ಮೀಸಲಾತಿ ಕಿತ್ತು ಹಾಕಿದರೆ, ಜನರ ಹಕ್ಕುಗಳನ್ನೇ ಅಪಾಯದಲ್ಲಿಟ್ಟಂತೆ -ಸಾವಿತ್ರಿ ಬಾಯಿ ಫುಲೆ
ನವದೆಹಲಿ: ಪ್ರಜಾಪ್ರಭುತ್ವ ಮತ್ತು ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ತಿಳಿಸಿದರು.
ಮೀಸಲಾತಿ ವಿಚಾರವಾಗಿ ಮಾತನಾಡುತ್ತಾ ತಿಳಿಸಿದ ಅವರು "ಕೆಲವು ಬಾರಿ ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಸ್ಥಗಿತಗೊಳಿಸಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡುವುದಾಗಿ ಎಂದು ಹೇಳುತ್ತದೆ. ಇನ್ನೊಂದೆಡೆ ಸಂವಿಧಾನವನ್ನು ಕೂಡ ರಕ್ಷಿಸುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ " ಎಂದು ತಿಳಿಸಿದರು. ಇನ್ನು ಮುಂದುವರೆದು" ಒಂದು ವೇಳೆ ಮೀಸಲಾತಿಯನ್ನು ವ್ಯವಸ್ಥೆಯನ್ನು ಕಿತ್ತು ಹಾಕಿದರೆ, ಅದು ಜನರ ಹಕ್ಕುಗಳನ್ನು ಅಪಾಯದಲ್ಲಿಟ್ಟಂತೆ " ಎಂದರು
ಈ ಹಿಂದೆ ಸಾವಿತ್ರಿ ಬಾಯಿ ಫುಲೆ ಅವರು ದಲಿತರ ಮನೆಗೆ ಉತ್ತರಪ್ರದೇಶದ ಸಚಿವರು ದಲಿತರ ಮನೆಗೆ ಭೇಟಿ ನಿಡುತ್ತಿರುವುದನ್ನು ಕೇವಲ ನಾಟಕ ಎಂದು ಟಿಕಿಸಿದ್ದರು.