನಡೆಸುತ್ತಿಲ್ಲ. ಬಿಹಾರದ ಜನರು ನಿತೀಶ್ ಕುಮಾರ್ ಅವರ ನಿಲುವಿಗೆ ಈಗ  ಬೆರಳನ್ನು ತೋರಿಸುತ್ತಾರೆ"  ಎಂದು ಅವರು ಹೇಳಿದರು.


ಗುರುವಾರದಂದು ನರೇಂದ್ರ ಮೋದಿ ಅವರ ನೂತನ ಸಚಿವ ಸಂಪುಟದ ಭಾಗವಾಗಿರುವುದಿಲ್ಲವೆಂದು ಜೆಡಿ (ಯು) ನಿರ್ಧರಿಸಿತು. ಬಿಜೆಪಿ ನೀಡುವ ಏಕೈಕ ಮಂತ್ರಿ ಸ್ಥಾನವನ್ನು ಅದು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿತು. ತದನಂತರ ಇದೇನು ದೊಡ್ಡ ಸಮಸ್ಯೆಯಲ್ಲ. ಆದರೆ ನಾವು ಎನ್ಡಿಎಯಲ್ಲಿ ಇದ್ದುಕೊಂಡೇ ಕೆಲಸ ಮಾಡುತ್ತೇವೆ ಎಂದು ನಿತೀಶ್ ಕುಮಾರ್ ತಿಳಿಸಿದರು.