ಬಿಹಾರ : ಇಲ್ಲಿನ ಮೋತಿಹಾರಿ ಸಮೀಪದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಬಸ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಹಿಂದೆ 27 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು. ಆದರೆ, ಅದು ಅಧಿಕೃತ ಮಾಹಿತಿಯಲ್ಲ ಎಂದು ಬಿಹಾರ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಇಲಾಖೆ ಸಚಿವ ದಿನೇಶ್ ಚಂದ್ರ ಯಾದವ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಿಹಾರ: ಬಸ್ಸಿನಲ್ಲಿ ಬೆಂಕಿ, 27 ಮಂದಿ ಸಾವು


ಈ ಬಗ್ಗೆ ANI ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅವರು, "ಬಸ್ಸಿನಲ್ಲಿ ಕೇವಲ 13 ಮಂದಿ ಟಿಕೆಟ್ ಕಾಯ್ದಿರಿಸಿದ್ದು, ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 5 ಮಂದಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ಅವರು ಬಹುಶಃ ಘಟನೆ ಸಂದರ್ಭದಲ್ಲಿ ತಾವಾಗಿಯೇ ಸ್ಥಳದಿಂದ ನಿರ್ಗಮಿಸಿರಬಹುದು. ಈ ಘಟನೆಯಲ್ಲಿ  27 ಮಂದಿ ಸಾವನ್ನಪ್ಪಿರುವುದಾಗಿ ನಾನೇ ಹೇಳಿದ್ದೆ. ಆದರೆ ಅ ಮಾಹಿತಿ ತಪ್ಪು. ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಮೃತರ ಸಂಖ್ಯೆಯನ್ನು ಘೋಷಿಸಲಾಗಿತ್ತು" ಎಂದು ಹೇಳಿದ್ದಾರೆ. 



ಬಿಹಾರದ ಮೊತಿಹಾರಿಯ ಬೆಲ್ವಾ ಗ್ರಾಮದ ಬಳಿ NH-28ರಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಚಲಿಸುತ್ತಿದ್ದ ಬಸ್ ಅಪಘಾತಕ್ಕೊಳಗಾಗಿ ಮೊಗುಚಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆಯಲ್ಲಿ 27 ಮಂದಿ ಸಾವನ್ನಪ್ಪಿದ್ದು, ಮೃತ ಕುಟುಂಬಗಳಿಗೆ 4 ಲಕ್ಷ ಪರಿಹಾರ ಧನ ನೀಡಲಾಗುವುದು ಎಂದು ಬಿಹಾರ ಸರ್ಕಾರದ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಇಲಾಖೆ ಸಚಿವ ದಿನೇಶ್ ಚಂದ್ರ ಯಾದವ್ ಅವರೇ ಹೇಳಿದ್ದರು. ಆದರೀಗ ಅದು ತಪ್ಪು ಮಾಹಿತಿ ಎಂದು ತಾವೇ ಸ್ಪಷ್ಟಪಡಿಸಿದ್ದಾರೆ.