ಪಾಟ್ನಾ: ಬಿಹಾರದಲ್ಲಿ ನಡೆದ  ವಿಧಾನಪರಿಷತ್ ಚುನಾವಣೆಯಲ್ಲಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಹಾಗೂ ಇತರ 9 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ಚುನಾವಣೆಯಲ್ಲಿ ಬಿಜೆಪಿಯು ಪ್ರೇಮಚಂದ್ರ ಮಿಶ್ರಾ ರವರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿತ್ತು. ಅದೇ ರೀತಿಯಾಗಿ ಬಿಜೆಪಿಯು ಸಂಜಯ್ ಪಾಸ್ವಾನ್, ಮಂಗಲ್ ಪಾಂಡೆ, ಸುಶೀಲ್ ಕುಮಾರ್ ರನ್ನು ಕಣಕ್ಕೆ ಇಳಿಸಿತ್ತು.


ಜೆಡಿಯು ನಿತೀಶ್ ಕುಮಾರ್, ರಾಮೇಶ್ವರ್ ಮಹಾಟೋ ಮತ್ತು ಖಲೀದ್ ಅನ್ವರ್ ಎಂದು ಹೆಸರಿಸಿತ್ತು. ಆರ್ ಜೆ ಡಿ ಯಲ್ಲಿ , ರಾಬ್ರಿ ದೇವಿ, ರಾಮಚಂದ್ರ ಪುರ್ವೆ, ಸಯ್ಯದ್ ಖುರ್ಷಿದ್ ಮೊಹ್ಸೆನ್ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಂಝಿ ಅವರ ಪುತ್ರ ಸಂತೋಷ್ ಮಾಂಜಿಯವರನ್ನು ಕಣಕ್ಕಿಳಿಸಲಾಗಿತ್ತು.


ಜಾತಿ ಸಮೀಕರಣದ ಆಧಾರದ ಮೇಲೆ ಎಲ್ಲ ಪಕ್ಷಗಳು ಕಣಕ್ಕೆ ಇಳಿಸಲಾಗಿತ್ತು. ಸಂಜಯ್ ಪಾಸ್ವಾನ್, ಪ್ರೇಮ್ಚಂದ್ ಮಿಶ್ರಾ, ರಾಮೇಶ್ವರ್ ಮಹಾಟೋ, ಖಲೀದ್ ಅನ್ವರ್, ಸೈಯದ್ ಖುರ್ಷಿದ್ ಮೊಹ್ಸೆನ್ ಮತ್ತು ಸಂತೋಷ್ ಕುಮಾರ್ ಸುಮನ್ ಅವರು ಹೊಸದಾಗಿ ಆಯ್ಕೆಯಾದ ಎಂಎಲ್ಸಿಗಳಾಗಿದ್ದಾರೆ.