Driving Licence, RC ಎಕ್ಸ್ಪೈರ್ ಆಗಿದೆಯಾ? ಚಿಂತೆ ಬೇಡ, ಸರ್ಕಾರದಿಂದ ಭಾರಿ ನೆಮ್ಮದಿಯ ಸುದ್ದಿ ಪ್ರಕಟ

Driving Licence Renewal: ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸನ್ಸ್, ಕಾರ್ ನ ಫಿಟ್ನೆಸ್ ಸರ್ಟಿಫಿಕೆಟ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC) ಅಥವಾ ಪರ್ಮಿಟ್ ಎಕ್ಸ್ಪೈರ್ ಆಗಿದ್ದರೆ ಅಥವಾ ಎಕ್ಸ್ಪೈರ್ ದಿನಾಂಕ ಸಮೀಪಿಸುತ್ತಿದ್ದರೆ, ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಸರ್ಕಾರ ಅವುಗಳ ಸಿಂಧುತ್ವವನ್ನು ಜೂನ್ 30, 2021ರವರೆಗೆ ವಿಸ್ತರಿಸಿದೆ.

Written by - Nitin Tabib | Last Updated : Mar 26, 2021, 02:16 PM IST
  • RC, DL ಇತ್ಯಾದಿ ಸರ್ಟಿಫಿಕೆಟ್ ಗಳ ಸಿಂಧುತ್ವ ಜೂನ್ 30, 2021ರವರೆಗೆ ವಿಸ್ತರಣೆ.
  • ಇದಕ್ಕೂ ಮೊದಲು ಅವುಗಳ ಸಿಂಧುತ್ವವನ್ನು ಮಾರ್ಚ್ 31, 2021ರವರೆಗೆ ವಿಸ್ತರಿಸಲಾಗಿತ್ತು.
  • ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.
Driving Licence, RC ಎಕ್ಸ್ಪೈರ್ ಆಗಿದೆಯಾ? ಚಿಂತೆ ಬೇಡ, ಸರ್ಕಾರದಿಂದ ಭಾರಿ ನೆಮ್ಮದಿಯ ಸುದ್ದಿ ಪ್ರಕಟ title=
Driving Licence Renewal (File Phot)

ನವದೆಹಲಿ: Driving Licence Renewal: ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸನ್ಸ್, ಕಾರ್ ನ ಫಿಟ್ನೆಸ್ ಸರ್ಟಿಫಿಕೆಟ್ (Fitness Certificate), ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (Registration Certificate) ಅಥವಾ ಪರ್ಮಿಟ್ (Permit) ಎಕ್ಸ್ಪೈರ್ ಆಗಿದ್ದರೆ ಅಥವಾ ಎಕ್ಸ್ಪೈರ್ ದಿನಾಂಕ ಸಮೀಪಿಸುತ್ತಿದ್ದರೆ, ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಸರ್ಕಾರ ಅವುಗಳ ಸಿಂಧುತ್ವವನ್ನು ಜೂನ್ 30, 2021ರವರೆಗೆ ವಿಸ್ತರಿಸಿದೆ. ರಸ್ತೆ ಮತ್ತು ಸಾರಿಕೆ ಸಚಿವಾಲಯ ಈ ಕುರಿತು ಆದೇಶವೊಂದನ್ನು ಹೊರಡಿಸಿದೆ.

ಜೂನ್ 30ರವರೆಗೆ DL, RCಗಳ ಸಿಂಧುತ್ವ ಮುಂದುವರೆಯಲಿದೆ
ಸರ್ಕಾರದ ವತಿಯಿಂದ ಜಾರಿಗೊಳಿಸಲಾಗಿರುವ ಆದೇಶದಲ್ಲಿ ದೇಶಾದ್ಯಂತ ಮತ್ತೆ ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಫೆಬ್ರವರಿ 1, 2020ರ ಬಳಿಕ ಎಕ್ಸ್ಪೈರ್ ಆಗಿರುವ ಹಾಗೂ ಕೊರೊನಾ ಮಹಾಮಾರಿ ಅಥವಾ ಲಾಕ್ ಡೌನ್ ಕಾರಣ ರಿನ್ಯುವಲ್ ಆಗಿರದ ಈ ಎಲ್ಲಾ ವಿಧದ ಸರ್ಟಿಫಿಕೆಟ್ ಗಳ ಸಿಂಧುತ್ವವನ್ನು ಜೂನ್ 30, 2021ರವರೆಗೆ ವಿಸ್ತರಿಸಲಾಗಿದೆ ಎಂದು ಈ ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ - New Driving Licence: 'ಹೊಸ ಡ್ರೈವಿಂಗ್ ಲೈಸೆನ್ಸ್' ಗಾಗಿ ಅರ್ಜಿ ಸಲ್ಲಿಸುವವರೇ ದಯವಿಟ್ಟು ಗಮನಿಸಿ!

