ನವದೆಹಲಿ: ಬಿಹಾರ್ ದಲ್ಲಿನ ಮಹಾಘಟಬಂಧನ್ ಸೇರಲು ನಿತೀಶ್ ಕುಮಾರ್ ಹಲವು ಬಾರಿ ಪ್ರಯತ್ನಿಸಿದ್ದರು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನೂ ಬಿಡುಗಡೆಯಾಗಬೇಕಿರುವ ಲಾಲೂ ಪ್ರಸಾದ್ ಅವರ ಆತ್ಮ ಚರಿತ್ರೆ "ಫ್ರಾಂ ಗೋಪಾಲ್ ಗಂಜ್ ಟು ರೈಸಿನಾ"ದಲ್ಲಿ ಈ ಕುರಿತಾಗಿ ತಮ್ಮ ತಂದೆ ಪ್ರಸ್ತಾಪಿಸಿದ್ದಾರೆ.2017 ರಲ್ಲಿ ಎನ್ ಡಿ ಎ ಮೈತ್ರಿಕೂಟ ಸೇರಿದ ಆರು ತಿಂಗಳ ಒಳಗಾಗಿ ಮತ್ತೆ ಮಹಾಮೈತ್ರಿ ಸೇರಲು ಸಾಕಷ್ಟು ಪ್ರಯತ್ನಪಟ್ಟಿದ್ದರು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.


"ನನ್ನ ತಂದೆ ಮುಂಬರುವ ಗೋಪಾಲ್ ಗಂಜ್ ಟು ರೈಸಿನಾ ಪುಸ್ತಕದಲ್ಲಿ ನೀತಿಶ್ ಕುಮಾರ್ ಮತ್ತೆ ಮೈತ್ರಿಕೂಟಕ್ಕೆ ಸೇರಲು ಹಲವು ಪ್ರಯತ್ನ ನಡೆಸಿದ್ದರು.ಆದರೆ ನಾವೆಂದಿಗೂ ಕೂಡ ಅವರ ಜೊತೆ ಸೇರುವುದಿಲ್ಲವೆಂದು ಹೇಳಿದರು. 



2015ರಲ್ಲಿ ಆರ್ಜೆಡಿ ಹಾಗೂ ಜೆಡಿಯುನ ಮೈತ್ರಿಕೂಟ ಬೆಸೆಯಲು ಪ್ರಶಾಂತ್ ಕಿಶೋರ್ ಜೊತೆಗೆ ಮೀಟಿಂಗ್ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಅವರಿಗೆ ಆಮಂತ್ರಣ ನೀಡಿರಲಿಲ್ಲ ಬದಲಿಗೆ ಅವರಾಗಿಯೇ ನಮ್ಮ ಬಳಿ ಬಂದಿದ್ದರು.ಪ್ರಶಾಂತ್ ಕಿಶೋರ್ ಯಾವುದೇ ಕಾರಣವಿಲ್ಲದೆ ಯಾರನ್ನು ಭೇಟಿ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ತೇಜಸ್ವಿ ಯಾದವ್ ಹೇಳಿದರು.


ಇದೇ ವೇಳೆ ಆರ್ಜೆಡಿ ಟಿಕೆಟ್ ನಿಂದ ಮಾಧೆಪುರಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಶರದ್ ಯಾದವ್ ಕೂಡ ತೇಜಸ್ವಿ ಯಾದವ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುತ್ತಾ ನೀತಿಶ್ ಕುಮಾರ್ ಮಹಾಮೈತ್ರಿಕೂಟ ಸೇರಲು ಹಲವು ಬಾರಿ ಪ್ರಯತ್ನ ಪಟ್ಟಿದ್ದರು ಎಂದು ಹೇಳಿದರು