ನವದೆಹಲಿ: ಕಳೆದ ಎರಡು ತಿಂಗಳಲ್ಲಿ ದೆಹಲಿ-ಎನ್ಸಿಆರ್ (Delhi-NCR) ಪ್ರದೇಶದಲ್ಲಿ ಸುಮಾರು 13 ಬಾರಿ ಭೂಕಂಪನ ಸಂಭವಿಸಿದ್ದು ಇದು ದೊಡ್ಡ ಭೂಕಂಪದ ಸಂಕೇತವೇ ಎಂಬ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಅಂತಹ ಭಯಪಡುವ ಆತಂಕವಿಲ್ಲ ಎಂದಿರುವ ತಜ್ಞರು ಭೂಕಂಪಗಳ ಮುನ್ಸೂಚನೆ ನೀಡಲು ಸಾಧ್ಯವಿಲ್ಲ, ಆದರೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ವಿಪತ್ತು ನಿರ್ವಹಣೆಗೆ ಸೂಕ್ತ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.
ದೆಹಲಿ-ಎನ್ಸಿಆರ್ ಪ್ರದೇಶವು ಭೂಕಂಪನ ಚಟುವಟಿಕೆಗಳಿಗೆ ಬಹಳ ಸೂಕ್ಷ್ಮವಾಗಿದೆ. ಭೂಕಂಪಗಳಿಗೆ ಕಾರಣವಾಗುವ ಅನೇಕ 'ದೋಷ ರೇಖೆಗಳು' ಭೂಮಿಯಲ್ಲಿವೆ. ಆದರೆ ಈ ಸ್ಥಳವು ಅಫ್ಘಾನಿಸ್ತಾನದ ಹಿಂದೂಕುಶ್ ಶ್ರೇಣಿಗಳಲ್ಲಿ ಮತ್ತು ನೇಪಾಳದ ಭೂಕಂಪಗಳ ಪರಿಣಾಮಗಳನ್ನು ಸಹ ಅನುಭವಿಸುತ್ತದೆ.
ಭಾರತ ಹವಾಮಾನ ಇಲಾಖೆಯ ಭೂವಿಜ್ಞಾನ ಮತ್ತು ಭೂಕಂಪ (Earthquake) ಅಪಾಯದ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥ ಎ.ಕೆ.ಸುಕ್ಲಾ ಅವರ ಪ್ರಕಾರ 1720 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ದೊಡ್ಡ ಭೂಕಂಪನವು 6.5 ತೀವ್ರತೆಯನ್ನು ಹೊಂದಿತ್ತು. ಈ ಪ್ರದೇಶದ ಕೊನೆಯ ದೊಡ್ಡ ಭೂಕಂಪನವು 1956 ರಲ್ಲಿ ಬುಲಂದ್ಶಹರ್ ಬಳಿ ಸಂಭವಿಸಿದ್ದು ಅದರ ತೀವ್ರತೆಯು 6.7 ರಷ್ಟಿತ್ತು.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪ
ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಮಹೇಂದ್ರಗಢ- ಡೆಹ್ರಾಡೂನ್ ದೋಷ ರೇಖೆಯಂತೆ ಅನೇಕ ದೋಷ ರೇಖೆಗಳು ಇರುವುದರಿಂದ ಇತ್ತೀಚಿನ ಭೂಕಂಪವು ಅಸಾಮಾನ್ಯ ವಿದ್ಯಮಾನವಲ್ಲ ಎಂದು ಶುಕ್ಲಾ ಹೇಳಿದ್ದಾರೆ. ಮಥುರಾ, ಮೊರಾದಾಬಾದ್ ಮತ್ತು ಸೊಹ್ನಾದಲ್ಲಿ ದೋಷಗಳಿವೆ. ದೆಹಲಿ-ಎನ್ಸಿಆರ್ನಲ್ಲಿ ಇತ್ತೀಚೆಗೆ ದಾಖಲಾದ ಎಲ್ಲಾ 13 ಭೂಕಂಪಗಳು ಕಡಿಮೆ ಮತ್ತು ಮಧ್ಯಮ ತೀವ್ರತೆಯನ್ನು ಹೊಂದಿವೆ. ಅವುಗಳನ್ನು ಏಪ್ರಿಲ್ 12 ರಿಂದ ಜೂನ್ 3 ರವರೆಗೆ ದಾಖಲಿಸಲಾಗಿದೆ. ಅವುಗಳ ತೀವ್ರತೆಯು 1.8 ರಿಂದ 4.5 ರವರೆಗೆ ಇರುತ್ತದೆ (ರೋಹ್ಟಕ್ನಲ್ಲಿ) ಎಂದು ಅವರು ವಿವರಿಸಿದರು.
