ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಎನ್‌ಡಿಎಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಹಿನ್ನಲೆಯಲ್ಲಿ ಬಿಜೆಪಿಯ ಅಭ್ಯರ್ಥಿ ಬಿಹಾರದ ಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಭಾನುವಾರ ನಡೆದ ಎನ್​ಡಿಎ ಸಭೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಗೆದ್ದಿದ್ದರೂ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ (Nitish Kumar) ಅವರನ್ನು ಆಯ್ಕೆ ಮಾಡಲಾಗಿದೆ.  ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಸೋಮವಾರ ಸಂಜೆ 4.30 ರ ಸುಮಾರಿಗೆ ನಿತೀಶ್ ಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.


COMMERCIAL BREAK
SCROLL TO CONTINUE READING

ಉಪಮುಖ್ಯಮಂತ್ರಿ ಆದರೂ ಆಗಬೇಕೆಂಬ ಸುಶೀಲ್ ಮೋದಿಯ ಕನಸು ಭಗ್ನ:
ಎನ್​ಡಿಎ ಸಭೆಯಲ್ಲಿ ಕೈಗೊಂಡ ಈ ನಿರ್ಧಾರದೊಂದಿಗೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಸುಶೀಲ್ ಕುಮಾರ್ ಮೋದಿ (Sushil Kumar Modi)ಯವರಿಗೆ ಕಡೇಪಕ್ಷ ಮತ್ತೆ ಉಪಮುಖ್ಯಮಂತ್ರಿ ಆಗುವ ಕನಸೂ ಕೂಡ ಭಗ್ನಗೊಂಡಿದೆ. ವಾಸ್ತವವಾಗಿ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ತರ್ಕಿಶೋರ್ ಪ್ರಸಾದ್ ಮತ್ತು ಉಪನಾಯಕರಾಗಿ ರೇಣು ಬಾಲಾ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ದೆಹಲಿಯಿಂದ ಪಾಟ್ನಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಡಿಎ ಶಾಸಕಾಂಗ ಪಕ್ಷದ ಮುಖಂಡರ ಜೊತೆಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಮತ್ತು ಉಪನಾಯಕನ ಹೆಸರನ್ನು ದೃಢಪಡಿಸಿದರು.


ಬಿಹಾರದ ಸಿಎಂ ಆಗುವ ಕನಸಿನಲ್ಲಿದ್ದ ಸುಶಿಲ್ ಕುಮಾರ್ ಮೋದಿ ಹೇಳಿದ್ದೇನು?


ಜೆಡಿಯು ವಿಧಾನಸಭೆಯ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ:
ಇದಕ್ಕೂ ಮೊದಲು ಪಾಟ್ನಾದಲ್ಲಿ ನಿತೀಶ್ ಕುಮಾರ್ ಅವರು ಮೊದಲು ಜೆಡಿಯು ವಿಧಾನಸಭೆಯ ನಾಯಕರಾಗಿ  ಸರ್ವಾನುಮತದಿಂದ ಆಯ್ಕೆಯಾದರು. ನಂತರ ಎನ್‌ಡಿಎಯ ಎಲ್ಲಾ ನಾಲ್ಕು ಘಟಕಗಳ ನಾಯಕರ ಸಭೆ ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆಯಿತು. ಈ ಸಭೆಯಲ್ಲಿ ರಾಜನಾಥ್ ಸಿಂಗ್ (Rajnath Singh) ಅವರಲ್ಲದೆ ಎಚ್‌ಎಎಂ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಿತಾನ್ ರಾಮ್ ಮಾಂಜಿ ಮತ್ತು ವಿಐಪಿ ಅಧ್ಯಕ್ಷ ಮುಖೇಶ್ ಸಾಹ್ನಿ ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. 


Bihar election results 2020: ಚಿರಾಗ್ ಪಾಸ್ವಾನ್ ಹೆಣೆದ ರಣತಂತ್ರಕ್ಕೆ ಸಿಎಂ ನಿತೀಶ್ ಕುಮಾರ್ ಗಿರಗಿಟ್ಲೆ..!


'ಏಳನೇ ಬಾರಿಗೆ' ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನಿತೀಶ್ ಕುಮಾರ್: 
- ನಿತೀಶ್ ಕುಮಾರ್ ಅವರು 2000 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಸಮಯದಲ್ಲಿ ಬಹುಮತದ ಕೊರತೆಯಿಂದಾಗಿ ಅವರು ಏಳು ದಿನಗಳಲ್ಲಿ ರಾಜೀನಾಮೆ ನೀಡಿದರು.
- 2005 ರಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದರು.
- 2010 ರಲ್ಲಿ ಮೂರನೇ ಬಾರಿಗೆ ಬಿಹಾರ ಮತ್ತೆ ನಿತೀಶ್ ಸಿಎಂ ಪಟ್ಟ ಏರಿದರು.
- 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡದ ಕಾರಣ ನಿತೀಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಯುನ ಜೆ.ಡಿ.ರಾಮ್ ಮಾಂಜಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಉಭಯ ನಾಯಕರ ನಡುವಿನ ತಪ್ಪು ತಿಳುವಳಿಕೆಯ ನಂತರ ಜಿತಾನ್ ರಾಮ್ ಮಾಂಜಿ ರಾಜೀನಾಮೆ ನೀಡಬೇಕಾಯಿತು.
- 22 ಫೆಬ್ರವರಿ 2015 ರಂದು ನಿತೀಶ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಿತೀಶ್ ಕುಮಾರ್ ಬಿಜೆಪಿಯಿಂದ ಬೇರ್ಪಟ್ಟ ನಂತರ 2015 ರಲ್ಲಿ ಆರ್‌ಜೆಡಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರು.
- ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ 2015ರ ನವೆಂಬರ್ 20 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
- ಆದರೆ ಬಳಿಕ ಆರ್‌ಜೆಡಿ (RJD) ಯೊಂದಿಗಿನ ಮುನಿಸಿನಿಂದಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್ 2017ರ ಜುಲೈ 27 ರಂದು ಬಿಜೆಪಿಯ ಸಹಯೋಗದೊಂದಿಗೆ ಆರನೇ ಬಾರಿಗೆ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದರು.
- ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ  ಜೆಡಿಯು ಕಡಿಮೆ ಸ್ಥಾನ ಗೆದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಏಳನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಇದು ದಾಖಲೆಯಾಗಿದೆ.