ನವದೆಹಲಿ : Driving License New Rules: ಡ್ರೈವಿಂಗ್ ಲೈಸನ್ಸ್  ಪಡೆಯುವುದಕ್ಕಾಗಿ ಅಥವಾ ನವೀಕರಣಕ್ಕೆ ಸಂಬಂಧಪಟ್ಟಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport & Highways) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯೆ ಹೀಗಿರಲಿದೆ : 
ಈ ಹೊಸ ನಿಯಮದ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ( Driving License) ಪಡೆಯುವ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿರುತ್ತದೆ. ಅಂದರೆ, ಲೈಸೆನ್ಸ್ ಅಪ್ಲಿಕೇಶನ್‌ನಿಂದ ಹಿಡಿದು,  ಲೈಸೆನ್ಸ್ ಪ್ರಿಂಟ್ ಆಗುವವರೆಗಿನ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುತ್ತದೆ (Online). ಇದಲ್ಲದೆ, ಎಲೆಕ್ಟ್ರಾನಿಕ್ ಪ್ರಮಾಣಪತ್ರಗಳು ಮತ್ತು ದಾಖಲೆಗಳು, ವೈದ್ಯಕೀಯ ಪ್ರಮಾಣಪತ್ರಗಳು,  ಲರ್ನಿಂಗ್ ಲೈಸೆನ್ಸ್ ,   ಡ್ರೈವಿಂಗ್ ಲೈಸೆನ್ಸ್  ಸರೆಂಡರ್ ,  ಲೈಸೆನ್ಸ್  ನವೀಕರಣ ಎಲ್ಲವೂ ಆನ್ ಲೈನ್ ನಲ್ಲಿಯೇ ನಡೆಯಲಿದೆ. 


ಇದನ್ನೂ ಓದಿ Driving License: ಈಗ ಮನೆಯಲ್ಲಿಯೇ ಕುಳಿತು DL ಪಡೆಯಲು ಇಲ್ಲಿದೆ ಸುಲಭ ವಿಧಾನ


 RC ನವೀಕರಣ ಪ್ರಕ್ರಿಯೆ ಕೂಡಾ ಸರಳವಾಗಲಿದೆ : 
ಇಂಥಹ ಮಾರ್ಗಸೂಚಿಗಳಿಂದ ಹೊಸ ವಾಹನವನ್ನು ನೋಂದಾಯಿಸುವ ಪ್ರಕ್ರಿಯೆ ಕೂಡಾ ಸರಳವಾಗಲಿದೆ. ನೋಂದಣಿ ಪ್ರಮಾಣಪತ್ರ (RC) ನವೀಕರಣವನ್ನು ಈಗ 60 ದಿನಗಳ ಮುಂಚಿತವಾಗಿಯೇ ಮಾಡಬಹುದು. ತಾತ್ಕಾಲಿಕ ನೋಂದಣಿಯ ಸಮಯ ಮಿತಿಯನ್ನು ಸಹ 1 ತಿಂಗಳಿಂದ 6 ತಿಂಗಳಿಗೆ ಹೆಚ್ಚಿಸಲಾಗಿದೆ.


ಡ್ರೈವಿಂಗ್ ಟೆಸ್ಟ್ ಗೆ  ಆರ್‌ಟಿಒಗೆ ಹೋಗಬೇಕಾಗಿಲ್ಲ :
ಇದರ ಜೊತೆಗೆ, ಲರ್ನರ್ಸ್ ಲೈಸೆನ್ಸ್ (Learners License) ಪ್ರಕ್ರಿಯೆಯಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಿದೆ. ಅದರ ಪ್ರಕಾರ ನೀವು ಚಾಲನಾ ಪರೀಕ್ಷೆಗೆ ಆರ್‌ಟಿಒಗೆ (RTO) ಹೋಗಬೇಕಾಗಿಲ್ಲ.  ಈ ಕೆಲಸವನ್ನು ಟ್ಯುಟೋರಿಯಲ್ ಮೂಲಕ ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬಹುದು. ಕರೋನಾ (COVID-19) ಕಾಲದಲ್ಲಿ ಈ ನಿಯಮ ಹೆಚ್ಚು ಸಹಾಯಕ್ಕೆ ಬರಲಿದೆ ಎನ್ನಲಾಗಿದೆ. 


ಇದನ್ನೂ ಓದಿ : ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ


ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು , ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್ (DL), ನೋಂದಣಿ ಪ್ರಮಾಣಪತ್ರ (RC), ಫಿಟ್ನೆಸ್ ಸರ್ಟಿಫಿಕೇಟ್, ಪರ್ಮಿಟ್ ಮುಂತಾದವುಗಳ ಸಿಂಧುತ್ವವನ್ನು 30 ಜೂನ್ 2021ವರೆಗೆ ವಿಸ್ತರಿಸಲಾಗಿದೆ. ಫೆಬ್ರವರಿ 1 ಕ್ಕೆ ಅವಧಿ ಮುಗಿದಿರುವ ದಾಖಲೆಗಳ ಸಿಂಧುತ್ವವನ್ನು 30 ಜೂನ್ 2021 ರವರೆಗೆ ವಿಸ್ತರಿಸಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.