ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪದ ಆಘಾತ: ಎನ್ಸಿಎಸ್ ಹೇಳಿದ್ದೇನು?
ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ (NCS) ನಿರ್ದೇಶಕ ಬಿ.ಕೆ.ಬನ್ಸಾಲ್ ಹೇಳಿದ್ದಾರೆ.
ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದಾಗಿ ಭಯಭೀತರಾಗುವ ಅಗತ್ಯವಿಲ್ಲ ಆದರೆ ಸಿದ್ಧತೆಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ (NCS) ನಿರ್ದೇಶಕ ಬಿ.ಕೆ.ಬನ್ಸಾಲ್ ಹೇಳಿದ್ದಾರೆ.
ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ದೆಹಲಿಯ ಭೂಕಂಪದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ದೆಹಲಿ-ಎನ್‌ಸಿಆರ್‌ನಲ್ಲಿ ಸಣ್ಣಪುಟ್ಟ ಭೂಕಂಪಗಳು ಅಸಾಮಾನ್ಯವಲ್ಲ ಎಂದು ಹೇಳಿದರು.
ದೆಹಲಿ-ಎನ್‌ಸಿಆರ್ (Delhi-NCR)ನಲ್ಲಿ ಭೂಕಂಪದ ಬಗ್ಗೆ ಭಯಪಡುವ ಅಗತ್ಯವಿಲ್ಲ ಆದರೆ ಅಪಾಯವನ್ನು ಕಡಿಮೆ ಮಾಡಲು ಸನ್ನದ್ಧತೆ ಮತ್ತು ತಗ್ಗಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಸ್ಥಳ, ಸಮಯ ಮತ್ತು ಪರಿಮಾಣದ ದೃಷ್ಟಿಯಿಂದ ಭೂಕಂಪಗಳನ್ನು ಖಚಿತವಾಗಿ ಊಹಿಸುವ ಯಾವುದೇ ಸಾಬೀತಾದ ತಂತ್ರಜ್ಞಾನ ಪ್ರಪಂಚದಲ್ಲಿ ಇಲ್ಲ ಎಂದವರು ತಿಳಿಸಿದರು.
2 ತಿಂಗಳಲ್ಲಿ 13 ಬಾರಿ ಭೂಮಿಯ ಕಂಪನ ದೊಡ್ಡ ಭೂಕಂಪದ ಸಂಕೇತವೇ?
ಭೂಕಂಪದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ನಿರ್ಮಾಣ ನಿಯಮಗಳನ್ನು ಪಾಲಿಸುವುದು ಖಚಿತ ಮತ್ತು ದುರ್ಬಲ ಕಟ್ಟಡಗಳನ್ನು ನಿರ್ಮಿಸದಿರುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎನ್‌ಡಿಎಂಎ ರಾಜ್ಯ ಸರ್ಕಾರಗಳನ್ನು ಕೋರಿದೆ.
ಖಾಸಗಿ ಕಟ್ಟಡಗಳನ್ನೂ ಹಂತಹಂತವಾಗಿ ಸುಧಾರಿಸಬೇಕು. ಅಪಾಯದ ರಚನೆಗಳನ್ನು ಗುರುತಿಸಲು ಮತ್ತು ಅವುಗಳಲ್ಲಿ ಅಗತ್ಯ ಸುಧಾರಣೆಗಳನ್ನು ಮಾಡಲು ಇದು ರಾಜ್ಯಗಳಿಗೆ ಸೂಚಿಸಿದೆ.
ಅದೇ ಸಮಯದಲ್ಲಿ ಭೂಕಂಪದ (Earthquake) ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.
ಕರೋನಾ ಕಂಟಕ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 25 ನಿಮಿಷಕ್ಕೆ ಒಂದು ಸಾವು
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಕಂಪದ ಅಪಾಯವನ್ನು ಕಡಿಮೆ ಮಾಡಲು ವಿವಿಧ ಸಿದ್ಧತೆಗಳನ್ನು ಚರ್ಚಿಸಲು ಎನ್‌ಡಿಎಂಎ ಸದಸ್ಯರು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಮಹಾನಿರ್ದೇಶಕರು ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆ ಸೇರಿದ್ದರು.