ಆಗ್ನೇಯ ಟರ್ಕಿಯಲ್ಲಿ 5.0 ತೀವ್ರತೆಯ ಭೂಕಂಪ
ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ನ ಜಿಯೋಡೈನಾಮಿಕ್ಸ್ ವಿಭಾಗದ ಪ್ರಾಧ್ಯಾಪಕ ಸಿ.ಪಿ.ರಾಜೇಂದ್ರನ್ ಮಾತನಾಡಿ, ದೆಹಲಿಯು ಕೆಲವು ಸಮಯದಿಂದ 4.5 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪವನ್ನು ಎದುರಿಸಿಲ್ಲ. ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿರುವ ದೆಹಲಿ-ಎನ್ಸಿಆರ್ನಲ್ಲಿ ದೊಡ್ಡ ಭೂಕಂಪನ ಸಂಭವ ಕಡಿಮೆ ಇದೆ ಎಂದು ಹೇಳಿದರು. "ದೆಹಲಿ-ಎನ್ಸಿಆರ್ನಲ್ಲಿ ಭೂಕಂಪವು ಹೊಸ ವಿಷಯವಲ್ಲ. ಏಕೆಂದರೆ ಅದರ ಅಡಿಯಲ್ಲಿ ಅನೇಕ ದೋಷ ರೇಖೆಗಳಿವೆ. ಕಳೆದ ಎರಡೂವರೆ ತಿಂಗಳುಗಳಲ್ಲಿ ಭೂಕಂಪನ ಮಾದರಿಯನ್ನು ನೋಡಿದರೆ ಮೇ 29 ರಂದು (ರೋಹ್ಟಕ್ನಲ್ಲಿ) ಗರಿಷ್ಠ ತೀವ್ರತೆ 4.5 ದಾಖಲಾಗಿತ್ತು ಎಂದರು.
ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್ನಲ್ಲಿ ಭೂಕಂಪ
ದೆಹಲಿಯು ನೂರಾರು ಕಿ.ಮೀ ಉದ್ದದ ದೋಷ ರೇಖೆಯನ್ನು ಹೊಂದಿಲ್ಲ, ಏಕೆಂದರೆ ನಾವು ಇಲ್ಲಿ ಹಿಮಾಲಯನ್ ಶ್ರೇಣಿಗಳನ್ನು ಹೊಂದಿದ್ದೇವೆ ಮತ್ತು ಭೂಕಂಪನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸ್ಥಳೀಯ ದೋಷ ರೇಖೆಗಳಿವೆ ಮತ್ತು ಅವು ಭೂಕಂಪಗಳ ರೂಪದಲ್ಲಿ ಒತ್ತಡವನ್ನು ತೆಗೆದುಕೊಳ್ಳುತ್ತವೆ ಎಂದು ರಾಜೇಂದ್ರನ್ ವಿವರಿಸಿದರು.