ಎಲ್ಲಾ ರಾಜ್ಯಗಳಿಗೆ ಆದೇಶ ಜಾರಿ
ಈ ಕುರಿತು ಎಲ್ಲಾ ರಾಜ್ಯಗಳ ಆಡಳಿತಗಳಿಗೆ ನಿರ್ದೇಶನಗಳನ್ನು ರವಾನಿಸಿದ್ದು, ಈ ದಾಖಲೆಗಳನ್ನು ಮಾನ್ಯ ಎಂದು ಪರಿಗಣಿಸಬೇಕು ಎಂದು ಹೇಳಿದೆ. ಇದರಿಂದ ಸಾರಿಗೆಗೆ ಸಂಬಂಧಿಸಿದ ಸೇವೆಗಳಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಕೂಡದು ಎಂದು ಹೇಳಿದಲಾಗಿದೆ. ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ನಿರ್ದೇಶನಗಳನ್ನು ಪಾಲಿಸುವಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಸೂಚಿಸಿದೆ. ಇದರಿಂದ ನಾಗರಿಕರಿಗೆ, ಸಾರಿಗೆ ಸೇವೆ ಸಲ್ಲಿರುವವರಿಗೆ ಹಾಗೂ ಇತರೆ ಸಂಸ್ಥೆಗಳಿಗೆ ಈ ಕಠಿಣ ಪ್ರಸಂಗದಲ್ಲಿಯೂ ಕೂಡ ಸೇವೆ ಸಲ್ಲಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸರ್ಕಾರ ಹೇಳಿದೆ. 

ಇದನ್ನೂ ಓದಿ - Driving License: ಈಗ ಮನೆಯಲ್ಲಿಯೇ ಕುಳಿತು DL ಪಡೆಯಲು ಇಲ್ಲಿದೆ ಸುಲಭ ವಿಧಾನ

ಹೆಚ್ಚಾಗುತ್ತಿರುವ ಕೊರೊನಾ ಮಹಾಮಾರಿಯ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ
ಮಾರ್ಚ್ 24, 2020ರ ಬಳಿಕ ಕೊರೊನಾ ಮಹಾಮಾರಿಯ ಕಾಲದಲ್ಲಿ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆ ಅತ್ಯಾವಶ್ಯಕ ಸರಕುಗಳ ಹಾಗೂ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹಲವು ಬಾರಿ ಅಡ್ವೈಸರಿ ಜಾರಿಗೊಳಿಸಿ, ಫೆಬ್ರವರಿ 2020 ರಲ್ಲಿ ರದ್ದುಗೊಂಡ ಈ ಎಲ್ಲಾ ದಾಖಲೆಗಳ ಸಿಂಧುತ್ವವನ್ನು 31 ಮಾರ್ಚ್ 2021ರವರೆಗೆ ವಿಸ್ತರಿಸಿತ್ತು. ಆದರೆ, ಇದೀಗ ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಸೃಷ್ಟಿಯಾದ ಕಾರಣ ಮತ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂದು ಸಚಿವಾಲಯ ಪುನಃ ಈ ಸಿಂಧುತ್ವವನ್ನು ಜೂನ್ 30, 2021 ರವರೆಗೆ ವಿಸ್ತರಿಸಿದೆ.

ಇದನ್ನೂ ಓದಿ -Indian Driving Licence: ಈ 15 ದೇಶಗಳಲ್ಲಿ ಚಿಂತೆ ಬಿಟ್ಟು ವಾಹನ ಓಡಿಸಿ, ಆದ್ರೆ Indian DL ನಿಮ್ಹತ್ರ ಇರಲಿ

Trending News