ಹರಿದ್ವಾರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬಹಿರಂಗವಾಗಿ ಯಾರು ವಿರೋಧಿಸುತ್ತಿಲ್ಲ ಬಹುತೇಕರು ರಾಮನನ್ನು ಆರಾಧಿಸುತ್ತಾರೆ ಎಂದು ತಿಳಿಸಿದರು 


COMMERCIAL BREAK
SCROLL TO CONTINUE READING

ಕೆಲವೇ ಜನರು ರಾಮಮಂದಿರದ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಆದರೆ ಅವರು ಯಾರು ಬಹಿರಂಗವಾಗಿ ಅದರ ವಿರುದ್ದವಾಗಿ ಮಾತನಾಡುತ್ತಿಲ್ಲ.ಏಕೆಂದರೆ, ಬಹುತೇಕ ಹಿಂದೂ ಸಮುದಾಯವು ರಾಮನನ್ನು ದೇವರು ಎಂದು ಪರಿಗಣಿಸಿದ್ದಾರೆ ಎಂದು ಅವರು ತಿಳಿಸಿದರು. ಯೋಗ ಗುರು ಬಾಬಾ ರಾಮ್ ದೇವ್ ರ ಉಪಸ್ಥಿತಿಯಲ್ಲಿ ಪತಂಜಲಿ ಯೋಗಪೀಠದಲ್ಲಿ ನಡೆದ ಸಮಾರಂಭದಲ್ಲಿ ಭಾಗವತ್ ಮಾತನಾಡಿದರು.


ಸುದೀರ್ಘ ಕಾಲದಿಂದ  ರಾಮ ಮಂದಿರ ವಿವಾದವು ಸುಪ್ರೀಂಕೋರ್ಟ್ನಲ್ಲಿ  ತೀರ್ಪು ಬಾಕಿ ಇದೆ ಈಗ ಈ ತೀರ್ಪನ್ನು ಅಕ್ಟೋಬರ್ 29 ರಿಂದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರಿಂಕೋರ್ಟ್ ತಿಳಿಸಿದೆ.