ನವದೆಹಲಿ : ಅವರ ಅವರಪ್ಪನಿಂದಲೂ ಕೂಡ ಸ್ವಾಮಿ ರಾಮದೇವ್ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಅವರು ಕೊಲೆಗೆಡುಕ ರಾಮದೇವ್‌, ರಾಮದೇವ್‌ ಅವರನ್ನು ಬಂಧಿಸಿ ಅಂತ ಏನೇ ಮಾಡಿದ್ರು ರಾಮದೇವ್‌ ಟ್ರೆಂಡ್ ಸೃಷ್ಟಿಸುತ್ತಲೇ ಇರುತ್ತಾರೆ ಎಂದು ಯೋಗ ಗುರು ಬಾಬಾ ರಾಮ್‌ದೇವ್‌ ತಿರುಗೇಟು ನೀಡೀದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮಾತಾಡಿದ ಯಾರು ರಾಮ್‌ದೇವ್‌(Baba Ramdev), ಯಾರು ಏನೇ ಮಾಡಲಿ, ನನಗೇನೂ ಬೇಸರವಿಲ್ಲ. ನಮ್ಮ ಜನರು ಅಂತಹ ಪ್ರವೃತ್ತಿಗಳಿಗೆ ಒಗ್ಗಿಕೊಂಡಿದ್ದಾರೆ ಮತ್ತು ನಮ್ಮ ಪ್ರವೃತ್ತಿಗಳು ಯಾವಾಗಲೂ ಉನ್ನತ ಮಟ್ಟವನ್ನು ತಲುಪುತ್ತವೆ ಎಂದಿದ್ದಾರೆ.


ಇದನ್ನೂ ಓದಿ : MP Unlock: ಮಧ್ಯಪ್ರದೇಶವು ಕರೋನಾವನ್ನು ಹೇಗೆ ಮಣಿಸಿತು? ರಹಸ್ಯ ಬಿಚ್ಚಿಟ್ಟ ಸಿಎಂ


ಕೋವಿಡ್‌(COVID)ಗೆ ಪರಿಣಾಮಕಾರಿಯೆಂದು ಹೇಳುವ ಮೂಲಕ ಬಿಡುಗಡೆಯಾಗುತ್ತಿರುವ ಔಷಧಗಳನ್ನು ಸೋಂಕಿತರ ಮೇಲೆ ಪ್ರಯೋಗಿಸಿದ ನಂತರ, ಅವು ಅಷ್ಟು ಪರಿಣಾಮ ಬೀರುತ್ತಿಲ್ಲ ಎಂಬುದಾಗಿ ಹೊರಬರುತ್ತಿರುವ ಅಧ್ಯಯನ ವರದಿಗಳಿಗೆ ಕಿಡಿಕಾರಿದ್ದ ಬಾಬಾ ರಾಮ್‌ದೇವ್‌, ಅಲೋಪಥಿಯ ವಿರುದ್ಧ ಕಿರಿಕಾರಿದ್ದರು. 'ಅಲೋಪಥಿ ಮೂರ್ಖರ ವಿಜ್ಞಾನ' ಎಂದು ಭಾಷಣ ಮಾಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.


LPG Booking ವ್ಯವಸ್ಥೆಯಲ್ಲಿ ಹೊಸ ನಿಯಮ ತರಲು ಸರ್ಕಾರದ ಸಿದ್ಧತೆ


ಇದರಿಂದ ಇಡೀ ವೈದ್ಯಕೀಯ ಲೋಕವೇ ಬಾಬಾ ರಾಮ್‌ದೇವ್‌ ವಿರುದ್ಧ ತಿರುಗಿಬಿದ್ದಿದ್ದು, ಅವರ ವಿರುದ್ಧ ಕೇಸ್‌ ಕೂಡ ದಾಖಲು ಮಾಡಿದ್ದಾರೆ. ಕೆಲವರ ಒತ್ತಡಕ್ಕೆ ಮಣಿದು ರಾಮ್‌ದೇವ್‌ ಅವರು ಕ್ಷಮೆ ಕೋರಿದ್ದರೂ, ಲಿಖಿತವಾಗಿ ಕ್ಷಮೆ ಕೋರುವಂತೆ ವೈದ್ಯರು ಪಟ್ಟುಹಿಡಿದಿದ್ದಾರೆ. ಇವರ ವಿರುದ್ಧ ಒಂದು ಸಾವಿರ ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ(Defamation Case) ದಾಖಲಿಸಿ ಬೆದರಿಕೆ ಹಾಕಿದ್ದು, ಲಿಖಿತ ಕ್ಷಮೆ ಕೋರುವಂತೆ ಹೇಳಿದ್ದಾರೆ.


ಇದನ್ನೂ ಓದಿ : Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ


ಅದೇ ಇನ್ನೊಂದೆಡೆ ಬಾಬಾ ರಾಮ್‌ದೇವ್‌ ವಿರೋಧಿಗಳು #arrestbabaramdev ಚಳವಳಿ ಶುರು ಮಾಡಿದ್ದಾರೆ. ಇದರಿಂದಾಗಿ ಅಲೋಪಥಿ ವೈದ್ಯರು(Allopathy Doctors) ಮತ್ತು ಬಾಬಾ ರಾಮ್‌ದೇವ್‌ ಅವರ ನಡುವಿನ ವಿವಾದ ಮತ್ತಷ್ಟು ವಿರೋಧ ವ್ಯಕ್ತವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.