ನವದೆಹಲಿ: ಕರೋನವೈರಸ್ ದೇಶದಲ್ಲಿ  'ಸಮುದಾಯ ಪ್ರಸರಣ'ದ ಹಂತ ತಲುಪುವ ವರದಿಗಳನ್ನು ಭಾರತೀಯ ವೈದ್ಯಕೀಯ ಸಂಘ  ನಿರಾಕರಿಸಿದೆ. ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಐಎಂಎ (IMA) ತಿಳಿಸಿದೆ. ಈ ವಿಷಯದಲ್ಲಿ ಅಧಿಕೃತ ದತ್ತಾಂಶವನ್ನು ಬಿಡುಗಡೆ ಮಾಡುವುದು ಸರ್ಕಾರಿ ಸಂಸ್ಥೆಗಳ ಕೆಲಸ ಎಂದು ಸಂಸ್ಥೆ ಹೇಳಿದೆ. ಐಎಂಎ ಪ್ರಕಾರ, ಕ್ರೌಡ್ ಸೋರ್ಸಿಂಗ್ ಡೇಟಾ ಒಂದು ಸಣ್ಣ ವಿಷಯ, ಸರ್ಕಾರದ ಅಧಿಕೃತ ದತ್ತಾಂಶಕ್ಕಿಂತ ಇದಕ್ಕೆ ಆದ್ಯತೆ ನೀಡಲಾಗುವುದಿಲ್ಲ.


COMMERCIAL BREAK
SCROLL TO CONTINUE READING

ಐಎಂಎ ಅಧ್ಯಕ್ಷ ಡಾ.ರಾಜನ್ ಶರ್ಮಾ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಆರ್. ವಿ. ಅಶೋಕನ್ ದೇಶದಲ್ಲಿ ಕರೋನಾವೈರಸ್ ಸಮುದಾಯ ಪ್ರಸರಣದ ಹಂತವನ್ನು ತಲುಪಿಲ್ಲ ಎಂದು  ಹೇಳಿಕೆ ನೀಡಿದ್ದಾರೆ. ಈ ಜಾಗತಿಕ ಕರೋನಾ ಸಾಂಕ್ರಾಮಿಕದ ನಿಖರ ಸ್ಥಿತಿಯನ್ನು ಕಂಡುಹಿಡಿಯುವುದು ಸರ್ಕಾರದ ಕೆಲಸ. ಒಬ್ಬ ವ್ಯಕ್ತಿಯು ಈ ವಿಷಯದಲ್ಲಿ ಊಹೆಯನ್ನು ನೀಡುತ್ತಿದ್ದರೆ, ಅದನ್ನು ಅವನ ವೈಯಕ್ತಿಕ ಅಭಿಪ್ರಾಯವೆಂದು ಮಾತ್ರ ಪರಿಗಣಿಸಬೇಕು. ಅದರ ಪರವಾಗಿ ಸಂಗ್ರಹಿಸಲಾದ ಕ್ರೌಡ್ ಸೋರ್ಸಿಂಗ್ ಡೇಟಾವು ಯಾವುದೇ ಸಂದರ್ಭಗಳಲ್ಲಿ ಸರ್ಕಾರದ ಡೇಟಾವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.


ಮಾನ್ಸೂನ್, ಚಳಿಗಾಲದಲ್ಲಿ ಕರೋನಾ ಹೆಚ್ಚಾಗುವ ಸಾಧ್ಯತೆ: IIT, ಏಮ್ಸ್ ಸಂಶೋಧನೆ


ಪ್ರಸ್ತುತ ದೊಡ್ಡ ನಗರಗಳು ಮಾತ್ರ ಕೊರೊನಾವೈರಸ್ (Coronavirus)  ಸಮೂಹಗಳಾಗಿ ಉಳಿದಿವೆ ಮತ್ತು ಗ್ರಾಮಾಂತರ ಪ್ರದೇಶಗಳು ಇನ್ನೂ ಸಾಂಕ್ರಾಮಿಕ ರೋಗದಿಂದ ಬಳಲುತ್ತಿಲ್ಲ ಎಂಬುದು ಸರ್ಕಾರದ ಮಾಹಿತಿಯಿಂದ ಸ್ಪಷ್ಟವಾಗಿದೆ ಎಂದು ಐಎಂಎ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ ಎಂಬ ಸಂಪೂರ್ಣ ಭರವಸೆ ಸಂಸ್ಥೆಗೆ ಇದೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.


ಐಎಂಎ ಆಸ್ಪತ್ರೆ ಮಂಡಳಿಯ ಅಧ್ಯಕ್ಷ ಡಾ.ವಿ.ಕೆ. ಮೊಂಗಾ ದೇಶದಲ್ಲಿ ಕರೋನಾ ಕೋವಿಡ್ -19 (Covid-19)  ಸೋಂಕು ವೇಗವಾಗಿ ಹೆಚ್ಚುತ್ತಿದೆ ಮತ್ತು ಪ್ರತಿದಿನ 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬರುತ್ತಿವೆ. ಇದು ಹೀಗೇ ಮುಂದುವರೆದರೆ ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರೋನದ ಹರಡುವಿಕೆಯನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ಎಂದು ಎರಡು ದಿನಗಳ ಹಿಂದೆ ಹೇಳಿದ್ದರು.


ಕರೋನಾ: ಈ ನಗರಗಳಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್


ದೆಹಲಿಯಲ್ಲಿ ವೇಗವಾಗಿ ಹರಡುತ್ತಿದ್ದ ಕರೋನಾವೈರಸ್ ಅನ್ನು ನಿಲ್ಲಿಸಲು ಸಾಧ್ಯವಾಯಿತು. ಆದರೆ ಮಹಾರಾಷ್ಟ್ರ, ಕೇರಳ, ಗೋವಾ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಇದು ಹೇಗೆ ಸಾಧ್ಯ. ಅಲ್ಲಿ ಹೊಸ ಹಾಟ್‌ಸ್ಪಾಟ್‌ಗಳನ್ನು ರಚಿಸಬಹುದು. ಇದನ್ನು ಕೇಂದ್ರೀಕರಿಸಲು ಮತ್ತು ನಿಲ್ಲಿಸಲು ರಾಜ್ಯ ಸರ್ಕಾರಗಳು ಕೇಂದ್ರದ ಸಹಾಯವನ್ನು ಪಡೆಯಬೇಕು.


ಈ ರೋಗವನ್ನು ತಡೆಗಟ್ಟಲು ಕೇವಲ ಎರಡು ಮಾರ್ಗಗಳಿವೆ. ಮೊದಲನೆಯದಾಗಿ ಜನಸಂಖ್ಯೆಯ 70 ಪ್ರತಿಶತವು ಸಾಂಕ್ರಾಮಿಕಕ್ಕೆ ಒಳಗಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಎರಡನೆಯದಾಗಿ ಅದರ ಔಷಧಿ ಮಾರುಕಟ್ಟೆಯಲ್ಲಿ ಬರಬೇಕು ಎಂದವರು ತಿಳಿಸಿದ್ದಾರೆ.