ದೆಹಲಿಯ ಸುತ್ತಮುತ್ತಲಿನ ದೋಷ ರೇಖೆಯ ವ್ಯವಸ್ಥೆಯಲ್ಲಿ ನಗರದಲ್ಲಿ 6 ರಿಂದ 6.5 ರಷ್ಟು ತೀವ್ರತೆಯ ಭೂಕಂಪ ಸಂಭವಿಸಬಹುದು. ಆದರೆ ಇದು ಸ್ಥಳೀಯ ವ್ಯವಸ್ಥೆಯ ಸಾಮರ್ಥ್ಯವನ್ನು ಮಾತ್ರ ತೋರಿಸುತ್ತದೆ ಎಂದು ಶುಕ್ಲಾ ಹೇಳಿದ್ದಾರೆ. ಭೂಕಂಪವನ್ನು ಊಹಿಸಲು ಯಾವುದೇ ವೈಜ್ಞಾನಿಕ ತಂತ್ರಗಳಿಲ್ಲದ ಕಾರಣ ಅಂತಹ ಭೂಕಂಪವು ತಕ್ಷಣ ಬರುತ್ತದೆ ಎಂದು ಇದರ ಅರ್ಥವಲ್ಲ ಎಂದು ಅವರು ಹೇಳಿದರು.
ನಗರದ 'ಸೀಸ್ಮಿಕ್ ಮೈಕ್ರೊಜೋನೇಷನ್' ಮಾಡುವ ತಂಡದಲ್ಲಿ ಭಾಗಿಯಾಗಿರುವ ಶುಕ್ಲಾ, ದೆಹಲಿಯ 30 ಪ್ರತಿಶತ ವಲಯ ಐದನೇ ಸ್ಥಾನದಲ್ಲಿದ್ದರೆ, ಉಳಿದ ಭಾಗ ನಾಲ್ಕನೇ ವಲಯದಲ್ಲಿ ಬರುತ್ತದೆ ಎಂದು ಹೇಳಿದರು. ಭೂಕಂಪ ಪೀಡಿತ ಪ್ರದೇಶವನ್ನು ವಿವಿಧ ವಲಯಗಳಾಗಿ ವಿಭಜಿಸುವ ಪ್ರಕ್ರಿಯೆ ಭೂಕಂಪನ ಮೈಕ್ರೊಜೋನೇಷನ್.
ಇಡೀ ಭಾರತದ ಸ್ಥೂಲ ಭೂಕಂಪನ ವಲಯ ನಕ್ಷೆಯ ಪ್ರಕಾರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇಡೀ ದೇಶವನ್ನು ವಲಯ ಐದು (ಹೆಚ್ಚಿನ ತೀವ್ರತೆ) ಯಿಂದ ವಲಯ 2 (ಕಡಿಮೆ ತೀವ್ರತೆ) ವರೆಗೆ ನಾಲ್ಕು ದೊಡ್ಡ ಗುಂಪುಗಳಾಗಿ ವಿಂಗಡಿಸಿದೆ.
ಐಐಟಿ ಗುವಾಹಟಿ ನಿರ್ದೇಶಕ ಟಿ.ಜಿ.ಸೀತಾರಾಮ್ ಮಾತನಾಡಿ ಮುಖ್ಯ ಬೌಂಡರಿ ಥ್ರಸ್ಟ್ (ಎಂಬಿಟಿ) ಯಿಂದ ದೆಹಲಿಗೆ ಹತ್ತಿರದ ಸ್ಥಳವು ಸುಮಾರು 200 ಕಿ.ಮೀ. MBT ಎಂಬುದು ಸೆನೋಜೋಯಿಕ್ ಅವಧಿಯಲ್ಲಿ ಹಿಮಾಲಯದ ಶ್ರೇಣಿಗಳಲ್ಲಿನ ಭೌಗೋಳಿಕ ಬದಲಾವಣೆಯಾಗಿದೆ. "ಆದರೆ ಏಳು ತೀವ್ರತೆಯ ಭೂಕಂಪನ ಸಂಭವವಿದೆ" ಎಂದು ಹೇಳಿದರು. ಆದರೆ ಯಾವುದನ್ನೂ ನಿರಾಕರಿಸಲಾಗುವುದಿಲ್ಲ. ಅದು ಯಾವಾಗ ಬರುತ್ತದೆ ಎಂದು ಯಾರೂ ಹೇಳಲಾರರು. ಜನರಿಗೆ ಅರಿವು ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎಂಬುದನ್ನು ಅವರು ಒತ್ತಿ ಹೇಳಿದರು.