ಮೊದಲು ಯಾರಿಗೆ Covid-19 Vaccine ನೀಡಲಾಗುವುದು, ರಾಜ್ಯಗಳ ಜೊತೆಗೆ ಪ್ಲಾನ್ ಹಂಚಿಕೊಂಡ ಕೇಂದ್ರ

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು 8 ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಸಭೆ ನಡೆದಿದೆ. ಈ ಸಭೆಯ ನಂತರ, ರಾಜ್ಯಗಳು Coronavirus Vaccination Plan ಸಿದ್ಧತೆಗಳನ್ನು ಪ್ರಾರಂಭಿಸಿವೆ.

Last Updated : Nov 25, 2020, 05:33 PM IST
  • ಕೊರೊನಾ ವೈರಸ್ ನಿಂದ ಅತಿ ಹೆಚ್ಚು ಬಾಧೆಗೊಳಗಾದ 8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆ.
  • ಕೊರೊನಾ ವ್ಯಾಕ್ಸಿನೆಶನ್ ಪ್ಲಾನ್ ಕುರಿತು ಪ್ರಧಾನಿಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರಗಳು
  • ರಾಜ್ಯಗಳ ಜೊತೆಗೆ ತನ್ನ ಪ್ಲಾನ್ ಕೂಡ ಹಂಚಿಕೊಂಡ ಕೇಂದ್ರ ಸರ್ಕಾರ.
ಮೊದಲು ಯಾರಿಗೆ Covid-19 Vaccine ನೀಡಲಾಗುವುದು, ರಾಜ್ಯಗಳ ಜೊತೆಗೆ ಪ್ಲಾನ್ ಹಂಚಿಕೊಂಡ ಕೇಂದ್ರ title=

ನವದೆಹಲಿ: ಕರೋನವೈರಸ್‌ನಿಂದ ಅತಿ ಹೆಚ್ಚು ಬಾಧೆಗೊಳಗಾದ  8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ನವೆಂಬರ್ 24) ವರ್ಚ್ಯುವಲ್ ಸಭೆ ನಡೆಸಿದ್ದಾರೆ. ಲಸಿಕೆ (Coronavirus Vaccine) ಲಭ್ಯವಾದ ನಂತರ ಅದನ್ನು ಹೇಗೆ ವಿತರಿಸಬೇಕು ಎಂಬ ಕುರಿತು ಪ್ಲಾನ್ ನಡೆಸುತ್ತಿರುವುದಾಗಿ ರಾಜ್ಯ ಮುಖ್ಯಮಂತ್ರಿ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ರಾಜ್ಯಗಳಲ್ಲಿ ಬಲವಾದ ಕೋಲ್ಡ್ ಚೈನ್ ಮೂಲಸೌಕರ್ಯವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೆಚ್ಚಿನ ಮುಖ್ಯಮಂತ್ರಿಗಳು ಪ್ರಧಾನಿಗೆ ತಿಳಿಸಿದ್ದಾರೆ. ಕೆಲವು ಮುಖ್ಯಮಂತ್ರಿಗಳು ಮೊದಲು ಲಸಿಕೆ ಯಾರಿಗೆ ನೀಡಬೇಕು, ಅಂತಹ ಜನರನ್ನು ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ- ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ: ಸಚಿವ ಡಾ. ಕೆ. ಸುಧಾಕರ್

ಕೇಂದ್ರ ಸರ್ಕಾರ ಪ್ಲಾನ್ ಏನು (Corona Vaccination Plan)
ಸಭೆಯಲ್ಲಿ, ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲು ಕೇಂದ್ರ ಯೋಜಿಸಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಬಳಿಕ  ಪೊಲೀಸ್ ಸಿಬ್ಬಂದಿ ಮತ್ತು ನೈರ್ಮಲ್ಯ ಕಾರ್ಮಿಕರು ಮತ್ತು ನಂತರ 50 ವರ್ಷ ವಯಸ್ಸಾದವರನ್ನು ಸೇರಿಸಲಾಗುವುದು. ನಾಲ್ಕನೇ ಹಂತದಲ್ಲಿ,ಈಗಾಗಲೇ ಯಾವುದಾದರೊಂದು ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಈ ಲಸಿಕೆ ನೀಡಲಾಗುವುದು. ಈ ನಾಲ್ಕು ವಿಭಾಗಗಳ ಜನರ ಡೇಟಾಬೇಸ್ ಒದಗಿಸುವಂತೆ ಭೂಷಣ್ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಇದನ್ನು ಓದಿ-ಭಾರತದಲ್ಲಿ ಫೆಬ್ರುವರಿವರೆಗೆ Corona Vaccine ಸಿಗುವ ಸಾಧ್ಯತೆ, ಬೆಲೆ ಎಷ್ಟು ಇಲ್ಲಿದೆ ವಿವರ

ಕರ್ನಾಟಕ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಕರ್ನಾಟಕದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಪ್ರತ್ಯೇಕ ರಾಜ್ಯಗಳಿಗೆ ಕೇಂದ್ರದ ವತಿಯಿಂದ ಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಈ ಸಮೀತಿಗೆ ಕೊರೊನಾ ವ್ಯಾಕ್ಸಿನ್ ಪ್ರದಾನ ಮಾಡಲು ಒಂದು ರೋಡ ಮ್ಯಾಪ್ ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗುವುದು ಎಂದಿದ್ದಾರೆ. ಎಲ್ಲ ಜಿಲ್ಲೆಗಳು ಹಾಗೂ ಹಳ್ಳಿಗಳಿಗೆ ವ್ಯಾಕ್ಸಿನ್ ವಿತರಣೆಗಾಗಿ ಒಂದು ಡಿಜಿಟಲ್ ಐಡಿಯೊಂದಿಗೆ ಸೇರಿಸಲಾಗುವ್ದು ಎಂದಿದ್ದಾರೆ.

ಇದನ್ನು ಓದಿ- Corona Vaccine Plan: ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು, Covin ಆಪ್ ನೀಡಲಿದೆ ಮಾಹಿತಿ

ಇದೆ ರೀತಿ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳೂ ಕೂಡ ಕೊವಿಡ್ 19 ವ್ಯಾಕಿನ್ ಪ್ಲಾನ್ ಗಾಗಿ ಯಾವ ಯಾವ ಸಿದ್ಧತೆಗಳನ್ನು ಮಾಡಲಾಗಿದೆ ಎಂಬುದರ ಕುರಿತು ಪ್ರಧಾನಿಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

Trending News