ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಆದರೆ ಇಲ್ಲೊಬ್ಬ 45 ವರ್ಷದ ಅನಿಲ್ ಶರ್ಮಾ ಅಲಿಯಾಸ್ ಅಲಿ ಬಾಬಾ ಎಂಬಾತ ತನ್ನ ಕೈ ಬೆರಳನ್ನೇ ದೇವರಿಗೆ ಸಮರ್ಪಿಸಿದ್ದಾನೆ.


COMMERCIAL BREAK
SCROLL TO CONTINUE READING

ಅನಿಲ್ ಶರ್ಮಾ ನಿತೀಶ್ ಕುಮಾರ್(Nitish Kumar) ಅವರ ಜಾತಿ-ಕುರ್ಮಿಗೆ ಸೇರಿದವರಲ್ಲ, ಬಿಹಾರದ ಜೆಹಾನಾಬಾದ್ ಜಿಲ್ಲೆಯ ಘೋಶಿ ಪಿಎಸ್ ಅಡಿಯಲ್ಲಿ ವೈನಾ ಗ್ರಾಮದ ಮೇಲ್ಜಾತಿಯ ಭೂಮಿಹಾರ್‌ಗೆ ಸೇರಿದವರು. ಆದರೆ ಕೆಲವು ಕಾರಣಗಳಿಂದಾಗಿ ಅವರು ನಿತೀಶ್ ಕುಮಾರ್ ಅವರನ್ನು ರಾಜ್ಯದ ಸಿಎಂ ಆಗಿ ನೋಡಬೇಕು ಎಂದು ದೇವರಲ್ಲಿ ಹರಿಕೆ ಹೊತ್ತಿದ್ದು ಇದೀಗ ನಿತೀಶ್ ಸಿಎಂ ಆಗಿದ್ದಕ್ಕೆ ಹರಕೆ ಅರ್ಪಿಸಿದ್ದಾರೆ. ಅಲ್ಲದೆ ನಿತೀಶ್ ಅವರ ಅಭಿಯಾನಕ್ಕೆ ಧನಸಹಾಯಕ್ಕಾಗಿ ತಮ್ಮ ಮನೆಯ ಕೆಲವು ಆಸ್ತಿಯನ್ನು ಸಹ ಮಾರಾಟ ಮಾಡಿದ ರೈತ ಎಂದು ತಿಳಿದುಬಂದಿದೆ.


ನೀವು ಗಮನಿಸಬೇಕಾದ ಕೇಂದ್ರದ ಹೊಸ ಕೊವಿಡ್ ಮಾರ್ಗಸೂಚಿಗಳು...!


ನವೆಂಬರ್ 16 ರಂದು, ನಿತೀಶ್ ಮತ್ತೆ ಮುಖ್ಯಮಂತ್ರಿಯವರ ಪ್ರಮಾಣವಚನ ಸ್ವೀಕರಿಸಿದ ದಿನ, ಶರ್ಮಾ ತನ್ನ ಎಡಗೈಯಿಂದ ಬೆರಳನ್ನು ಕತ್ತರಿಸಿ ಗ್ರಾಮದೇವತೆ-ಗೌರಿಯಾ ಬಾಬಾಗೆ ಅರ್ಪಣೆಯಾಗಿ ಅರ್ಪಿಸಿದನು.


ಮೊದಲು ಯಾರಿಗೆ Covid-19 Vaccine ನೀಡಲಾಗುವುದು, ರಾಜ್ಯಗಳ ಜೊತೆಗೆ ಪ್ಲಾನ್ ಹಂಚಿಕೊಂಡ ಕೇಂದ್ರ


ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವ ಸಂತೋಷದಲ್ಲಿ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತೇನೆ ಎಂದು ಶರ್ಮಾ, ಗಾಂಜಿ ಮತ್ತು ಲುಂಗಿ ಧರಿಸಿ, ಅಪೂರ್ಣ ಮನೆಯಲ್ಲಿ ಕುಳಿತು ಮಾಧ್ಯಮಗಳಿಗೆ ಹೆಮ್ಮೆಯಿಂದ ಹೇಳಿದರು.


ಡಿಸೆಂಬರ್ 1 ರಿಂದ ಪಂಜಾಬ್ ನಲ್ಲಿ ರಾತ್ರಿ ಕರ್ಪ್ಯೂ ಜಾರಿ